ಎಚ್ಚರಿಕೆಯ ಶುಭಾಶಯಗಳು
ಹೊಸವರ್ಷದಲಿ ಜಿನುಗುವ
ಮುಂಚೆ ಶುಭಾಶಯಗಳ ಸೆಲೆ,
ಶುರುವಾಗುವಂತಿದೆ
ಬ್ರೇಕಿಂಗ್ ನ್ಯೂಸ್ ನಲ್ಲಿ
ಮೂರನೆಯ ಅಲೆ
ಓಮಿಕ್ರಾನ್ ಮೆಲ್ಲಗೆ
ಹೆಣೆಯುತ್ತಿದೆ ತನ್ನದೇ ಬಲೆ,
ಅಲೆಗಳದು ಒಂದರ
ಮೇಲಿನ್ನೊಂದು ಅಪ್ಪಳಿಸಿರೆ,
ಮನಗಳ ಮೇಲೆ ಎಳೆದಂತೆ
ಆತಂಕದ ಬರೆ,
ಮುಚ್ಚಿರುವ ಕಣ್ಣನ್ನು
ಮತ್ತೊಮ್ಮೆ ತೆರೆ
ಮತ್ತೆ ಮಾಡಿಕೊಳ್ಳಲೇಬೇಕಿದೆ
ಅರ್ಧಮುಖ ಮರೆ
ಮತ್ತೆ ಮತ್ತೆ ಕೈತೊಳೆಯುವ
ಕಾಯಕಕ್ಕೆ ಹೋಗಬೇಕು ಮೊರೆ
ಹೊಸ ವರುಷದ ಬಾಗಿಲಲಿ
ದೊಡ್ಡದಿರಲೇನು ಮೂರನೆಯ
ಅಲೆಯ ಫೋಸು,
ದೊರೆಯಲಿದೆ ಇನ್ನೇನು
ಎಡತೋಳಿಗದು
ಮೂರನೇ ಡೋಸು
ಜೊತೆಗೆ ಒಂದಷ್ಟು ಜಾಗ್ರತೆ,
ಇನ್ನಷ್ಟು ನಿಗಾ ನೀ ವಹಿಸು
ಹಳೆಯದೆರಡು ವರ್ಷಗಳ ಪಾಡು
ತಹಬಂದಿಯಲಿದೆ ಈಗ ನೋಡು
ಮತ್ತೆ ಕೆಡದಿರಲಿ ಜನ ಜೀವನದ
ಪಾಡು
ಹೊಸ ವರ್ಷದಲಿ ಗುನುಗುತಿರಲಿ
ಎಚ್ಚರಿಕೆ, ಎಚ್ಚರಿಕೆ, ಎಚ್ಚರಿಕೆಯ
ಹಾಡು
ಸರ್ವರಿಗೂ ಹೊಸ ವರ್ಷದ ಎಚ್ಚರಿಕೆಯ ಶುಭಾಶಯಗಳು
-ನಟೇಶ
Very nice
ಹೊಸ ವರ್ಷದ ಶುಭಾಶಯಗಳೊಂದಿಗೆ ಪ್ರತಿಯೊಬ್ಬ ರೂ ತೆಗೆದುಕೊಳಲು ಬೇಕಾದ ಎಚ್ಚರಿಕೆಯನ್ನು ಕವನದಲ್ಲಿ ಕಟ್ಟಿಕೊಟ್ಟಿರುವ ರೀತಿ ಚೆನ್ನಾಗಿದೆ ಸಾರ್.
…….ಸೊಗಸಾಗಿದೆ….ಧನ್ಯವಾದಗಳು
ಹೌದು..ಹೊಸ ವರ್ಷದ ಶುಭಾಶಯವನ್ನು ಮನ:ಪೂರ್ತಿ ಹೇಳುವಂತಿಲ್ಲ… ಜೊತೆಗೇ ಇದೆಯಲ್ಲ ಭಯದ ಭೂತ!! ಎಚ್ಚರಿಕೆಯ ಮಾತುಗಳೊಂದಿಗೆ ಭಾವಪೂರ್ಣ ಕವನ ಬಹಳ ಸೊಗಸಾಗಿದೆ. ..ಧನ್ಯವಾದಗಳು ಸರ್.
ಕವಿತೆಯಲ್ಲಿ ಶುಭಾಶಯಗಳೊಂದಿಗೆ ಎಚ್ಚರಿಕೆಯ ಗಂಟೆಯೂ ಮೊಳಗಿರುವುದು ಅತ್ಯಂತ ಸಮಯೋಚಿತವಾಗಿದೆ. ಅಭಿನಂದನೆಗಳು
ಎಲ್ಲರಿಗೂ ಹೃದಯಪೂರ್ವಕ ವಂದನೆಗಳು