ಹೀಗಿರಬೇಕು
ಬಾಳಬಹುದು
ಪ್ರೀತಿಯಿಲ್ಲದೆ ಯಾಂತ್ರಿಕವಾಗಿ
ಬಾಳಲು ಜೀವನ್ಮುಖಿಯಾಗಿ
ಪ್ರೀತಿಸುವ ಪ್ರೀತಿಸಲ್ಪಡುವ ಜೀವವಿರಬೇಕು
ಬದುಕಬಹುದು
ಮತ ಧರ್ಮಗಳ ಹಂಗಿಲ್ಲದೆ
ಬದುಕಿ ಬದುಕಗೊಡಲು
ಮನುಜ ಮತವನಪ್ಪಿದ ಮನವಿರಬೇಕು
ಜೀವಿಸಬಹುದು
ಅಂಜದೆ ಆತ್ಮಸಾಕ್ಷಿಗೆ
ಜೀವಿತದ ನೆಮ್ಮದಿಗೆ
ಆತ್ಮಸಾಕ್ಷಿ ಅಹುದಹುದೆನಬೇಕು
–ಎಂ. ಆರ್. ಅನಸೂಯ
ಅರ್ಥಪೂರ್ಣ ವಾದ ಕವನ…ಮೇಡಂ
ಧನ್ಯವಾದಗಳು
Nice poem
ಧನ್ಯವಾದಗಳು
ಅರ್ಥಪೂರ್ಣವಾದ ಕವಿತೆ
ಕೊನೆಯ ನಾಲ್ಕು ಸಾಲು ತುಂಬಾ ಇಷ್ಟು ವಾಯಿತು
ಧನ್ಯವಾದಗಳು
ಸಾರ್ಥಕ ಬದುಕಿನ ಸರಳ ಸೂತ್ರಗಳ
ನಿರೀಕ್ಷೆಯಲ್ಲಿ….
ಧನ್ನವಾದಗಳು
ಬಾಳಿನ ಸತ್ಯಗಳಿಗೆ ಕನ್ನಡಿ ಹಿಡಿಯುವ ಚಿಕ್ಕ ಚೊಕ್ಕ ಸುಂದರ ಕವಿತೆಗಾಗಿ ಅಭಿನಂದನೆಗಳು.
ಧನ್ಯವಾದಗಳು