ಬೆಳಕು-ಬಳ್ಳಿ

ಹೊಸ ವರುಷ….

Share Button

ಬರುತಿದೆ ನವನೂತನ ವರುಷವು ಭೂಲೋಕಕೆ

ಉರುಳುವ ಕಾಲಕೆ ನೃತ್ಯವ ಮಾಡುತ/
ನೂಪುರ ಮಾಡುವ ಝುಲ್ ಝುಲ್ ನಾದಕೆ/
ನಲಿಯುತ ಕುಣಿಯುತ ಕೇಕೆ ಹಾಕುತ/
ಬರುತಿದೆ ಹೊಸ ವರುಷವು ಭೂಲೋಕಕ್ಕೆ

ದೀಪವ ಹಚ್ಚಿರಿ ಆರತಿ ಬೆಳಗಿರಿ ಕೃತಜ್ಞತೆಯಲ್ಲಿ
ಆಹ್ವಾನಿಸಿರಿ ಪರಮ ಪೂಜ್ಯ ಬಾವನೆಗಳಲ್ಲಿ/
ಹೂಗಳ ಚೆಲ್ಲಿರಿ ಪರಿಮಳ ಪ್ರಸರಿಸಿರಿ ಹರ್ಷದಲ್ಲಿ/
ಆಹ್ವಾನಿಸಿರಿ ಪರಮ ಪೂಜ್ಯ ಭಾವನೆಗಳಲ್ಲಿ/

ಹೊಳೆಯುವ ಮಿನುಗುವ ಉಡುಗೆ ತೊಡುಗೆಗಳಲಿ/
ಮಿನುಗನು ಮೆರುಗನು ಸಿಂಪಡಿಸಿ ಪ್ರಪಂಚಕೆ/
ಮನ ಸೆಳೆಯುವ ಕಣ್ಸೆಳೆಯುವ ವಸ್ತ್ರಾಲಂಕಾರದಲಿ/
ಬರುತಿದೆ ಹೊಸ ವರುಷವು ಭೂಲೋಕಕ್ಕೆ

ಭಗವಂತನ ಕೃಪೆಗೆ ಶಿರಬಾಗಿ ಕೈಜೋಡಿಸಿ ನಮಿಸುವ
ಬೇದಭಾವಗಳಿಲ್ಲದೆ ಭಿನ್ನಾಭಿಪ್ರಾಯವಿಲ್ಲದೆ ಬಾಳುವ
ಯಾವ ಕಲಹ ಕೋಲಾಹಲವಿಲ್ಲದೆ ಒಂದಾಗಿ ಇರುವ/
ಪರಮಾತ್ಮನ ದಯೆಗೆ ಮಾನವೀಯತೆಯಲ್ಲಿ ಬದುಕುವ

ಸುಖ ಶಾಂತಿ ನೆಮ್ಮದಿ ಸದಾ ತುಳುಕುತಿರಲಿ/
ಸಂತಸ ಸಂತೋಷ ಸದಾ ನಿಮ್ಮದಾಗಿರಲಿ/
ಯಶಸ್ಸು ನಿಮ್ಮ ಬದುಕಲ್ಲಿ ವಿಪುಲವಾಗಿರಲಿ/
ನಿಮ್ಮ ಬಾಳು ಹಸನಾಗಿರಲಿ ಸುಗಮವಾಗಿರಲಿ/

-ಆಶಾ ಮತ್ತು ರಾಮ್

4 Comments on “ಹೊಸ ವರುಷ….

  1. ಸುಂದರ ಹಾರೈಕೆ ಜೊತೆಗೆ ಉತ್ತಮ ಸಂದೇಶ ಹೊತ್ತ ಕವನ.

  2. ಭೂಲೋಕಕ್ಕೆ ಆಗಮಿಸುವ ಹೊಸ ವರುಷವನ್ನು ಸಂಭ್ರಮದಿಂದ ಸ್ವಾಗತಿಸುವ ಸುಂದರ ಕವನ

  3. ಹೊಸ ವರುಷದ ಆಗಮನಕ್ಕೆ ಸದಾಶಯ ಹೊತ್ತ ಚಂದದ ಕವಿತೆ.

Leave a Reply to ನಯನ ಬಜಕೂಡ್ಲು Cancel reply

 Click this button or press Ctrl+G to toggle between Kannada and English

Your email address will not be published. Required fields are marked *