ಬಿಡಿಸಲಾಗದ ಸಂಬಂಧ
ಬೇಸರದ ಕಟ್ಟೆಯೊಡೆದು ಮಾತುಗಳು ಪ್ರವಾಹದ ರೂಪದಲ್ಲಿ ಹೊರಬರಲಿ
ನೇಸರನ ಬೆಳಕಂತೆ ಪ್ರೀತಿ ಪ್ರೇಮ ತುಂಬಿ ಹರಿಯಲಿ
ಮುಗ್ಧ ಮಗುವಿನ ತೊದಲು ನುಡಿಗಳು ಇಲ್ಲದ ಬಿಗುಮಾನ ನೀಗಿಸಲಿ
ದಗ್ಧ ಹೃದಯಗಳ ನೋವು ದೂರವಾಗಿ ಹಾಸ್ಯ ಚಿಲುಮೆ ಚಿಮ್ಮಲಿ
ವಯಸ್ಸಾದಂತೆ ಯಾರು ಎಮ್ಮ ಆಸ್ತಿ ಹಣಕ್ಕೆ ಆಸೆಪಡುವುದಿಲ್ಲ
ಭರವಸೆಯ ಮಾತು ಮೊಗದ ತುಂಬಾ ನಗುವ ಬೇಡುವುದ ಮರೆಯುದಿಲ್ಲ
ಮನಸ್ಸು ಬಿಚ್ಚಿ ಮಾತಾಡಿ ಕಳೆದುಕೊಂಡು ಬಿಡು ಕಹಿ ಗ್ರಹಿಕೆಯ
ಕನಸು ಕಂಡ ಕಂಗಳಲಿ ತುಂಬಲಿಬಿಡು ಸಂತಸದ ಕಣ್ಣೀರ
-ಶರಣಬಸವೇಶ ಕೆ.ಎಂ
ಹೌದು ಅರ್ಥವತ್ತಾದ ಕವಿತಯ ಸಾಲುಗಳು ಮೆಲಕುಹಾಕುವಂತಿವೆ..ಸಾರ್
ಚೆನ್ನಾಗಿವೆ ಸಾಲುಗಳು
ಕವನ ಬಹಳ ಅರ್ಥಪೂರ್ಣವಾಗಿ.ದೆ
ಸುಂದರ ಕವನ….
ಅರ್ಥಪೂರ್ಣ ಸಾಲುಗಳು….
ಮನತಟ್ಟಿದ ಚಂದದ ಸಾಲುಗಳ ಸುಂದರ ಕವಿತೆ.