ಮತ್ತೊಂದು ಭೇಟಿ

Share Button

ಈ ರೆಸ್ಟೋರೆಂಟಿನಲ್ಲಿ ಕ್ಲೀನರ್ ಹುಡುಗ
ಟೇಬಲ್ ಸ್ವಚ್ಛಗೊಳಿಸಿದ ನಂತರ
ಹಲವು ಕಲೆ ಪಾತ್ರೆಗಳ ನಡುವೆ ಸಿಲುಕಿ
ಜೊತೆಯಾಗಿ ನಾವು ಐಸ್ ಕ್ರೀಮ್ ತಿಂದ
ಜೋಡಿ ಸ್ಪೂನುಗಳು ಸಹ
ಬೇರೆ ಬೇರೆಯಾಗಬಹುದು
ನಮ್ಮಂತೆ
ಈ ಕ್ಷಣ ಜೊತೆಗಿದ್ದು
ಸಂಜೆಗೆ ನಾವಿಬ್ಬರು ಇರುತ್ತೇವಲ್ಲ
ಹಾಗೇ ದೂರ ದೂರದಲ್ಲೇ..

ಮತ್ತೆಂದೋ ಆ ಸ್ಪೂನುಗಳು
ಮತ್ತೊಂದು ಜೋಡಿಯ
ಐಸ್ ಕ್ರೀಮ್ ಕಪ್ಪಿನೊಳಗೆ
ಒಂದಾಗಬಹುದು ಮತ್ತೆ
ನಮ್ಮಿಬ್ಬರ ಮತ್ತೊಂದು ಭೇಟಿಯಂತೆ

ನವೀನ್ ಮಧುಗಿರಿ

6 Responses

  1. ಮಾರ್ಮಿಕವಾದ…ಅರ್ಥವನ್ನು ಕವನದಲ್ಲಿ… ಹುದುಗಿಟ್ಟಿರುವ ರೀತಿ… ತುಂಬಾ ಚೆನ್ನಾಗಿ ದೆ ಸಾರ್..
    ಅಭಿನಂದನೆಗಳು.
    .

  2. ನಯನ ಬಜಕೂಡ್ಲು says:

    ಚೆನ್ನಾಗಿದೆ

  3. Samatha.R says:

    Beautiful poem,

  4. . ಶಂಕರಿ ಶರ್ಮ says:

    ವಿಶೇಷ ಅರ್ಥವನ್ನು ಹೊತ್ತ ಭಾವಪೂರ್ಣ ಕವನ.

  5. Vijayasubrahmanya says:

    ಅದೇ ಶಂಕರಿ ಶರ್ಮ ಹೇಳಿದ್ದು ಸರಿ.

  6. Padmini Hegade says:

    ತುಂಬಾ ಒಳ್ಳೆಯ ಕವನ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: