ಹೂಗವಿತೆಗಳು-ಗುಚ್ಛ 8
1
ತೊಟ್ಟು ಕಳಚಿದ ಮೇಲೆ
ಪರಿಮಳ ಜಾರುವುದು
ಹೂವಿನ ಜೊತೆಗೆ
ಗಿಡದಲ್ಲಿದ್ದುದು ಹೂವಷ್ಟೇ
ಪರಿಮಳ ಯಾವತ್ತೂ ಹೂವಿನದೇ..
2
ಕ್ಷಮಿಸಿ ಹೂಗಳೇ
ನಿಮ್ಮನ್ನು ಕೊಲ್ಲುತ್ತೇನೆ
ದೇವರನ್ನು ಮೆಚ್ಚಿಸಲು
3
ದಿನವೆಲ್ಲ ಪರಿಮಳದ
ಹೂವರಳಿಸುವ ಮರ
ಹುಣ್ಣಿಮೆಯ ರಾತ್ರಿಗೆ
ಬೆಳಕಿನ ಹೂ ಮುಡಿದಿದೆ!
4
ಇದು ಹೂವಿನ ಪಕಳೆಯೋ
ಚಿಟ್ಟೆಯ ರೆಕ್ಕೆಯೋ ಗೊಂದಲ
ಎರಡರಲ್ಲೂ ಒಂದೇ ಬಣ್ಣ
5
ಬೇವಿನ ಕೊಂಬೆಯಲ್ಲಿ
ಜೇನುಹುಳು
ಅದೇನು ಮಾಡುತ್ತಿದೆ?
ಹಲವು ಹೂಗಳಿಂದ
ಚೆಲುವ ತಂದು
ಕವಿತೆ ಕಟ್ಟುತ್ತಿದೆ!
6
ಹೂದೋಟದ ತುಂಬಾ
ಅರಳಿ ನಿಂತಿವೆ
ಎಷ್ಟೊಂದು ಹೂಗಳು
ಇಷ್ಟೊಂದು ಹನಿಗವಿತೆಗಳ
ಅದು ಯಾವ ಮಾಯದಲ್ಲೋ
ಬರೆದು ಹೋಗಿದ್ದಾನೆ ದೇವರು!
(ಮುಗಿಯಿತು)
–ನವೀನ್ ಮಧುಗಿರಿ
ತಿಳಿಯಾಗಿ ನಗುವ ನಿಮ್ಮ ಹೂಗವಿತೆಗಳು ಮುಗ್ಧ ಮಧುರ ಮತ್ತು ಮೋಹಕ
ಬಹಳ… ಅರ್ಥ ಪೂರ್ಣ ವಾದ…ಕವಿತೆಗಳು..ಹಾಗೂ..ಮುದಕೊಟ್ಟ….
ಹನಿಗವನಗಳನ್ನು..ಕೊಟ್ಟ ನಿಮಗೆ ಧನ್ಯವಾದಗಳು ಸಾರ್…
Beautiful
ಸುಂದರವಾದ ಅರ್ಥಗರ್ಭಿತವಾದ ಹೂವಿನಂತೆ ಕುಸುಮಕೋಮಲವಾದ ಕವಿತೆಗಳು ವಂದನೆಗಳು