ವಾಸ್ತವದ ಹೆಜ್ಜೆಗೆ
ಎಷ್ಟು ಗುರುತುಗಳು ನಮ್ಮವು
ಹೆಜ್ಜೆಯೊಂದನ್ನು ಬಿಟ್ಟು
ಎಷ್ಟು ಮಾತುಗಳು ನಮ್ಮವು
ಮನಸು ಕಟ್ಟಿದ್ದನ್ನು ಬಿಟ್ಟು
ಕಳೆದಿದ್ದು ಎಷ್ಟು ದಿನ
ಭುವಿಯ ಮಣ್ಣೊಳಗೆ
ಉಳಿದದ್ದು ಎಷ್ಟು ಕನಸು
ನಮ್ಮ ಕಣ್ಣೊಳಗೆ
ಸಾಲು ಸಾಲು ದಿನಗಳು
ನೂರು ಸಾವಿರ ಕೆಲಸಗಳು
ಸೋಜಿಗ ಸೊಲ್ಲುಗಳ ಮಾತು
ಜೊತೆಗೊಂದಿಷ್ಟು ಹೂ ಮನಸು
ನಿರ್ಭೀತಿ ನಿರ್ಭಾವ ನಮ್ಮ ಜೊತೆ
ಕಲ್ಲು ಕರಗುವ ಪರಿಯಂತೆ
ನಿರ್ಜೀವ ಅನಿಶ್ಚಿತ ನಮ್ಮ
ಸೋಲು ನಡುಗಿಸುವ ಗುರಿಯಂತೆ
ವಾಸ್ತವದ ಹೆಜ್ಜೆ ಗುರುತೆಲ್ಲಿ
ನಮ್ಮ ಹೆಸರಿನಲ್ಲಿ ಉಸಿರಿನಲ್ಲಿ
ನಾಳೆ ನಾಡಿದ್ದಿನ ಹಸಿವೆಯಲ್ಲಿ
ಕೊನೆಗೊಮ್ಮೆ ಸೇರುವ ಮಣ್ಣಿನಲ್ಲಿ……
-ನಾಗರಾಜ ಬಿ.ನಾಯ್ಕ, ಕುಮಟಾ
ಅರ್ಥಗರ್ಭಿತ ಕವನ. ಸುಂದರವಾಗಿದೆ.
ತಮ್ಮ ಅಮೂಲ್ಯ ಸಮಯವನ್ನು ಈ ಕವನವನ್ನು ಓದಲು ತೆಗೆದಿಟ್ಟು ಪ್ರತಿಕ್ರಿಯೆ ನೀಡಿರುತ್ತೀರಿ….. ತಮ್ಮ ಅಭಿಮಾನಕ್ಕೆ ತುಂಬಾ ತುಂಬಾ ಧನ್ಯವಾದಗಳು……..
ಸರಳ. ಸುಂದರ ವಷ್ಟೇಅಲ್ಲ…ಅರ್ಥಪೂರ್ಣ ವಾದ ಕವನ..ಸಾರ್..ಧನ್ಯವಾದಗಳು..
ತಮ್ಮ ಅಮೂಲ್ಯ ಸಮಯವನ್ನು ಓದಿಗಾಗಿ ತೆಗೆದಿಟ್ಟು ಪ್ರತಿಕ್ರಿಯೆ ನೀಡಿರುತ್ತೀರಿ….. ತಮ್ಮ ಅಭಿಮಾನಕ್ಕೆ ತುಂಬಾ ತುಂಬಾ ಧನ್ಯವಾದಗಳು
ಬದುಕು ಬಯಸುವುದು ಗುರುತ ಗುರುತಿನೊಳಗೆ ಬದುಕುವೆವು ನಾವು ವಾಸ್ತವದ ಜೀವನದ ಜೊತೆ ಭವಿಷ್ಯದ ಕನಸು ಕಾಣುತ್ತಾ ಸಾಗುವ ಪರಿ ಅರ್ಥಪೂರ್ಣವಾಗಿದೆ ಗೆಳೆಯ ವಾಸ್ತವದ ಕರಿಬೇವಿನ ನಮಗಿದ್ದಾಗ ಬದುಕು ಸರಿಯಾದ ದಾರಿಯಲ್ಲಿ ಸಾಗುವುದು ಸಾಧ್ಯ ಕನಸುಗಳ ಕಣ್ಣೊಳಗೆ ಬದುಕು ಸುಂದರ ಬನಿಶ್ಚಿತ ಬದುಕಿನಲ್ಲಿ ನಿಶ್ಚಿತ ಗುರಿ ತಲುಪುವಂತೆ ಪ್ರೇರೇಪಿಸುತ್ತದೆ ಈ ಕವನದ ಸಾಲುಗಳು
ಆಪ್ತ ಓದಿಗೆ ಧನ್ಯವಾದಗಳು….. ಜೊತೆಗೆ ಕವನದ ಒಳನೋಟವನ್ನು ಸೂಕ್ಷ್ಮವಾಗಿ ಅಭಿವ್ಯಕ್ತಗೊಳಿಸಿ ನೀಡಿರುವ ಪ್ರತಿಕ್ರಿಯೆಗೆ ತುಂಬಾ ತುಂಬಾ ಧನ್ಯವಾದಗಳು…….
ಅರ್ಥಪೂರ್ಣ ಕವನ.
ಆಪ್ತ ಓದಿಗೆ ಹಾಗೂ ಪ್ರತಿಕ್ರಿಯೆಗೆ ಧನ್ಯವಾದಗಳು ಸರ್…..
ಈ ಕವಿಯ ಹಲವಾರು ಕವಿಗಳನ್ನು ಓದಿರುವೆ. ನಾನು ಪೂರ್ಣ ತೃಪ್ತಿಯನ್ನು ಹೊಂದಿರಲಿಲ್ಲ. ಆದರೆ ಈ ಕವನ ಕನ್ನಡಕ್ಕೆ ಒಬ್ಬ ಉತ್ತಮ ಗುಣಮಟ್ಟದ ಕವಿಯನ್ನು ನೀಡುವ ಭರವಸೆ ಮೂಡಿಸಿದೆ.
ರಾಮಮೂರ್ತಿ ನಾಯಕ.
ಸರ್ ತಮ್ಮ ಅಮೂಲ್ಯ ಸಮಯವನ್ನು ಓದಿಗಾಗಿ ಮೀಸಲಿಟ್ಟಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು….. ಜೊತೆಗೆ ತಾವು ನೀಡಿರುವ ಪ್ರತಿಕ್ರಿಯೆ ನನಗೆ ಪ್ರೇರಣೆಯನ್ನು ನೀಡಿದೆ. ಮತ್ತೊಮ್ಮೆ ತುಂಬಾ ತುಂಬಾ ಧನ್ಯವಾದಗಳು…..
ಕವನದಲ್ಲಿ ಅಡಕಗೊಂಡ ಕಲ್ಪನೆ ಚೆನ್ನಾಗಿದೆ.
ಧನ್ಯವಾದಗಳು ತಮ್ಮ ಓದಿಗೆ……
ಅರ್ಥಪೂರ್ಣ ಕವನ
ತುಂಬಾ ತುಂಬಾ ಧನ್ಯವಾದಗಳು ತಮ್ಮ ಓದಿಗೆ…..
ಕನಸಿನ ಲೋಕ ಆಗುವ ವಾಸ್ತವ ಪ್ರಪಂಚದ ಇಣುಕು ನೋಟ ಸುಂದರವಾಗಿ ಕವಿತೆಯಲ್ಲಿ ಮೂಡಿ ಬಂದಿದೆ
ಧನ್ಯವಾದಗಳು ತಮ್ಮ ಓದಿಗೆ ಹಾಗೂ ಪ್ರತಿಕ್ರಿಯೆಗೆ
ಅರ್ಥಗರ್ಭಿತ, ಸುಂದರ ಕವನ. ವಾಸ್ತವದ ಹೆಜ್ಜೆಗುರುತುಗಳ ಗುರುತಿಸುವಿಕೆ ಸೂಕ್ಷ್ಮವಾಗಿವೆ.
ಧನ್ಯವಾದಗಳು ತಮ್ಮ ಓದಿಗೆ ಹಾಗೂ ಪ್ರತಿಕ್ರಿಯೆಗೆ