ಕಾವ್ಯ ಭಾಗವತ : ಕೃಷ್ಣ ನಿರ್ಗಮನ-ಕಲ್ಕ್ಯಾಗಮನ

Share Button

    7. ಪ್ರಥಮ ಸ್ಕಂದ
    ಅಧ್ಯಾಯ 4-5
    ಕೃಷ್ಣ ನಿರ್ಗಮನ-ಕಲ್ಕ್ಯಾಗಮನ


    ದುಷ್ಟ ಸಂಹಾರ
    ಶಿಷ್ಟ ರಕ್ಷಣೆಯ ಮಾಡಿ
    ಭೂಭಾರವನ್ನಿಳಿಸಲು
    ಯಾದವ ಕುಲವೇ ಬಡಿದಾಡಿ
    ನಶಿಸುವಂತೆ ಮಾಡಿ
    ತನ್ನ ಯುಗ ಧರ್ಮದ
    ಕಾಯಕ ಮುಗಿಸಿ
    ನಿರ್ಗಮಿಸಿದ ಕೃಷ್ಣ

    ಮತ್ಯಾವ ರೂಪದಿ ಬಂದು
    ಜಗವನುದ್ಧರಿಸುವನೆಂಬುದನರಿಯದೆ
    ಕಂಗಾಲು ಮನುಕುಲ

    ಧರ್ಮರಾಯನನ್ನುಸರಿಸಿ
    ಸಕಲ ಪಾಂಡು ಕುವರರು
    ಈ ಜಗದ ಮೋಹಪಾಶಂಗಳ
    ತ್ಯಜಿಸಿ
    ಮೊಮ್ಮಗ, ಪರೀಕ್ಷಿತನಿಗೆ
    ರಾಜ್ಯವನ್ನೊಪ್ಪಿಸಿ
    ವನಕೆ ತೆರಳಿದ ನಂತರದಿ
    ಪರೀಕ್ಷಿತನಿಗೆ
    ಕಲ್ಕಿ ದರ್ಶನ

    ಕಲ್ಕಿ, ಈ ಕಾಲದ ಸತ್ಯ
    ಅವನ ನೆಲೆ
    ಈ ನೆಲದಲ್ಲಿ ನಿಶ್ಚಿತ

    ಅವನ ಸಂಹರಿಸುವ
    ಶಕ್ತಿ ಯುಕ್ತಿ
    ಪರೀಕ್ಷಿತನಿಗಿದ್ದರೂ
    ಕಲಿ ಈ ಯುಗದ ಧರ್ಮ
    ಅದು ಭಗವದ್ ಸಂಕಲ್ಪ

    ಕಲಿಯೂ ಈ ಜಗದಲ್ಲಿದ್ದು
    ಬಾಳಬೇಕಿದೆ
    ಎಂದೆನಿಸಿ
    ಕಲಿಗೆ ಹತ್ತು ಆವಾಸಸ್ಥಾನಗಳ
    ಹಂಚಿಕೆ

    ಜೂಜು, ಮದ್ಯಪಾನ, ಪರಸ್ರ್ತೀ ಸಂಗ, ಪ್ರಾಣಿ ಹಿಂಸೆ,
    ಸುಳ್ಳು, ಮದ, ಕಾಮ, ಕ್ರೋಧ
    ವೈರತ್ವ, ಸುವರ್ಣ
    ಇವುಗಳೆಲ್ಲದರಲಿ ಕಲಿಯ ಸ್ಥಾನ,
    ಅವನದೇ ದರ್ಬಾರು
    ಈ ಕಲಿಯುಗದಲಿ
    ಸ್ವಾಸ್ಥ್ಯ ಬೇಕಿದ್ದರೆ
    ಕಲಿ ಆವಾಸ ಸ್ಥಾನಗಳಂ
    ನಿಗ್ರಹಿಸಿ
    ಬದುಕುವುದೇ
    ದೈವ ನಿಯಮ

    ಈ ಕವನ ಸರಣಿಯ ಹಿಂದಿನ ಪುಟ ಇಲ್ಲಿದೆ ;  https://www.surahonne.com/?p=40908
    (ಮುಂದುವರಿಯುವುದು)

    -ಎಂ. ಆರ್.‌ ಆನಂದ, ಮೈಸೂರು

    7 Responses

    1. ನಯನ ಬಜಕೂಡ್ಲು says:

      ತುಂಬಾ ಚೆನ್ನಾಗಿದೆ. ಕೊನೆಯ ಪ್ಯಾರ ಬದುಕನ್ನು ಬಾಳುವ ಸರಿಯಾದ ರೀತಿಯನ್ನು ಸಾರುತ್ತವೆ.

    2. ಕಾವ್ಯಭಾಗವತ…ಬಹಳ ಸುಂದರವಾಗಿ ಮೂಡಿತ್ತಾ ಸಾಗುತ್ತಿದೆ.. ನಿಮ್ಮ ಈ ಪ್ರಯತ್ನ ಕ್ಕೆ ನಮನ ಸಾರ್..

    3. ಶಂಕರಿ ಶರ್ಮ says:

      ಕಲ್ಕ್ಯಾಗಮನ ಕಾವ್ಯ ಭಾಗ ಮನಮುಟ್ಟುವಂತಿದೆ.

    4. ಎಂ. ಆರ್. ಆನಂದ says:

      ಪ್ರಕಟಿಸಿದ ಸುರಹೊನ್ನೆಗೆ ಧನ್ಯವಾದಗಳು

    Leave a Reply

     Click this button or press Ctrl+G to toggle between Kannada and English

    Your email address will not be published. Required fields are marked *

    Follow

    Get every new post on this blog delivered to your Inbox.

    Join other followers: