“ಮಧ್ಯಂತರ”
ನೆನಪುಗಳನ್ನು ತಿರುವು ಹಾಕುತ್ತಲೇ
ರೂಢಿಯಾಗಿದೆ ಹೊಸ ದಿನಚರಿ
ಸಾಂತ್ವನ ನೀಡದ ಮೌನದಲ್ಲೇ
ಸುಳಿದಿದೆ ಬೇಸರಗಳ ಹಾಜರಿ
ಏಕಾಂಗಿತನದ ಏರಿಳಿತಗಳನ್ನೇ
ಉಸಿರಾಗಿಸಿ ಬದುಕುತ್ತಿದೆ ಆಸೆಯೊಂದು
ಕನಸುಗಳ ಬಲವಾದ ತುಳಿತಗಳನ್ನೇ
ಹಸಿರಾಗಿಸಿ ನಗುತಿದೆ ಮುಖವೊಂದು
ಮನದ ಪರದೆ ಮೇಲೀಗ
ಮೂಡಿದೆ ಮಿಡಿತಗಳ ಅಂತರ
ಒಲವ ಉಳಿಸುವ ತವಕಕೀಗ
ಬೇಕಿರದಿದ್ದರೂ ಸಿಕ್ಕಿದೆ ಮಧ್ಯಂತರ
-ವಿಜಯಸಿಂಹ ಎಲ್
ಬೇಸರಕ್ಕೆ ಮಧ್ಯಂತರ ಸಿಗಲಿ ಎನ್ನುವ ಆಶಯ ಚೆನ್ನಾಗಿದೆ
ಕವನ ಚೆನ್ನಾಗಿ ಮೂಡಿಬಂದಿದೆ ಸಾರ್
ಚಂದದ ಕವನ
ಉತ್ತಮ ಆಶಯದೊಂದಿಗಿನ ಕವನ ಚೆನ್ನಾಗಿದೆ.
Beautiful