ವಾಟ್ಸಾಪ್ ಕಥೆ 54 : ಪರಸ್ಪರ ಕಾಳಜಿ.
ಜಪಾನ್ ದೇಶದಲ್ಲಿ ಬಹುತೇಕರು ಮನೆಗಳನ್ನು ಮರಮುಟ್ಟುಗಳಿಂದಲೇ ಕಟ್ಟಿಕೊಳ್ಳುತ್ತಾರೆ. ಒಬ್ಬವ್ಯಕ್ತಿ ತಾನು ಮನೆ ನಿರ್ಮಿಸಿದ ಐದುವರ್ಷಗಳ ನಂತರ ಅದನ್ನು ಸ್ವಲ್ಪ ನವೀಕರಣ ಮಾಡೋಣವೆಂದು ಆಲೋಚಿಸಿದ. ಅದಕ್ಕೆ ಬೇಕಾದ ಪರಿಕರಗಳನ್ನು ಹೊಂದಿಸಿಕೊಳ್ಳಹತ್ತಿದ. ಕೆಲಸ ಪ್ರಾರಂಭ ಮಾಡುವಾಗ ಹಳೆಯ ಮರಗಳನ್ನು ಜೋಡಿಸಿದ್ದ ಭಾಗಗಳನ್ನು ಬಿಡಿಸತೊಡಗಿದ. ಅವನಿಗೆ ಅಲ್ಲಿ ಒಂದು ಹಲ್ಲಿ ಕಾಣಿಸಿತು. ಅದು ಚಲಿಸದೆ ಇದ್ದಲ್ಲೇ ಇತ್ತು. ಆದರೆ ಜೀವಂತವಾಗಿತ್ತು. ಅದೇಕೆ ಚಲಿಸುತ್ತಿಲಲ್ಲವೆಂದು ಪರೀಕ್ಷಿಸಿದಾಗ ಅದರ ಒಂದು ಕಾಲಿಗೆ ಮೊಳೆ ಹೊಡೆದಿತ್ತು. ಹಾಗಾಗಿ ಇದ್ದಲ್ಲೇ ಸಿಕ್ಕಿಬಿದ್ದಿತ್ತು. ಅವನಿಗೆ ಆ ಹಲ್ಲಿ ಇಷ್ಟು ಕಾಲ ಹೇಗೆ ಆಹಾರವಿಲ್ಲದೆ ಜೀವಂತವಾಗಿದೆಯೆಂದು ಆಶ್ಚರ್ಯವಾಯಿತು. ತಾನು ಮಾಡುತ್ತಿದ್ದ ಕೆಲಸ ಬಿಟ್ಟು ಸ್ವಲ್ಪ ಹೊತ್ತು ಅದನ್ನೇ ಗಮನಿಸತೊಡಗಿದ.
ಸ್ವಲ್ಪ ದೂರದ ಮರದ ಪಟ್ಟಿಯ ಕಡೆಯಿಂದ ಮತ್ತೊಂದು ಹಲ್ಲಿ ಅಲ್ಲಿಗೆ ಬಂದಿತು. ಅದರ ಬಾಯಲ್ಲಿ ಯಾವುದೋ ಕೀಟವನ್ನು ಹಿಡಿದಿತ್ತು. ಹಾಗೇ ನೋಡುತ್ತಿರುವಾಗ ಹೊರಗಿನಿಂದ ಬಂದ ಹಲ್ಲಿ ಸಿಕ್ಕಿಬಿದ್ದಿದ್ದ ಹಲ್ಲಿಯ ಹತ್ತಿರಕ್ಕೆ ಸರಿದು ತನ್ನ ಬಾಯಲ್ಲಿದ್ದ ಕೀಟವನ್ನು ಅದಕ್ಕೆ ತಿನ್ನಲು ಕೊಟ್ಟಿತು. ನಂತರ ಹೊರಟು ಹೋಯಿತು. ಅವನಿಗೆ ಸಿಕ್ಕಿಬಿದ್ದಿದ್ದ ಹಲ್ಲಿ ಇಷ್ಟು ಕಾಲ ಹೇಗೆ ಜೀವವುಳಿಸಿಕೊಂಡಿದೆ ಎಂಬ ಗುಟ್ಟು ಗೊತ್ತಾಯಿತು. ಅವನ ಹೃದಯ ತುಂಬಿಬಂತು.
