ಕಪ್ಪು
ಕಪ್ಪು ಮೋಡಗಳು
ಕರಗುತ ಬರುತಿವೆ
ತಂಪನೆರೆಯಲು ಧಾರುಣಿಗೆ
ಕಪ್ಪು ಮಣ್ಣು
ಬೆಳೆಸಿ ಕೊಡುತಿವೆ
ಗಿಡಗಳ ತುಂಬಾ ಬಿಳಿ ಅರಳೆ
ಕಪ್ಪು ಕೋಗಿಲೆಯ
ಇಂಪಿನ ಕಂಠ
ಹೃದಯಕೆ ಹರಿಸಿದೆ ರಾಗ ಸುಧೆ
ಕಪ್ಪು ಕಣ್ಣಿಗೆ
ಕಾಡಿಗೆ ತೀಡೆ
ಮಿನುಗುವ ಮಾಯೆ ಅಚ್ಚರಿಯೆ
ಕಪ್ಪು ಹೊಗೆಯಲಿ
ದೊಡ್ಡ ಕಾರ್ಖಾನೆ
ಮಿತಿಯೆ ಇರದು ಉತ್ಪಾದನೆಗೆ
ಕಪ್ಪಿನ ಬೆವರು,
ಲೇಖನಿ ಮಸಿಯು
ಬರೆದಿದೆ ಭವಿತ ಮನುಜನಿಗೆ
ಸುಡುವ ಬುಡದಲಿ
ಕಪ್ಪು ಪವಡಿಸಿದೆ
ಬೆಳಕ ನಂದಿಸದೆ ಉರಿಸುತಿದೆ
ಕಪ್ಪಿನ ಉದರದೆ
ಹುಟ್ಟಿನ ಆಟ
ಉಸಿರು ಚಿಗುರಿದೆ ವಿಸ್ಮಯದೆ
ಆದಿಯಿಂದಲೂ
ಬೆಳಕು ಚೆಲ್ಲಿದರು
ಕಪ್ಪಿಗೆ ಆಟ ಕಣ್ಣುಮುಚ್ಚಾಲೆ!
-ಅನಂತ ರಮೇಶ್
ಚೆನ್ನಾಗಿದೆ ಕವನ.
ಧನ್ಯವಾದಗಳು.
ಕಪ್ಪು ಕಸ್ತೂರಿ ಕವನ ಚೆನ್ನಾಗಿದೆ ಸಾರ್
ವಾವ್ ಕವಿತೆಯ ವಿಶ್ಲೀಷಣೆ… ಸೊಗಸಾಗಿ ಮೂಡಿಬಂದಿದೆ ಸಾರ್.
ಧನ್ಯವಾದಗಳು.
ಕಪ್ಪು ಕಪ್ಪೆಂದು ಹೀಗಳೆಯಬೇಡಿ ಹುಚ್ಚಪ್ಪಗಳಿರಾ… ಅದರಿಂದಲೇ ಆವಿರ್ಭವಿಸಿದ ಸುಂದರತೆಯನ್ನು ನೋಡಿದಿರಾ ??.. ಎನ್ನುತ್ತಿದೆ ಈ ಸುಂದರ ಕವನ.
ಧನ್ಯವಾದಗಳು.
ಕಪ್ಪು ಬಣ್ಣದ ಮೇಲೆ ಬೆಳಕ ಚೆಲ್ಲುವ ಸುಂದರ ಕವಿತೆಗಾಗಿ ಅಭಿನಂದನೆಗಳು ತಮಗೆ.
ಮೆಚ್ಚುಗೆ ಖುಷಿಕೊಟ್ಟಿತು.