ನ್ಯಾನೋ ಕತೆಗಳು :ಅಸಹಾಯಕತೆ, ಹಿತಶತ್ರು
1.ಅಸಹಾಯಕತೆ
” ನಾಳೆ ಆಪರೇಷನ್ ಆಗದಿದ್ದರೆ ನಿಮ್ಮ ಗಂಡನ್ನು ಉಳಿಸಿಕೊಳ್ಳಲಾಗಲ್ಲ. ಬೇಗ ಹಣ ತಂದು ಕಟ್ಟಿ” ಆಸ್ಪತ್ರೆಯವರು ಹೇಳಿದ ಈ ಮಾತುಗಳು . ಕಿವಿಯಲ್ಲಿ ಅದೇ ಮಾತುಗಳು ಕೇಳ ಲಾಗದೆ ಎದ್ದು ಕಂಕುಳಿನ ಕೂಸನ್ನು ಅತ್ತೆ ಕೈಲಿ ಕೊಟ್ಟು “ಬಂದೆ” ಎಂದು ಹೊರಟವಳು ತಲುಪಿದ್ದು ಪತಿಯು ಕೆಲಸ ಮಾಡುತ್ತಿದ್ದ ಧಣಿಯ ಬಳಿಗೆ. ತನ್ನ ಬೇಡಿಕೆಗೆ ಒಪ್ಪದೇ ಅಂದು ಕೋಪಗೊಂಡು ಎದ್ದು ಹೋದವಳು ಕುರಿಮರಿಯಂತೆ ಬಂದು ನಿಂತಾಗ ತೋಳದ ಕಣ್ಗಳಲ್ಲಿ ಆಸೆ ಮಿಂಚಿತು. ಮೂಕ ಎತ್ತಿನಂತೆ ಅವನ ಹಿಂದೆ
ನಡೆದಳು . ಗಂಡನನ್ನು ಉಳಿಸಿಕೊಳ್ಳುವ ಅನಿವಾರ್ಯತೆ ಅವಳನ್ನು ಅಸಹಾಯಕತೆಯ ಮಡುವಿಗೆ ದೂಕಿತ್ತು. ಹಸಿದ ಹೆಬ್ಬುಲಿ ಹರಿಣದ ಮೇಲೆ ದಾಳಿ ನಡೆಸಿತ್ತು .
2. ಹಿತಶತ್ರು
“ಶಾಸ್ತ್ರಿಗಳೇ ಸ್ವಲ್ಪ ಈ ಜಾತಕಾನ ನಮ್ಮ ನಂದಿನಿ ಜಾತಕಕ್ಕೆ ಹೋಲಿಸಿ ನೋಡಿ ಹೇಳುತ್ತೀರಾ? ಒಳ್ಳೆ ಜನ ಅನುಕೂಲಸ್ಥರು ಒಬ್ಬನೇ ಮಗ ಸರಳವಾಗಿ ಮದುವೆ ಮಾಡಿಕೊಟ್ರೆ ಸಾಕು ಅಂತಾರೆ ನಮ್ಮ ಅಣ್ಣನ ಗೆಳೆಯರಂತೆ” ಅಡಿಗೆ ಸಾವಿತ್ರಮ್ಮ ಜಾತಕಗಳ ಪ್ರತಿಯನ್ನು ಕೈಗಿತ್ತಾಗ ಸುಮ್ಮನೆ ತೆಗೆದುಕೊಂಡರು ನರಸಿಂಹ ಶಾಸ್ತ್ರಿಗಳು.
ಎರಡು ದಿನ ಬಿಟ್ಟು ಸಾವಿತ್ರಮ್ಮ ಕೇಳಿದಾಗ “ನೋಡಿಮ್ಮಾ ನಾನು ಹೇಗೆ ಅಂತ ನಿಮಗೇ ಗೊತ್ತು. ಈ ಎರಡೂ ಜಾತಕಗಳು ಸ್ವಲ್ಪವೂ ಹೊಂದಲ್ಲ. ಈ ಸಂಬಂಧ ಆಗಿ ಬರಲ್ಲ” ಖಡಾ ಖಂಡಿತವಾಗಿ ನುಡಿದಾಗ ” ಅಲ್ಲ ಶಾಸ್ತ್ರಿಗಳೇ ಏನಾದ್ರೂ ಹೋಮ ಪರಿಹಾರ ಶಾಂತಿ ಮಾಡಿಸಿದರೆ” ಮೆತ್ತಗಿನ ದನಿಯಲ್ಲಿ ಸಾವಿತ್ರಮ್ಮ ನುಡಿದರು . ಜೋರಾಗಿ ತಲೆಯಲುಗಿಸುತ್ತಾ “ನಾನು ಹೇಳೋದು ಹೇಳಿದ್ದೀನಿ ಇಷ್ಟರ ಮೇಲೆ ನಿಮ್ಮಿಷ್ಟ” ಎಂದು ಕಟುವಾಗಿಹೇಳಿದರು. ಆ ಸಂಬಂಧ ನಿರಾಕರಿಸದೆ ವಿಧಿ ಇರಲಿಲ್ಲ ಸಾವಿತ್ರಮ್ಮನಿಗೆ .
ಮತ್ತೆ ಒಂದು ತಿಂಗಳಲ್ಲೇ ಶಾಸ್ತ್ರಿಗಳ ತಮ್ಮನ ಮಗಳ ಮದುವೆ ಸಾವಿತ್ರಮ್ಮ ಜಾತಕ ಕೊಟ್ಟ ಹುಡುಗನೊಂದಿಗೆ ನೆರವೇರಿತ್ತು .
–ಸುಜಾತಾ ರವೀಶ್ ,ಮೈಸೂರು
ಎರಡೂ ಕಥೆಗಳ ಹಿತಶತ್ರುಗಳಿಗೆ ಹಲವು ಹತ್ತು ಮುಖ!
ಧನ್ಯವಾದಗಳು ಮೇಡಂ
ಸೂಪರ್…ಅರ್ಥಪೂರ್ಣ ವಾದ ಕಥೆಗಳು ಸೋದರಿ.
ಹೃತ್ಪೂರ್ವಕ ಧನ್ಯವಾದಗಳು
ಚಂದದ ನ್ಯಾನ್ಯೋ ಕಥೆಗಳು
ಧನ್ಯವಾದಗಳು
ಪ್ರಕಟಿಸಿ ಪ್ರೋತ್ಸಾಹಿಸುತ್ತಿರುವ ಸಂಪಾದಕಿಯವರಿಗೆ ಹೃತ್ಪೂರ್ವಕ ಧನ್ಯವಾದಗಳು
Wonderful tales
thank you
ಸೊಗಸಾದ ಪುಟ್ಟ ಅರ್ಥವತ್ತಾದ ಕಥೆಗಳು.
ಅರ್ಥ ಗರ್ಭಿತ ಕಥೆಗಳು.