ವಾಟ್ಸಾಪ್ ಕಥೆ 32: ಮನದೊಳಗಿನ ಅದ್ಭುತ ಶಕ್ತಿ
ಒಮ್ಮೆ ಸ್ವರ್ಗಲೋಕದಲ್ಲಿ ದೇವತೆಗಳ ಸಭೆ ನಡೆದಿತ್ತು. ”ಇತ್ತೀಚೆಗೆ ಮನುಷ್ಯರು ಬಹಳ ಸಾಹಸಿಗಳು, ಬುದ್ಧಿವಂತರೂ ಆಗಿದ್ದಾರೆ. ಅವರು ಎಲ್ಲಿ ಏನಿದ್ದರೂ ಹುಡುಕಾಡಿ ಶೋಧಿಸಿ ಬಿಡುತ್ತಾರೆ. ಆದ್ದರಿಂದ ಒಂದು ಅದ್ಭುತವಾದ …ಪಾರಮಾರ್ಥಿಕ ಶಕ್ತಿಯನ್ನು ಸೃಷ್ಠಿಮಾಡಿ ಮಾನವರಿಗೆ ಗೊತ್ತಾಗದ ಸ್ಥಳದಲ್ಲಿ ಅದನ್ನು ಬಚ್ಚಿಡಬೇಕು. ಯಾವುದು ಸೂಕ್ತವಾದ ಜಾಗ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ” ಎಂದು ಸಲಹೆಗಳನ್ನು ಆಹ್ವಾನಿಸಲಾಯಿತು.
ಒಬ್ಬರು ಅದನ್ನು ಆಳವಾದ ಸಮದ್ರದ ತಳದಲ್ಲಿ ಬಚ್ಚಿಡಬಹುದು ಎಂದರು. ಮತ್ತೊಬ್ಬರು ಅದನ್ನು ಅತಿ ಎತ್ತರದ ಪರ್ವತಾಗ್ರದಲ್ಲಿ ಮುಚ್ಚಿಡಬಹುದು ಎಂದರು ಹೀಗೇ ಒಬ್ಬೊಬ್ಬರು ಒಂದೊಂದು ಹೇಳುತ್ತಿದ್ದರು ಯಾವುದೂ ಸಮರ್ಪಕವೆನ್ನಿಸಲಿಲ್ಲ. ಕೊನೆಗೆ ಒಬ್ಬ ಹಿರಿಯರಾದ ಅನುಭವಿ ಹೇಳಿದರು ”ದೇವರಾಜ, ಆ ಅದ್ಭುತವಾದ ಶಕ್ತಿಯನ್ನು ಮನುಷ್ಯರ ಮನಸ್ಸಿನ ಅಂತರಾಳದಲ್ಲಿಯೇ ಬಚ್ಚಿಟ್ಟರೆ ಒಳ್ಳೆಯದು. ಏಕೆಂದರೆ ಮನುಷ್ಯರು ಯಾವಾಗಲೂ ಲೌಕಿಕ ವಿಚಾರದಲ್ಲೇ ಮಗ್ನರಾಗಿರುತ್ತಾರೆ. ಪಾರಮಾರ್ಥಿಕ ವಿಚಾರಗಳು ಅವರ ತಲೆಗೆ ಹತ್ತುವಷ್ಟು ಅವರಿಗೆ ಪುರುಸೊತ್ತಿರುವುದಿಲ್ಲ. ಹೀಗಾಗಿ ಅವರು ಆ ಶಕ್ತಿಯನ್ನು ಹುಡುಕುವುದೇ ಇಲ್ಲ. ಯಾರಾದರೂ ಅಪರೂಪಕ್ಕೆ ಅದರಲ್ಲಿ ಮನಸ್ಸನ್ನು ನೆಟ್ಟು ಅದಕ್ಕಾಗಿ ತೀವ್ರವಾಗಿ ಪ್ರಯತ್ನ ಮಾಡಿದರೆ ಅವನು ಮಹಾತ್ಮನೆನ್ನಿಸಿಕೊಳ್ಳುತ್ತಾನೆ”. ಎಂದು ಸಲಹೆ ಮಾಡಿದರು. ಅದನ್ನು ಎಲ್ಲರೂ ಅನುಮೋದಿಸಿದರು. ಹಾಗಾಗಿ ಮನುಷ್ಯನ ಒಳಗೇ ಅದ್ಭುತವಾದ ಅಂತರಂಗದ ಶಕ್ತಿಯಿದೆ. ನಾವು ಇತಿಹಾಸದ ಪುಟಗಳನ್ನು ತಿರುವಿ ನೋಡಿದರೆ ನಮಗೇ ತಿಳಿಯುವುದು ಇಂತಹ ಅದ್ಭುತವಾದ ಶಕ್ತಿಯನ್ನು ಪಡೆದುಕೊಂಡು ಮಹಜಾಜ್ಞಾನಿಗಳು ಎನ್ನಿಸಿಕೊಂಡವರು ಇದ್ದಾರೆ. ಅವರ ಸಂಖ್ಯೆ ಬಹಳ ಕಡಿಮೆ ಎಂಬುದು ತಿಳಿಯುತ್ತದೆ.
ವಾಟ್ಸಾಪ್ ಕಥೆಗಳು
ಸಂಗ್ರಹ : ಬಿ.ಆರ್ ನಾಗರತ್ನ, ಮೈಸೂರು
ಪ್ರಕಟಣೆಗಾಗಿ ಧನ್ಯವಾದಗಳು ಹೇಮಾಮಾಲಾ ಮೇಡಂ
ಚೆನ್ನಾಗಿದೆ
ಧನ್ಯವಾದಗಳು ನಯನ ಮೇಡಂ
ಅದ್ಭುತವಾದ ಕಥೆ
ಮನಮುಟ್ಟುವ ಪುಟ್ಟ ಕಥೆಯೊಂದಿಗೆ ನಾಗರತ್ನ ಮೇಡಂ ಅವರ ಚಂದದ ಸೂಕ್ತ ರೇಖಾಚಿತ್ರ ಮನತುಂಬಿತು..
ಒಳ್ಳೆಯ ಆಧ್ಯಾತ್ಮಿಕ ಮಹತ್ವವನ್ನು ತಿಳಿಸುವ ಕಥೆ ಚೆನ್ನಾಗಿದೆ.
ಧನ್ಯವಾದಗಳು ಗಾಯತ್ರಿ ಮೇಡಂ ಹಾಗೂ ಶಂಕರಿ ಮೇಡಂ
Very nice
ಧನ್ಯವಾದಗಳು ಗೆಳತಿ ಸುಚೇತಾ