ಪರಾಗ

ವಾಟ್ಸಾಪ್ ಕಥೆ 43 : ಏಕಾಗ್ರತೆ.

Share Button

ರೇಖಾಚಿತ್ರ : ಬಿ.ಆರ್ ನಾಗರತ್ನ, ಮೈಸೂರು

ಅದೊಂದು ಪಾನಗೃಹ. ಅಲ್ಲಿ ಗ್ರಾಹಕರ ಗದ್ದಲ. ಕುಡಿಯುವುದು, ತಿನ್ನುವುದು, ತಮ್ಮತಮ್ಮೊಳಗೆ ಜೋರು ದನಿಯಲ್ಲಿ ಹರಟುವುದು ಎಲ್ಲವೂ ನಿರಂತರವಾಗಿ ನಡೆದಿತ್ತು. ಗ್ರಾಹಕರ ವೈವಿಧ್ಯಮಯ ಬೇಡಿಕೆಗಳಿಗೆ ತಕ್ಕಂತೆ ಅಂಗಡಿಯ ಕೆಲಸಗಾರರು ಅಲ್ಲಿಂದಿಲ್ಲಿಗೆ, ಇಲ್ಲಿಂದಲ್ಲಿಗೆ ಸರಭರ ಓಡಾಡುತ್ತಾ ಸೇವೆ ಮಾಡುತ್ತಿದ್ದರು. ಅಂಗಡಿಯ ಮೂಲೆಯಲ್ಲಿ ಒಂದು ಖುರ್ಚಿ ಅದರ ಮುಂದೊಂದು ಮೇಜು ಇದ್ದವು . ಅಲ್ಲಿ ಒಬ್ಬ ವ್ಯಕ್ತಿ ಕುಳಿತಿದ್ದ. ಹತ್ತು ಹದಿನೈದು ನಿಮಿಷಗಳಿಗೊಮ್ಮೆ ಕೆಲಸಗಾರರು ತಂದುಕೊಟ್ಟ ಆರ್ಡರ್‌ಗಳಿಗೆ ಬಿಲ್ಲನ್ನು ಬರೆದು ಕೊಡುತ್ತಿದ್ದ. ಗ್ರಾಹಕರಿಂದ ಬಿಲ್ಲಿಗೆ ಸರಿಯಾಗಿ ಹಣಪಡೆದು ಉಳಿದ ಚಿಲ್ಲರೆ ಹಣವನ್ನು ಹಿಂದಿರುಗಿಸುತ್ತಿದ್ದ. ಮತ್ತೆ ಮುಂದಿನ ಬಿಲ್ಲು ಬರೆಯುವವರೆಗೆ ಸ್ವಲ್ಪ ಕಾಲಾವಕಾಶ ಸಿಗುತ್ತಿತ್ತು. ಆಗ ಅವನು ಧೀರ ಸಂನ್ಯಾಸಿ ವಿವೇಕಾನಂದರ ಒಂದು ಪುಸ್ತಕವನ್ನು ಓದುತ್ತಿದ್ದ. ಈ ವಿದ್ಯಮಾನಗಳನ್ನು ಗಮನಿಸುತ್ತಿದ್ದ ಒಬ್ಬವ್ಯಕ್ತಿ ಕ್ಯಾಷಿಯರ್ ಬಳಿ ಬಂದು ”ತಮ್ಮಾ, ಇದು ಹೆಂಡದಂಗಡಿ. ಬರುವವರೆಲ್ಲ ಹೆಂಡ ಕುಡಿದು ತೂರಾಡುವವರು. ಗೌಜು ಗದ್ದಲ ತುಂಬಿದೆ. ಇಂತಹ ಸನ್ನಿವೇಶದಲ್ಲಿಯೂ ನೀನು ಅಧ್ಯಾತ್ಮದ ಪುಸ್ತಕ ಓದುತ್ತಿದ್ದೀಯಲ್ಲ, ಅದು ಹೇಗೆ ಸಾಧ್ಯ? ಓದಿದ್ದು ನಿನ್ನ ತಲೆಗೆ ಹತ್ತುವುದಾದರೂ ಹೇಗೆ?” ಎಂದು ಕೇಳಿದರು.

ಅವರ ಮಾತನ್ನು ಕೇಳಿದ ಕ್ಯಾಷಿಯರ್ ಅಂಗಡಿಯಲ್ಲಿರುವ ಬಾಟಲಿಗಳಲ್ಲಿ ಹೆಂಡ ತುಂಬಿದೆ. ”ಇಲ್ಲಿಗೆ ಬರುವವರು ಹೆಂಡ ಕುಡಿಯಲೆಂದೇ ಬರುತ್ತಾರೆ ನಿಜ. ಆದರೆ ನನ್ನೊಳಗೆ ಹೆಂಡ ತುಂಬಿಕೊಂಡಿಲ್ಲವಲ್ಲ. ಆದುದರಿಂದ ನನಗೆ ಓದಲು ಸಾಧ್ಯವಾಗುತ್ತದೆ. ಏನನ್ನಾದರೂ ಮಾಡಬೇಕೆಂದು ಧ್ರಢನಿಶ್ಚಯ ಮಾಡಿದರೆ ಅದನ್ನು ಮಾಡಲು ಸುತ್ತಮುತ್ತಲಿನ ವಾತಾವರಣ ಏನೂ ಅಡ್ಡಿಯಾಗುವುದಿಲ್ಲ” ಎಂದುತ್ತರಿಸಿದನು. ಪ್ರಶ್ನೆ ಮಾಡಿದ ವ್ಯಕ್ತಿ ಅವನ ಏಕಾಗ್ರತೆಗೆ ಮೆಚ್ಚುಗೆ ಸೂಚಿಸಿ ಹೊರನಡೆದರು.

ವಾಟ್ಸಾಪ್ ಕಥೆಗಳು
ಸಂಗ್ರಹ ಬಿ.ಆರ್ ನಾಗರತ್ನ, ಮೈಸೂರು

7 Comments on “ವಾಟ್ಸಾಪ್ ಕಥೆ 43 : ಏಕಾಗ್ರತೆ.

  1. ಸೊಗಸಾಗಿದೆ ಕಥೆ. ಬದುಕಿನಲ್ಲಿ ಒಳ್ಳೆಯದ್ದು, ಕೆಟ್ಟದ್ದು ಇವೆರಡರಲ್ಲಿ ಯಾವುದನ್ನು ಆರಿಸಬೇಕು ಅನ್ನುವ ವಿವೇಚನೆ ಇರಬೇಕಾದದ್ದು ಮುಖ್ಯ.

  2. ಯಾವುದೇ ಕೆಲಸಕ್ಕೆ ಏಕಾಗ್ರತೆ ಎಷ್ಟು ಮುಖ್ಯ ಎಂಬ ಸಂದೇಶವನ್ನು ಹೊತ್ತ ಸೊಗಸಾದ ಕಥೆಗೆ ಪೂರಕ ರೇಖಾಚಿತ್ರವು ಮತ್ತಷ್ಟು ಮೆರುಗನ್ನಿತ್ತಿದೆ….ನಾಗರತ್ನ ಮೇಡಂ!

  3. ಧನ್ಯವಾದಗಳು ಶಂಕರಿ ಮೇಡಂ.. ನೀವು ಪ್ರತಿಸಲ ಚಿತ್ರ ದ ಬಗ್ಗೆ ನಿಮ್ಮ ಅಭಿಪ್ರಾಯ ಹೇಳುವುದು…ನಿಮ್ಮ ಗಮನಿಸುವಿಕೆಯಲ್ಲಿ ವಿಶೇಷತೆ ಎನ್ನಿಸುತ್ತದೆ…ಅದಕ್ಕಾಗಿ ಮತ್ತೊಮ್ಮೆ ಧನ್ಯವಾದಗಳು

  4. ಮನೋನಿಗ್ರಹಕ್ಕೆ ಉದಾಹರಣೆಯಾಗಬಲ್ಲ ನೆನಪಿನಲ್ಲಿ ಉಳಿಯುವ ಕಥೆ

  5. ನಿನ್ನೊಳಗೆ ಎರಡು ಕೋಣೆಯ ಮಾಡು ಒಂದು ಲೌಕಿಕಕ್ಕೆ, ಇನ್ನೊಂದು ಆಧ್ಯಾತ್ಮಿಕತೆಗೆ ಎನ್ನುವ ಡಿ.ವಿ.ಜಿ. ಅವರ ನಿಲುವಿಗೆ ಪೂರಕವಾದ ಕಥೆ ಚೆನ್ನಾಗಿದೆ, ಕಥೆಯ ನಡಿಗೆ ಒಂದು ವಾತಾವರಣವನ್ನು ಕಟ್ಟಿಕೊಡುತ್ತದೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *