ಕವಿ – ಕಾವ್ಯದ ಕಣ್ಣು
ಕೆ ಎಸ್ ನಿಸಾರ್ ಅಹಮದ್ ಇವರು “ನಿತ್ಯೋತ್ಸವ” ಕವಿ ಎಂದೇ ಪ್ರಖ್ಯಾತರು. ಇವರ ಕವನ ಸಂಕಲನಗಳಲ್ಲಿ “ನಿತ್ಯೋತ್ಸವ” ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಅದರಲ್ಲೂ “ಜೋಗದ ಸಿರಿ ಬೆಳಕಿನಲ್ಲಿ” ಕವನ ಎಲ್ಲರ ಮನಸೂರೆಗೊಂಡಂತಹದ್ದು. ಬಹುಶಃ ಎಲ್ಲಾ ವಯೋಮಾನದವರ ಮನಸ್ಸನ್ನು ಆವರಿಸಿರುವಂತಹ ಕವಿತೆ ಎನ್ನಬಹುದು. ಪ್ರಕೃತಿಯ ಸ್ನಿಗ್ಧ ಸೌಂದರ್ಯದ ಕಂಪನ್ನು ಬೀರುತ್ತದೆ ಪೂರ್ತಿ ಕವನ, ಮಾತ್ರವಲ್ಲ ಕನ್ನಡ ನಾಡಿನ ಹಿರಿಮೆಯನ್ನು ಪ್ರತಿ ಸಾಲುಗಳಲ್ಲೂ ಸಾರುತ್ತದೆ.
ನಾನು ಬಹಳ ಇಷ್ಟಪಡುವ ಕೆ ಎಸ್ ನಿಸಾರ್ ಅಹ್ಮದ್ ಅವರ ಇನ್ನೊಂದು ಕವಿತೆ
“ಕನ್ನಡವೆಂದರೆ ಬರಿ ನುಡಿಯಲ್ಲ
ಹಿರಿದಿದೆ ಅದರರ್ಥ,
ಜಲವೆಂದರೆ ಕೇವಲ ನೀರಲ್ಲ
ಅದು ಪಾವನ ತೀರ್ಥ“.
ಎಷ್ಟೊಂದು ಅರ್ಥಪೂರ್ಣ ಈ ಪೂರ್ತಿ ಕವಿತೆ. “ಕನ್ನಡ” ಅನ್ನುವ ಪದ ಎಷ್ಟು ವಿಶಾಲವಾಗಿದೆ ಹಾಗೂ ಈ ಒಂದು ಪದದಲ್ಲಿ ಹೇಗೆ ಇಡೀ ಕರುನಾಡೇ ನೆಲೆಸಿದೆ ಅನ್ನುವುದನ್ನು ಮನದಟ್ಟಾಗಿಸುತ್ತದೆ.
‘ಕನ್ನಡದ ತೇರೆಳೆಯುವ ಕೆಲಸ
ಕೇವಲ ಒಂದು ದಿನಕ್ಕೆ ಸೀಮಿತವಲ್ಲ,
ಇದು ಉಸಿರಿರೊವರೆಗಿನ ಕಾಯಕ‘
ಅನ್ನುತ್ತಾರೆ ಕವಿ ಇಲ್ಲಿ. ಭಾಷಾ ಪ್ರೇಮವನ್ನು ಬಡಿದೆಬ್ಬಿಸುವ ಸಾಲುಗಳು ಈ ಕವಿತೆಯ ತುಂಬಾ.
ನಿಸಾರ್ ಅಹಮದ್ ಅವರ ರಚನೆಗಳಲ್ಲಿ ನಾನು ಬಹಳ ಇಷ್ಟಪಡುವ ಕವಿತೆಗಳು ಇವೆರಡು. ಇದರ ಹೊರತಾಗಿಯೂ ಅವರು ಹಲವಾರು ಕೃತಿಗಳನ್ನು ರಚಿಸಿರುವ ಮಹಾನ್ ವ್ಯಕ್ತಿ, ಕವಿವರ್ಯರು. ಕವಿ ಹೃದಯಗಳಲ್ಲಂತೂ ಈ ಮಹಾನ್ ವ್ಯಕ್ತಿ ಎಂದೆಂದಿಗೂ ಅಮರ, ಜೀವಂತ .
-ನಯನ ಬಜಕೂಡ್ಲು
ನಾನು ಬೆಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಆಗ ತಾನೆ ವ್ರತ್ತಿ ಪ್ರಾರಂಭಿಸಿದ್ದೆ. ನಿಸಾರ್ ಅಹಮದ್ ಅವರು ಕೂಡ ಅಲ್ಲಿಯೇ ಉಪನ್ಯಾಸಕರಾಗಿದ್ದರು.
ಕವಿ ಮರೆಯಾದರೂ ಅವರ ಕಾವ್ಯ ಲೋಕದಲ್ಲಿ ಯಾವಾಗಲೂ ಚಿರಸ್ಥಾಯಿಯಾಗಿ ನಿಲ್ಲುತ್ತದೆ…ಎನ್ನುವ ಹಾಗೆ ನಿಸಾರ್ ಅಹಮದ್ ಅವರ ಬಗ್ಗೆ ಪರಿಚಯ ಲೇಖನ ಉದಾಹರಣೆ..ಧನ್ಯವಾದಗಳು ಮೇಡಂ
ಮಲೆನಾಡಿನ ಮಡಿಲು ,ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ , ಎಪ್ಪತ್ತರ ದಶಕದಲ್ಲಿ ನಮ್ಮ ಸಹೋದ್ಯೋಗಿಯಾಗಿದ್ದರು.
ಕೆ.ಎಸ್ ನಿಸಾರ್ ಅಹಮದ್ ಇವರ ನಿತ್ಯೋತ್ಸವ ಕವನ ಸಂಕಲನದಿಂದ ನಿಮ್ಮಿಷ್ಟದ ಗೀತೆಗಳ ಬಗ್ಗೆ ಪ್ರಸ್ತಾಪಿಸಿರುವಿರಿ. ನಿಜವಾಗಿಯೂ ಇಂದಿಗೂ ಕನ್ನಡಿಗರೆಲ್ಲರ ಪ್ರೀತಿಯ ಸಾಲುಗಳವು. ಚಂದದ ವಿಮರ್ಶಾತ್ಮಕ ಲೇಖನ..ಧನ್ಯವಾದಗಳು ನಯನಾ ಅವರಿಗೆ.
ಸ್ನಿಗ್ಧ ಸೌಂದರ್ಯ!