“ಹರಸು”
ಅರಿವಿನಾ ಅರಿವಿಲ್ಲದ
ಮನುಜರ ನಡುವೆ
ಬಾಳುವ ಅರಿವ
ನೀಡೆನೆಗೆ ದೇವಾ,
ಸಾವು ಬೆನ್ನ ಹಿಂದೆ
ವಿಧಿ ನನ್ನ ಮುಂದೆ,
ಆದರು ನಗುತ ಬಾಳುವ
ನಗಿಸುತ್ತಾ ಭಾಳುವ
ಬುಧ್ದಿಯ ನೀಡೆನೆಗೆ ದೇವಾ
ಮೂರು ದಿನದ ಬಾಳೆಂದರಿತರೂ
ಹಗೆ ಸಾಧಿಸುವುದ ಬಿಡದ,
ಸೋಲುವುದ ಕಲಿಯದ,
ಮಂದಿಯ ನಡುವೆ
ಮಾನವ ಧರ್ಮದಿ
ಬಾಳುವ ಮತಿಯೆನೆಗಿರಲಿ ದೇವಾ…
ವಿವೇಕ ಬೆಳಗದು
ಅಹಂಕಾರ ಕಳೆಯದು
ಅಸೂಯೆ ಸಾಯದು
ದುರಾಸೆಗೆ ಕೊನೆಯಿರದ ಜಗದಿ
ನಾ ನೋಯದೆ ನರಳದೆ
ನಿಸ್ವಾರ್ಥ ದಿ ನಿರ್ಮಲ ಚಿತ್ತದಿ
ಸಾಗಲೆನ್ನ ಭಾವ ಭಕುತಿ
ಬೆಳಕಿನೆಡೆಗೆ……
ಎಂದೆನ್ನ ಹರಸು ದೇವಾ…..
–ವಿದ್ಯಾ ವೆಂಕಟೇಶ. ಮೈಸೂರು
ಚೆನ್ನಾಗಿದೆ
ಸರಳ ಸುಂದರ ಕವನ…..ಚೆನ್ನಾಗಿದೆ ಸೋದರಿ.. ಧನ್ಯವಾದಗಳು.
ಸೊಗಸಾದ ಪ್ರಾರ್ಥನೆಯಂತಿರುವ ಸುಂದರ ಆಶಯವುಳ್ಳ ಕವಿತೆ.
ಸಮಚಿತ್ತದಿಂದ ಬಾಳಲು ಆಶಿಸಿರುವ ಕವಿತೆ ಚೆನ್ನಾಗಿ ಮೂಡಿ ಬಂದಿದೆ
ಜಗದ ಜಂಜಡದ ನಡುವೆ ಜೀವನ ಸಾಗಿಸಲು ಉತ್ತಮ ಪಥವನ್ನು ತೋರಲು ದೇವನಲ್ಲಿ ಬೇಡುವ ಭಾವಪೂರ್ಣ ಕವನ.