ಕಾವ್ಯ ಭಾಗವತ : ಗುರುಪುತ್ರ
4. ಪ್ರಥಮ ಸ್ಕಂದ – ಅಧ್ಯಾಯ -೨
ಗುರುಪುತ್ರ
ಅಶ್ವಥ್ಥಾಮ
ಗುರುಪುತ್ರ
ದ್ರೋಣ ತನಯ
ಹದಿನೆಂಟು ಅಕ್ಷೋಹಿಣಿ
ನಿರಪರಾಧಿ
ಉಭಯಪಾಳಯದಲ್ಲಿ
ಸೈನಿಕರ ಸಾವಿಗೆ
ಮಿಡಿಯದ ಮನ
ಮಿತ್ರ ಸುಯೋಧನನ
ತೊಡೆ ಮುರಿದ
ನೋವಿನಾಕ್ರಂದನಕೆ
ಮುನಿದು
ಪಂಚಪಾಂಡವರೆಂದು
ಭ್ರಮಿಸಿ
ಮಲಗಿದ್ದ ಐವರು
ದ್ರೌಪತಿ ಪುತ್ರರ
ವಧಿಸಿ
ಮಹಾಪಾತಕವೆಸಗಿದ
ಬ್ರಾಹ್ಮಣ
ಗುರುಪುತ್ರ ಅಶ್ವತ್ಥಾಮ
ಕ್ರೋಧ ಮಾತ್ಸರ್ಯಗಳ
ಸುಳಿಗೆ ಸಿಕ್ಕ
ಮಹಾ ಬ್ರಾಹ್ಮಣ
ಮತಿಗೆಟ್ಟು
ಎಸಗಿದ
ಮಹಾಪರಾಧವನ್ನು ಮನ್ನಿಸಿ
ಪ್ರಾಣ ಭಿಕ್ಷೆ ನೀಡಿ
ದ್ರೌಪದಿ, ಭೀಮಾರ್ಜುನರು
ಅವನ ನಿಯಂತ್ರಿಸಿ
ಸಂತೈಸಿದ ಪರಿ
ಪಾಂಡವರ ಗುರುಭಕ್ತಿಗೆ,
ಪ್ರೀತಿಗೊಂದು
ಗರಿ
ಈ ಕವನ ಸರಣಿಯ ಹಿಂದಿನ ಪುಟ ಇಲ್ಲಿದೆ : https://www.surahonne.com/?p=40771
(ಮುಂದುವರಿಯುವುದು)-ಎಂ. ಆರ್. ಆನಂದ, ಮೈಸೂರು
ಭಾಗವತವನ್ನು ಸುಲಭ ಗ್ರಾಹ್ಯವಾಗುವಂತೆ ಕಾವ್ಯ ರೂಪದಲ್ಲಿ ಪಡಿಮೂಡಿಸುತ್ತಿರುವ ನಿಮಗೆ ವಂದನೆಗಳು ಸಾರ್
ಬಹಳ ಸರಳರೂಪದಲ್ಲಿ ಪ್ರಸ್ತುತ ಪಡಿಸಿದ್ದೀರಿ. ಚೆನ್ನಾಗಿದೆ.
ಸರಳವಾಗಿ ಮೂಡಿಬರುತ್ತಿರುವ ಕವನ ರೂಪದ ಭಾಗವತವು ಚೆನ್ನಾಗಿದೆ ಸರ್.