ಹೊಸ ವರುಷ….
ಬರುತಿದೆ ನವನೂತನ ವರುಷವು ಭೂಲೋಕಕೆ
ಉರುಳುವ ಕಾಲಕೆ ನೃತ್ಯವ ಮಾಡುತ/
ನೂಪುರ ಮಾಡುವ ಝುಲ್ ಝುಲ್ ನಾದಕೆ/
ನಲಿಯುತ ಕುಣಿಯುತ ಕೇಕೆ ಹಾಕುತ/
ಬರುತಿದೆ ಹೊಸ ವರುಷವು ಭೂಲೋಕಕ್ಕೆ
ದೀಪವ ಹಚ್ಚಿರಿ ಆರತಿ ಬೆಳಗಿರಿ ಕೃತಜ್ಞತೆಯಲ್ಲಿ
ಆಹ್ವಾನಿಸಿರಿ ಪರಮ ಪೂಜ್ಯ ಬಾವನೆಗಳಲ್ಲಿ/
ಹೂಗಳ ಚೆಲ್ಲಿರಿ ಪರಿಮಳ ಪ್ರಸರಿಸಿರಿ ಹರ್ಷದಲ್ಲಿ/
ಆಹ್ವಾನಿಸಿರಿ ಪರಮ ಪೂಜ್ಯ ಭಾವನೆಗಳಲ್ಲಿ/
ಹೊಳೆಯುವ ಮಿನುಗುವ ಉಡುಗೆ ತೊಡುಗೆಗಳಲಿ/
ಮಿನುಗನು ಮೆರುಗನು ಸಿಂಪಡಿಸಿ ಪ್ರಪಂಚಕೆ/
ಮನ ಸೆಳೆಯುವ ಕಣ್ಸೆಳೆಯುವ ವಸ್ತ್ರಾಲಂಕಾರದಲಿ/
ಬರುತಿದೆ ಹೊಸ ವರುಷವು ಭೂಲೋಕಕ್ಕೆ
ಭಗವಂತನ ಕೃಪೆಗೆ ಶಿರಬಾಗಿ ಕೈಜೋಡಿಸಿ ನಮಿಸುವ
ಬೇದಭಾವಗಳಿಲ್ಲದೆ ಭಿನ್ನಾಭಿಪ್ರಾಯವಿಲ್ಲದೆ ಬಾಳುವ
ಯಾವ ಕಲಹ ಕೋಲಾಹಲವಿಲ್ಲದೆ ಒಂದಾಗಿ ಇರುವ/
ಪರಮಾತ್ಮನ ದಯೆಗೆ ಮಾನವೀಯತೆಯಲ್ಲಿ ಬದುಕುವ
ಸುಖ ಶಾಂತಿ ನೆಮ್ಮದಿ ಸದಾ ತುಳುಕುತಿರಲಿ/
ಸಂತಸ ಸಂತೋಷ ಸದಾ ನಿಮ್ಮದಾಗಿರಲಿ/
ಯಶಸ್ಸು ನಿಮ್ಮ ಬದುಕಲ್ಲಿ ವಿಪುಲವಾಗಿರಲಿ/
ನಿಮ್ಮ ಬಾಳು ಹಸನಾಗಿರಲಿ ಸುಗಮವಾಗಿರಲಿ/
-ಆಶಾ ಮತ್ತು ರಾಮ್
ಸುಂದರ ಹಾರೈಕೆ ಜೊತೆಗೆ ಉತ್ತಮ ಸಂದೇಶ ಹೊತ್ತ ಕವನ.
ಹೊಸವರ್ಷದ ಆಗಮನವನ್ನು ಕವನದಲ್ಲಿ ಕಟ್ಟಿಕೊಡುತ್ತಾ ಎಲ್ಲರಿಗೂ..ಶುಭಕೋರಿರುವ ಕವನ ಚೆನ್ನಾಗಿ ದೆ ಮೇಡಂ
ಭೂಲೋಕಕ್ಕೆ ಆಗಮಿಸುವ ಹೊಸ ವರುಷವನ್ನು ಸಂಭ್ರಮದಿಂದ ಸ್ವಾಗತಿಸುವ ಸುಂದರ ಕವನ
ಹೊಸ ವರುಷದ ಆಗಮನಕ್ಕೆ ಸದಾಶಯ ಹೊತ್ತ ಚಂದದ ಕವಿತೆ.