ಕಾವ್ಯ ಭಾಗವತ : ಭೀಷ್ಮ ನಿರ್ಯಾಣ
5. ಪ್ರಥಮ ಸ್ಕಂದ – ಅಧ್ಯಾಯ-೩
ಭೀಷ್ಮ ನಿರ್ಯಾಣ
ಇಚ್ಚಾ ಮರಣಿಯ
ದೇಹ ತ್ಯಾಗಕ್ಕೂ ಮುಹೂರ್ತ
ನಿಶ್ಚಿತ – ಉತ್ತರಾಯಣ
ಸಕಲ ಜೀವರಾಶಿಗಳ
ನಿಗ್ರಹಿಸಿ, ನಿಯಂತ್ರಿಸುವ
ವಾಸುದೇವನ
ಅಂತಿಮ ದರ್ಶನ
ಚಂಡಮಾರುತದ
ಬಿರುಗಾಳಿಯಿಂದ
ಘರ್ಷಿಸಿ
ಬೆಂಕಿ ಹುಟ್ಟಿಸಿ
ನಶಿಸಿ
ವನವನ್ನು ಸುಟ್ಟ
ಬಿದಿರು ಮಳೆಯ
ಜೂಜಿನಾಟದಲಿ
ದುಷ್ಟ ಕುರುವಂಶವನು
ದಾಳ ಮಾಡಿ
ಅವರ ನಾಶ ಮಾಡಿ
ಭೂಭಾರವನಿಳಿಸಿದ
ಶ್ರೀ ಕೃಷ್ಣನ ದರ್ಶನ
ಜಗಚ್ಚಕ್ಷು ಸೂರ್ಯ
ಜಗದೆಲ್ಲ ಜಲರಾಶಿ
ಕೆರೆ ಕುಂಟೆ ನದಿ ಸಮುದ್ರಗಳಲಿ
ಪ್ರತಿಬಿಂಬಿಸಿಯೂ
ಅದಕಂಟಿಕೊಳ್ಳದೆ
ಉದ್ಧರಿಸುವ ತೆರದಿ
ಸಕಲ ಜೀವಕೋಟಿಯ
ಭಾಗವೇ ಆಗಿ
ನಿರ್ಲಿಪ್ತ ಭಾವದಿಂದ್ಭುಭವಿಸುವ
ಆ ಹರಿಯ ಅಂತಿಮ ದರ್ಶನ
ತನ್ನವರನ್ನೆಲ್ಲ ವಧಿಸಿ
ಯುದ್ಧಗೆದ್ದರೂ
ದುಃಖ ಶಮನವಾಗದ
ಧರ್ಮಜನಿಗೆ,
ಧರ್ಮ ಸೂಕ್ಷ್ಮ ಪಠಣ
ದುಃಖ ಶಮನ
ಸರ್ವೇಂದ್ರಿಯಗಳ
ಹರಿಯಲಿ ನೆಟ್ಟು
ದೇಹಪಂಜರದಿಂ
ಪ್ರಾಣ ಪಕ್ಷಿಯ ವಿಸರ್ಜಿಸಿ,
ಇಚ್ಚಾ ಮರಣಿಯ
ದೇಹ ತ್ಯಾಗಕ್ಕೂ ಮುಹೂರ್ತ
ನಿಶ್ಚಿತ – ಉತ್ತರಾಯಣದಿ
ಈ ಕವನ ಸರಣಿಯ ಹಿಂದಿನ ಪುಟ ಇಲ್ಲಿದೆ : https://www.surahonne.com/?p=40858
(ಮುಂದುವರಿಯುವುದು)
-ಎಂ. ಆರ್. ಆನಂದ, ಮೈಸೂರು
ಭಾಗವತವನ್ನು ಕಾವ್ಯ ಪ್ರಕಾರದಲ್ಲಿ ಒಡಮೂಡಿಸುವ ಪ್ರಕ್ರಿಯೆ ಮನಕ್ಕೆ ಮುದ ತರುವಂತಿದೆ…ನಿಮ್ಮ ಪ್ರಯತ್ನ ಕ್ಕೆ ಅಭಿನಂದನೆಗಳು… ಸರಳೀಕರಿಸಿ ಹೇಳುತ್ತಿರುವ ನಿಮಗೆ ಧನ್ಯವಾದಗಳು
ಚೆನ್ನಾಗಿದೆ
ಚೆನ್ನಾಗಿದೆ.