ಮುಕ್ತಕಗಳು

Share Button

1.
ವಿಜಯ ದಿನವಹುದಿಂದು ಕಾರ್ಗಿಲ್ಲಿನಲಿ ನಡೆದ
ನಿಜ ಸಮರದಲಿ ದೇಶ ಪಡೆದ ಗೆಲುವನ್ನು
ರುಜುವಾತು ಪಡಿಸಿರುವ ದಿಟ್ಟ ಯೋಧರ ಪಡೆಯು
ಅಜರಾಮರವು ಸತ್ಯ – ಬನಶಂಕರಿ

2.
ಹೆತ್ತವರ ದಿನವೆಂದು ಆಚರಣೆ ಮಾಡುತಲಿ
ಮತ್ತವರ ಬಳಿ ಸುಳಿಯದಿರಲದಕ್ಷಮ್ಯ 
ಎತ್ತಿ ಆದರಿಸುತಲಿ ಇಳಿ ಸಂಜೆ ಹೊತ್ತಿನಲಿ
ಕತ್ತಲಲಿ ಬೆಳಕಾಗು  – ಬನಶಂಕರಿ

3.
ಗುರುಗಳಲಿ ಭಯಭಕ್ತಿಯಿರಬೇಕು ಎಂದೆಂದು
ಹಿರಿಯರಲಿ ಗೌರವವು ತಾ ಮೂಡಿ ಮನದಿ
ಸರಿಯಾದ ಪಥದಲ್ಲಿ ಮುನ್ನಡೆವ ಛಾತಿ ಜೊತೆ
ಗುರಿ ಸೇರುವೆವು ಖಚಿತ – ಬನಶಂಕರಿ

4.
ಗಡಗಡನೆ ನಡುಗುತಲಿ ಕೋಪ ತೋರಿದೆ ತಾಯೆ
ಮಡುಗಟ್ಟಿ ನಿಂದಿರುವ ನೋವ ಹೊರಚೆಲ್ಲಿ
ಹಡೆದೊಡಲ ಮಕ್ಕಳಲಿ ಮುನಿಸೇಕೆ ಭೂಮಾತೆ
ಪಿಡಿದು ಪಾಲಿಸು ನಮ್ಮ – ಬನಶಂಕರಿ

5.
ಮಾಡುತಿರೆ ಯೋಗವನು ಎಡೆಬಿಡದೆ ಅನುದಿನವು
ಕಾಡುತಿಹ ರೋಗಗಳು ದೂರವಾಗುವವು
ನೀಡುತಲಿ ನೆಮ್ಮದಿಯ ದೂಡಿ ಮನಚಿಂತೆಗಳ 
ರೂಢಿಸುತ ಸವಿಬಾಳ – ಬನಶಂಕರಿ

-ಶಂಕರಿ ಶರ್ಮ, ಪುತ್ತೂರು

4 Responses

  1. ನಯನ ಬಜಕೂಡ್ಲು says:

    ಸೊಗಸಾಗಿದೆ

  2. ಸೈನಿಕ ರಿಗೊಂದು ಸಲಾಮ್..
    ಹೆತ್ತವರು, ಭೂತಾಯಿ, ಗುರು, ಭೂಮಾತೆ,ಯೋಗ..ವಿಷಯಗಳನ್ನೊಳಗೊಂಡ ಮುಕ್ತ ಗಳು ಅರ್ಥಪೂರ್ಣ ವಾಗಿ ಮೂಡಿಬಂದಿವೆ…ಶಂಕರಿ ಮೇಡಂ ವಂದನೆಗಳು

    • ಶಂಕರಿ ಶರ್ಮ says:

      ಮೆಚ್ಚುಗೆಯ ನುಡಿಗಳಿಗೆ ವಂದನೆಗಳು, ನಾಗರತ್ನ ಮೇಡಂ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: