ಸಿಕ್ಕಾಗ ಆಡಿಬಿಡೋಣ
ಸಿಕ್ಕಾಗ ಆಡಿಬಿಡೋಣ
ಪ್ರೀತಿಯ ಮಾತುಗಳನ್ನ
ಏಕೆಂದರೆ ಉಸಿರು
ಯಾರದ್ದು ಎಷ್ಟು ಎಂದು
ಅಳೆಯಲು ಸಾಧ್ಯವಿಲ್ಲ
ಅಂತರಂಗದಿ ಕುಳಿತ ಗಾಳಿಯ
ಬಲೂನು ನಮ್ಮ ಜೀವ
ಇಲ್ಲಿ ಮಾತಷ್ಟೇ ಆಪ್ತ
ಜೀವಂತ ನೆನಪೊಳಗೆ
ಒಮ್ಮೊಮ್ಮೆ ನೋಟ
ತುತ್ತು ಹೊಟ್ಟೆಯೊಳಗಿನ
ಹಸಿವು ಗೆದ್ದ ನಗು
ಪುಟ್ಟ ಆಸರೆಗೆ
ಚಿಕ್ಕ ಸಹಾಯಕ್ಕೆ ಕರವ
ಜೋಡಿಸುವ ಕಾಯಕಕ್ಕೆ
ಬೆವರ ಹನಿಗಳ ನಡುವೆ
ಯೋಚನೆಯ ಬಿಂಬ
ಬದುಕು ನೋಡಿದಷ್ಟು
ಚೆಂದ ಆನಂದ
ಅಷ್ಟರೊಳಗೊಂದು ನೋವು
ಸಾವು ಸುತ್ತುವುದು
ತಳವ ಗೊತ್ತಿಲ್ಲದೇ
ಗುರುತಿಲ್ಲದೇ ಹೋಗುವೆವು
ಸೇರುವೆವು ಮಣ್ಣಿನೊಳಗೆ
ಆಡಿ ಬಿಡೋಣ
ಉಳಿದ ಮಾತುಗಳನ್ನ….
-ನಾಗರಾಜ ಬಿ.ನಾಯ್ಕ, ಕುಮಟಾ
Super.
ಧನ್ಯವಾದಗಳು ತಮ್ಮ ಓದಿಗೆ
super
ಧನ್ಯವಾದಗಳು
super
ಧನ್ಯವಾದಗಳು
ಇರುವ ಕ್ಷಣಗಳನ್ನು ಖುಷಿಯಾಗಿ ಕಳೆದುಬಿಡಬೇಕು ಬಚ್ಚಿಟ್ಟ ಮಾತುಗಳಿಗಿಂತ ಬಿಚ್ಚಿಟ್ಟ ಮಾತುಗಳೇ ಜೊತೆಯಾಗಿ ಮನವ ಗೆಲ್ಲುವುದು ಸಾವು ನೋವುಗಳನ್ನು ಗೆಲ್ಲುವುದು ಅಸಾಧ್ಯ ಭಾವನೆಗಳನ್ನ ಹಂಚಿಕೊಂಡು ಹಗುರಾಗುವುದು ಸಾಧ್ಯ ನಕ್ಕು ಜೊತೆಯಾಗಬೇಕು ಈ ಕ್ಷಣಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಗುರುತಿಲ್ಲದೆ ಹೋಗೋ ಮೊದಲು ಒಂದು ಗುರುತು ಮೂಡಿಸಿ ಹೊರಡಬೇಕು ಕವಿತೆಯ ಸಾರ ತುಂಬಾ ಚೆನ್ನಾಗಿದೆ
ಧನ್ಯವಾದಗಳು ತಮ್ಮ ಆಪ್ತ ಓದಿಗೆ ಮತ್ತು ಪ್ರತಿಕ್ರಿಯೆಗೆ
ಎಂಥಾ ಸುಮಧುರ ಭಾವ. ಒಡಲೊಳಗೆ ಸುಂದರ ಜೀವ.
ಧನ್ಯವಾದಗಳು ತಮ್ಮ ಓದಿಗೆ……
ಚಂದದ ಕವಿತೆ. ಕವಿತೆಯ ಆಶಯವನ್ನು ಅಳವಡಿಸಿಕೊಂಡರೆ ಜೀವನದ ಹಾದಿ ಸುಗಮವಾದೀತು.
ಧನ್ಯವಾದಗಳು ತಮ್ಮ ಓದಿಗೆ ಹಾಗೂ ಪ್ರತಿಕ್ರಿಯೆಗೆ……..
ಚಂದದ ಸಾಲುಗಳು. ಬದುಕಿನ ವಾಸ್ತವದ ಅನಾವರಣ
ಧನ್ಯವಾದಗಳು ತಮ್ಮ ಓದಿಗೆ
ಹೌದಲ್ಲ ನೆನ್ನೆ ನೆನ್ನೆ ಗೆ. ಇಂದು ಇಂದಿಗೆ ಇರಲಿ ನಾಳೆಯು ನಾಳೆಗೆ
ಇದೆ ಅಲ್ಲವೇ ಸಂತಸದ ರಹಸ್ಯ
ತಮ್ಮ ಓದಿಗೆ ಹಾಗೂ ಪ್ರತಿಕ್ರಿಯೆಗೆ ಧನ್ಯವಾದಗಳು
ಜೀವನ ಸತ್ಯ
ಧನ್ಯವಾದಗಳು ತಮ್ಮ ಓದಿಗೆ
ಸುಂದರ ಕವನ
ಧನ್ಯವಾದಗಳು ತಮ್ಮ ಓದಿಗೆ……
ಬದುಕಿನ ನಶ್ವರತೆ ಮತ್ತು ಈ ನೈಮಿಷಿಕ ಜೀವನದಲ್ಲಿ ನಾವು ಅಭಿಮುಖಗೊಳ್ಳುವ ವ್ಯಕ್ತಿತ್ವಗಳಿಗೆ ಏನು ಸಂದಬೇಕಾದದ್ದು ಎಂಬುದನ್ನು ಸುಂದರವಾದ ಸಾಲುಗಳ ಮೂಲಕ ವ್ಯಕ್ತಪಡಿಸಿದ್ದೀರಿ …..ಅಭಿನಂದನೆಗಳು ಸರ್
ಧನ್ಯವಾದಗಳು ತಮ್ಮ ಓದಿಗೆ ಹಾಗೂ ಪ್ರತಿಕ್ರಿಯೆಗೆ
ಬಹಳ ಅರ್ಥಪೂರ್ಣ ಕವನ
ಧನ್ಯವಾದಗಳು ತಮ್ಮ ಓದಿಗೆ