”ಆಟ”
ಹಾವು ಏಣಿ
ಆಟದ್ಹಾಂಗೆ ಈ ಬದುಕು
ಕನಸುಗಳ ಏಣಿಯ
ಆಸೆಯಿಂದ ಹತ್ತುತ್ತೇವೆ
ಕಾದಿರುತ್ತದೆ ಅಲ್ಲಿ ವಿಧಿ
ಹಾವಿನ ರೂಪದಲ್ಲಿ
ನಿರಾಸೆಯಿಂದ ಪಾತಾಳಕ್ಕೆ
ಬಿದ್ದಿರುತ್ತೇವೆ,,,
ಮೋಹವೋ
ಆಶಾವಾದವೋ
ಮತ್ತೆ ದಾಳ ಉರುಳಿಸಿ
ಸಿಕ್ಕಿದ ಏಣಿ ಹತ್ತುತ್ತೇವೆ,,,
ನಾನು ಬರಲೆಂದೆ
ಕಾದು ಕುಳಿತ್ತಿತ್ತು
ವಿಧಿ ಮತ್ತೆ ಹಾವಾಗಿ,
ಮತ್ತೆ ,,,
ಕೆಳಗೆ ಉರುಳಿದೆ,
ಗುರಿ ಮುಟ್ಟುವವರೆಗೂ
ಬಿಡುವುದಿಲ್ಲ ನಾನು ಎಂದು
ನಾಳೆಗಳೆಂಬ ಏಣಿಯ
ಪುನಃ ಹತ್ತುತ್ತೇನೆ,
ಬಿದ್ದರೂ ,,,
ವಿಧಿಗೆ ಹೇಳಿದ್ದೇನೆ
ನೀನಾ,,,ನಾನಾ,,,ಎಂದು,,,
ನೋಡೆಬಿಡೋಣವೆಂದು,,,
ಎಷ್ಟು ಸಾರಿ ಬೀಳಿಸಿದರು
ಮತ್ತೆ ಮತ್ತೆ ಹತ್ತಿ ಬರುವ,
ನನ್ನ ಕಂಡು ಪಾಪಾ ಎಂದು
ವಿಧಿಯೇ ಸುಮ್ಮನಾಗಿಬಿಡಬಹುದು,,,
ಹಾವು ಕಚ್ಚದೆ,,,,
ಮುಂದೆ ಹೋಗಲು ಬಿಡಬಹುದು,,
ಅಲ್ಲವಾ,,,,,,,ಏನಂತೀರಿ,,,,,,!
–ವಿದ್ಯಾ ವೆಂಕಟೇಶ್. ಮೈಸೂರು
ಖಂಡಿತಾ ಅದೇ ಅಲ್ಲವೇ ಜೀವನ.ಈಸಬೇಕುಇದ್ದು ಜಯಿಸಬೇಕು.. ಒಳ್ಳೆಯ ಸಂದೇಶ ಹೊತ್ತ ಕವನ ಚೆನ್ನಾಗಿಮೂಡಿಬಂದಿದೆ ಸೋದರಿ..ಸ
ಕಾರಾತ್ಮಕ ಚಿಂತನೆ ಗೆ ನನ್ನ ಅಭಿನಂದನೆಗಳು
ಬಹಳ ಸುಂದರ. ಬದುಕಿಗೂ, ಹಾವು ಏಣಿ ಆಟಕ್ಕೂ ನಿಕಟ ಸಂಬಂಧವಿದೆ.
ವಿಧಿಗೆ ಹೇಳಿದ್ದೇನೆ
ನೀನಾ,,,ನಾನಾ,,,ಎಂದು,,,
ನೋಡೆಬಿಡೋಣವೆಂದು,,,
Great sprit of life..ಅಭಿನಂದನೆಗಳು!!
ಬಾಳಿನ ಹಾವು ಏಣಿ ಆಟವನ್ನು ಭಾವನಾತ್ಮಕವಾಗಿ ಭಟ್ಟಿ ಇಳಿಸಿದ ಸೊಗಸಾದ ಕವನ.
ಸುಂದರ ಸಕಾರಾತ್ಮಕ ಕವನ. ಜೀವನದ ಹಾವು ಏಣಿಯಾಟದಲ್ಲಿ ಬೀಳುವುದ ಮರೆತು ಏರುವುದರತ್ತ ಮುಖ ಮಾಡಿ ಸಾಗೋಣ. ಅಭಿನಂದನೆಗಳು.