ಕಾವ್ಯ ಭಾಗವತ : ಭಗವತ್ ಅವತಾರ
ಪ್ರಥಮಸ್ಕಂದ – ಅಧ್ಯಾಯ – 1
ಭಗವತ್ ಅವತಾರ
ಕೇವಲ ಸತ್ಯಮಯ
ಶುದ್ಧ ಸರ್ವೋತ್ತಮ
ಬ್ರಹ್ಮಾದಿ ಸಕಲ ಪ್ರಕೃತಿ ತತ್ವಗಳ
ಉತ್ಪತ್ತಿಕಾರಕ
ಅನಿರುದ್ಧ ನಾಯಕ
ಅಗೋಚರನಾದ
ಎಲ್ಲ ಸೃಷ್ಟಿ ಲಯಗಳ
ಸೃಷ್ಟಿಸಿದ
ಬೀಜರೂಪಿಯೆ ನಿನ್ನ
ಅವತಾರಗಳ
ಏನೆಂದು ವರ್ಣಿಸಲಿ!
ಮೊದಲ ಸನತ್ಕುಮಾರರಿಂದ
ಕಡೆಯ ಕೃಷ್ಣಬಲರಾಮಾದಿ
ಇಪ್ಪತ್ತೊಂದು
ಅವತಾರಗಳಿರ್ಪ
ನಿನ್ನ ಅವತಾರಗಳೆಂದರೆ
ಅಸಂಖ್ಯ ಸೂರ್ಯಕಿರಣಗಳ,
ಅಸಂಖ್ಯ ನಕ್ಷತ್ರಗಳ,
ಅಂತರಿಕ್ಷದಿ ಬೆಳಗುವ
ಸಕಲ ಜೀವರಾಶಿಗೆ
ಶಾಶ್ವತ ಉಸಿರು,
ದಾಹಕೆ ಜಲಬಿಂದು,
ಹಸಿರಿಗೆ ಫಲಾದಿ
ಆಹಾರಗಳೂ,
ನಿನ್ನವತಾರವಲ್ಲವೆ?
ಭಗವಂತ
ನಿನ್ನವತಾರಗಳ
ಎಣಿಪ
ಶಕ್ತಿ ಎಮಗಿಲ್ಲ,
ಜಗದ ಒಳಿತೆಲ್ಲ
ನಿನ್ನ ವಿಭೂತಿ
ಅಂಶದುದ್ಭವ
ವೆಂಬ ಅರಿವು
ನಮಗಿರಲಿ
ಇಹದೆಲ್ಲ ಜೀವಿಗಳ ಜೀವ,
ಪರಮಾತ್ಮಾ
ನಿನ್ನ ಸಂಕಲ್ಪದಿಂದಲೇ
ಜೀವನ್ಮರಣ,
ಮುಕ್ತಿ ಪ್ರಾಪ್ತಿಗೆ,
ನಿನ್ನ ಚೈತನ್ಯದರಿವಿನ
ಶುದ್ಧನಿರ್ಮಲ
ಭಗವದ್ಭಕ್ತಿಯ
ಪಥದ ಅರಿವು
ಕರುಣಿಸಿ ಉದ್ಧರಿಸು.
ಈ ಕವನ ಸರಣಿಯ ಹಿಂದಿನ ಪುಟ ಇಲ್ಲಿದೆ : https://www.surahonne.com/?p=40745
– (ಮುಂದುವರಿಯುವುದು)
-ಎಂ. ಆರ್. ಆನಂದ, ಮೈಸೂರು
ಭಾಗವತದ ವಿನಯ ಪೂರ್ವ ಕ ಪ್ರಾರಂಭ ನಂತರ.. ಸೃಷ್ಟಿ ಕರ್ತನ..ಕಾರ್ಯ ಬಾಹುಳ್ಯತೆಯ ..ಪ್ರಾರಂಭ… ಚೆನ್ನಾಗಿ ಸಾಗುತ್ತಿದೆ..ಸಾರ್
ವಂದನೆಗಳು
Nice
Thank you
ಭಗವಂತನ ದಿವ್ಯ ಮಹಿಮೆಯನ್ನು ಬಣ್ಣಿಸುವ ಕವನದ ಸಾಲುಗಳು…ಸುಂದರವಾಗಿ ಮೂಡಿಬಂದಿವೆ.
ಧನ್ಯವಾದಗಳು
ಪ್ರಕಟಿಸಿದ ಸುರಹೊನ್ನೆಗೆ ಧನ್ಯವಾದಗಳು.