ಬೆಳಕು-ಬಳ್ಳಿ

ಭುವಿಗಿಳಿದ ದೇವತೆ

Share Button


ಮಗಳಲ್ಲ ನೀನು ದೇವತೆ
ಹೆಗಲ ಮೇಲೆ ಹೊತ್ತು ಮೆರವಣಿಗೆ ಹೊರಟಿರುವೆ

ಶಾಪವಲ್ಲ ನೀನು ಭರವಸೆ
ಕಂಗಳಲ್ಲಿಟ್ಟು ಜೋಪಾನ ಮಾಡುತ್ತಿರುವೆ

ಅಪಶಕುನವಲ್ಲ ನೀನು ಅದೃಷ್ಟ
ಹೃದಯದಲ್ಲಿಟ್ಟು ಬೆಳಸುತ್ತಿರುವೆ

ದುರಾದೃಷ್ಟವಲ್ಲ ನೀನು ಸೌಭಾಗ್ಯ
ಕಣ್ಣಿಗೆ ಒತ್ತಿಕೊಂಡು ಪೊರೆಯುತ್ತಿರುವೆ

ಕಾಡುವ ಕಷ್ಟವಲ್ಲ ನೀನು ಮಮತೆಯ ಪುತ್ಥಳಿ
ಪ್ರೀತಿ ಮಮಕಾರ ಸುರಿಸಿ ಪೋಷಿಸಿಸುತ್ತಿರುವೆ

ಬೆಂಬಿಡದ ಭೂತವಲ್ಲ ನೀನು ಭೂತಾಯಿ
ತಲೆಯ ಮೇಲಿಟ್ಟು ಮೆರೆದಿರುವೆ

ಆ ಭಗವಂತ ನೀಡಿದ ವರ ನೀನು
ಎನ್ನ ಪುಣ್ಯವ ನೆನೆದು ಸರ್ವಶಕ್ತನಿಗೆ ನಮಿಸಿರುವೆ

-ಕೆ.ಎಂ ಶರಣಬಸವೇಶ
(ಚಿತ್ರ ಕೃಪೆ – ರಾಜಶೇಖರ ತಾಳಿಕೋಟೆ. ಚಿತ್ರ ಕಲಾ ಶಿಕ್ಷಕರು ಉಡುಪಿ ಜಿಲ್ಲೆ)

8 Comments on “ಭುವಿಗಿಳಿದ ದೇವತೆ

  1. ಕೆಲವೆಡೆ ಇಂದಿಗೂ ಹೆಣ್ಣು ಮಗುವನ್ನು ತುಚ್ಛವಾಗಿ ಕಾಣುವ ವಾಸ್ತವಿಕತೆ ನಡುವೆ ಮೂಡಿಬಂದ ಕವನ ಚೆನ್ನಾಗಿದೆ

Leave a Reply to gayathri sajjan Cancel reply

 Click this button or press Ctrl+G to toggle between Kannada and English

Your email address will not be published. Required fields are marked *