ಯಕಶ್ಚಿತ್ ಒಂದು ಸಣ್ಣ ಹಲ್ಲಿಯಂತಹ ಪ್ರಾಣಿ ತನ್ನ ಗುಂಪಿನ ಇನ್ನೊಂದು ಹಲ್ಲಿಯನ್ನು ಉಳಿಸಲು ಇಷ್ಟೆಲ್ಲ ಮಾಡುತ್ತಿದೆ. ಉತ್ತಮ ಜೀವಿಗಳಾದ ಮನುಷ್ಯರು ನಾವು ನಮ್ಮ ಜೀವನದ ಅವಧಿಯಲ್ಲಿ ಸಂಕಟದಲ್ಲಿರುವ ಇನ್ನೊಬ್ಬರಿಗೆ ನಮ್ಮ ಕೈಯಲ್ಲಾದ ಕಿಂಚಿತ್ ಸಹಾಯ, ನೆರವು ನೀಡಬೇಕಲ್ಲವೇ. ನೀವೂ ವಿಚಾರಮಾಡಿ. ಇದೇ ಪರಸ್ಪರ ಕಾಳಜಿ. ಇದೇ ಜೀವನ ಧರ್ಮ.
ವಾಟ್ಸಾಪ್ ಕಥೆಗಳು
ಸಂಗ್ರಹ : ಬಿ.ಆರ್ ನಾಗರತ್ನ, ಮೈಸೂರು
ಸರಳವಾಗಿ, ಸುಂದರವಾಗಿ ಜೀವನ ಧರ್ಮದ ಕುರಿತಾದ ಸಂದೇಶ ನೀಡುವ ಕಥೆ ಸೊಗಸಾಗಿ ಹೆಣೆಯಲ್ಪಟ್ಟಿದೆ.
ಧನ್ಯವಾದಗಳು ಪದ್ಮಾ ಮೇಡಂ
ಪ್ರಕಟಣೆಗಾಗಿ ಧನ್ಯವಾದಗಳು ಗೆಳತಿ ಹೇಮಾ
ಉತ್ತಮ ಸಂದೇಶ ವಿರುವ ಕಥೆ
ಧನ್ಯವಾದಗಳು ನಯನ ಮೇಡಂ
ಸೂಕ್ತವಾದ ರೇಖಾಚಿತ್ರದೊಂದಿಗೆ ಚಿಕ್ಕ,ಚೊಕ್ಕ, ಉತ್ತಮ ಸಂದೇಶವುಳ್ಳ ಕಥೆ .
ಇಷ್ಟವಾಯಿತು; ಚಿತ್ರವೂ ಪುಟ್ಟ ಕತೆಯ ಸಂದೇಶವೂ ………..
ಧನ್ಯವಾದಗಳು ಮಂಜು ಸಾರ್..
ಧನ್ಯವಾದಗಳು ಗೆಳತಿ ಹೇಮಾ
ಎಂತಹ ಅದ್ಭುತ
ಮಾನವ ಪ್ರಾಣಿಗಳಿಂದ ಕಲಿಯಬೇಕಾದದ್ದು ಎಷ್ಟೊಂದು
ಧನ್ಯವಾದಗಳು ಗಾಯತ್ರಿ ಮೇಡಂ
ಉತ್ತಮ ಸಂದೇಶಯುಕ್ತ ಕಥೆಗಳಿಗೆ ಸ್ವತ: ಸೂಕ್ತ, ಸುಂದರ ಚಿತ್ರವನ್ನು ಬಿಡಿಸಿ ನಮಗೆ ನೀಡುತ್ತಿರುವ ನಾಗರತ್ನ ಮೇಡಂ ಅವರಿಗೆ ಧನ್ಯವಾದಗಳು.
ಧನ್ಯವಾದಗಳು ಶಂಕರಿ ಮೇಡಂ..