ನಿನ್ನ ಮೌನ
ನಿನ್ನ ಮೌನ ಸಹಿಸಲಾರೆ
ನಿನ್ನ ಮಾತು ಮರೆಯಲಾರೆ
ನಿನ್ನ ಮೌನ ಹೊನ್ನ ಶೂಲ
ನಿನ್ನ ಮಾತು ಹೊಂಗೆ ನೆರಳು
ನಿನ್ನ ಮಾತು ಅಲ್ಲ ಪದವು
ಭಾವ ತುಂಬಿದ ರಾಗವು
ನುಡಿಗೆ ಸ್ವರವು ಯೋಗವು
ನಮ್ಮ ಪ್ರೇಮ ಅಮರವು
ಕಾಡುವ ಮೌನ ಸಾಕು
ಒಲವಿನ ಮಾತು ಬೇಕು
ಮೌನದಿಂದ ಮಾತಿನೆಡೆಗೆ
ನಮ್ಮ ಪಯಣ ಸಾಗಬೇಕು
ಏಕೆ? ಮೌನ ಏಕಾಂತ!
ಏಕೆ? ಮನಕೆ ಈ ಬೇಸರ!
ನಿನ್ನ ನಗುವ ಹೂವಿನಲ್ಲಿ
ನನ್ನ ಹರುಷ ಜೇನಾಗಲಿ
ಪ್ರೀತಿಯ ಪ್ರವಾಹದಲ್ಲಿ
ನಮ್ಮ ಪ್ರೇಮ ನೌಕೆಯಲ್ಲಿ
ನೀನು ನಾನು ಅಭಿಮುಖ
ನಮ್ಮ ತಾಣ ರಮ್ಯಲೋಕ!
ಹೃದಯ ಒಲಿದು ನಲಿಯಲು
ಬಾಳು ಪ್ರೇಮ ಸುಮವು
ಸುಗಂಧ ಸೂಸಿ ನಮ್ಮ ಜಗವು
ಆನಂದ ವನವು ಆ ನಂದನ ವನವು!
-ರೋಹಿಣಿ ಸತ್ಯ
ಮನದಬಯಕೆಯ..ಅನಾವರಣ ಹೊಂದಿದ ಕವನ.
ಮುದಕೊಟ್ಟಿತು…ಮೇಡಂ
ಧನ್ಯವಾದ!
ಧನ್ಯವಾದ
ಸೂಪರ್ ಕವನ
ಧನ್ಯವಾದ
ಮೌನದಿಂದ ಮಾತಿನೆಡೆಗೆ ಸಾಗುವ ಪಯಣ
ಕವನ ಚೆನ್ನಾಗಿ ಮೂಡಿ ಬಂದಿದೆ
ಧನ್ಯವಾದ
ಸೊಗಸಾದ ಭಾವನಾತ್ಮಕ ಕವನ.
ಧನ್ಯವಾದ
ಪಲ್ಲವಿಯ ಮೂರು ಮಾತು ನಾಲ್ಕನೇ ಸಾಲುಗಳು ತುಂಬಾ ಚೆನ್ನಾಗಿವೆ
ಮಾತಿಗೆ ಎಷ್ಟು ತೂಕ ಬೆಲೆ ಇದೆ ಎಂದು ತಿಳಿಸಿದ್ದೀರಿ
ಧನ್ಯವಾದ
ಚಂದದ ಕವನ
ಧನ್ಯವಾದ