ಆಶಯ
ಮಾಸದೇ ನೆನಪು ಕರಗದೇ ಕಾರ್ಮೋಡ
ಬೀಳದೇ ಬಿಂದು ನಿನ್ನದೊಂದೊಂದು .
ತೂಗುತ್ತಿಲ್ಲ ಉಯ್ಯಾಲೆ ಅಂಬರದ ಮ್ಯಾಲೆ
ಬುತ್ತಿಕಟ್ಟು ಕನಸುಗಳ ಕಟ್ಟಲಾಗದ ಮ್ಯಾಲೆ
ಹಾದಿಬೀದಿಯಲ್ಲಿ ಬಾವಿಗಳಿಲ್ಲದ ಮ್ಯಾಲೆ
ಬಿಂದಿಗೆ ಹೊತ್ತಿರುವವಳು ಬಿಂಕದೆಣ್ಣೆಂದ ಮ್ಯಾಲೆ
ಬೀಳುವ ಬಿಂದು ನಿನ್ನದೊಂದೊಂದು .
ಕೆರೆ ತುಂಬಿ ಬಿಂಬ ನೋಡುವಾಗ ಬಿಂದು ಬಿದ್ದು
ಚದುರಿಹೋಯಿತು ಛಾಯೆ ಈ ಮಾಯೆ .
ಅಳುವಾಗ ಬಿಂದು ಅದರೊಳಗೆ ಮಿಂದು
ಹೊರಬಂದಾಗ ನಗುಮೊಗದ ಛಾಯೆಮಾಯೆ
ಬೀಳುವ ಬಿಂದು ನಿನ್ನದೊಂದೊಂದು .
ಮಾಸದೆ ನೆನಪು ಕರಗದೆ ಕಾರ್ಮೋಡ
ಬೀಳದೆ ಬಿಂದು ನಿನ್ನದೊಂದೊಂದು .
–ಶೋಭಿತಾ ನಾಗತಿಹಳ್ಳಿ (ಶೋಭ .ಟಿ. ಆರ್ .)
ಚಂದದ ಕವನ ..ಶೋಭಿತಾ..
ಚಂದದ ಕವನ
Good one
Good
ಅಗಾಧತೆಯ ಆದಿ, ಬಿಂದುವಿನ ಕುರಿತಾದ ಸುಂದರ ಆಶಯ
ಸೊಗಸಾದ ಕವನ.
ಭಾವಪೂರ್ಣ ಕವನ.