ಬೆಳಕು-ಬಳ್ಳಿ

ಜೀವನ‌ ನೌಕೆ

Share Button

ಅನಾರೋಗ್ಯಕರ ಸ್ಪರ್ಧೆಯ ಬಿರುಗಾಳಿಗೆ ನೌಕೆ ಸಿಕ್ಕಿದೆ
ಧಾವಿಸಿ ಬರುವ ಋಣಾತ್ಮಕ ಅಭಿಪ್ರಾಯಗಳ ಅಲೆಗಳಿಗೆ  ಹೊಯ್ದಾಡಿದೆ

ಕೈ ಕೊಟ್ಟ ದಿಕ್ಸೂಚಿ ನಾವೆಯ ದಿಶೆಯನ್ನೇ ಬದಲಿಸಿಲು ಕಾದಿದೆ
ಅಲ್ಲಲ್ಲಿ ಹರಿದು ತೂತು ಬಿದ್ದ ಹಾಯಿ ಆತಂಕವ ತಂದೊಡ್ಡಿದೆ

ಸಾಂಕ್ರಾಮಿಕ ರೋಗದ ಸುನಾಮಿ ನೌಕೆಯ ಮುಳುಗಿಸಲು ಹವಣಿಸಿದೆ
ನಿರೀಕ್ಷೆಗಳೆಂಬ ನಡುಗಡ್ಡೆಗೆ ಢಿಕ್ಕಿ ಹೊಡೆಯುವ ಸಂಭವ ಹೆಚ್ಚಾಗಿದೆ
ಸಮಸ್ಯೆಗಳ ಸಾಗರದಲಿ ಪರಿಹಾರದ ತೀರ ಕಾಣದಾಗಿದೆ

ಚಿಂತೆ ಬಿಡು ಪಯಣಿಗನೇ ನೀನಿರುವುದು ಬಡಪೆಟ್ಟಿಗೆ ಮುಳುಗುವ ಸಣ್ಣ ಹಾಯಿ ದೋಣಿಯಲ್ಲ
ಕಂಗೆಟ್ಟು ಕೈ ಚೆಲ್ಲಿ ಕುಳಿತುಕೊಳ್ಳುವ ನಾವಿಕರು ಇಲ್ಲಿಲ್ಲ

ಸುಳಿಗಾಳಿಯಲ್ಲೂ ಸರಿ ದಿಕ್ಕಿಗೆ ಮುನ್ನಡೆಸುವ ಛಲವಿದೆಯಲ್ಲಾ
ಕಾರ್ಗತ್ತಲಲ್ಲೂ ಬೆಳಕು ತೋರುವ ಸಾಲು ದೀಪಗಳಿವೆಯಲ್ಲಾ

ಭಯದಲಿ ಬೊಬ್ಬಿಡುವ  ಅಳ್ಳೆದೆಯ ಪಯಣಿಗರು‌ ಇಲ್ಲಿ ಯಾರಿಲ್ಲ
ಭರವಸೆಯ ಹುಟ್ಟಾಕಿ ದಡವ ಮುಟ್ಟಿಸುವ ಛಲಗಾರರೇ ಎಲ್ಲಾ

ಕೆರಳಿ *ಪ್ರಕ್ಷುಬ್ಧವಾದ* ಶರಧಿ  ಶಾಂತವಾಗುವುದು ಬೇಗ
ಪರಿಶ್ರಮದ ಪ್ರಾಮಾಣಿಕ ಪ್ರಯತ್ನ ಕೈಗೂಡುವುದು ಈಗ

ಪರಮ ಉತ್ಕೃಷ್ಟತೆಯೇ ಎಲ್ಲದಕೂ ನಿತ್ಯ‌ ಪರಿಹಾರ
ಕೃತ್ತಿಮತೆ ಇಲ್ಲದ ನಡತೆಯೇ ಸಕಲಕೂ ಆಧಾರ

ಪರಿಣಾಮದ ಪ್ರಭಾವ ಚಿಂತಿಸುತ್ತಾ ಕೂಡದೆ ಕಾರ್ಯಪ್ರವೃತ್ತನಾಗು
ಅಭಿಮಾನದ ಮನೋಭಾವದಲಿ ಕ್ರಿಯೆಯಲ್ಲಿ ತೊಡಗು

ಕೆ.ಎಂ ಶರಣಬಸವೇಶ

17 Comments on “ಜೀವನ‌ ನೌಕೆ

  1. ಸರಳ ಸುಂದರ ಕವನ ಚೆನ್ನಾಗಿದೆ ಸಾರ್

  2. ಕಷ್ಟಕಾಲದಲ್ಲಿ ಜೀವನವನ್ನು ಎದುರಿಸುವ ಧೈರ್ಯ, ಸ್ಥೈರ್ಯ ನಮ್ಮ ಒಳ್ಳೆಯ ನಡವಳಿಕೆಯಿಂದಲೇ ಬರುವವು… ಛಿದ್ರಗೊಂಡ ಹಾಯಿಯ ಯೋಚನೆಯಿಲ್ಲದೆ, ನೌಕೆ ಸರಿಯಾದ ದಿಶೆಯಲ್ಲಿ ಚಲಿಸುವುದರಲ್ಲಿ ಸಂಶಯವಿಲ್ಲ ಎಂಬ ಆಶಾಭಾವ ತುಂಬಿದ ಕವನ ಬಹಳ ಚೆನ್ನಾಗಿದೆ ಸರ್.

  3. ಕವನದಲ್ಲಿರುವ ಸುಂದರ ಸಕಾರಾತ್ಮಕ ಭಾವ ಬಲು ಇಷ್ಟವಾಯಿತು. ಆಶಾವಾದಕ್ಕೆ ಪೂರಕವಾದ ಕವನಕ್ಕಾಗಿ ಅಭಿನಂದೆಗಳು.

  4. ಸಕಾರಾತ್ಮಕ ಭಾವಗಳನ್ನು ಹೊಮ್ಮಿಸುವ ಸುಂದರ ಸಾಲುಗಳು

  5. ಆತ್ಮವಿಶ್ವಾಸವನ್ನು ಹೆಚ್ಚಿಸುವ ಕವನದ ಆಶಯ‌ಚೆನ್ನಾಗಿದೆ

  6. ತುಂಬಾ ಚೆನ್ನಾಗಿದೆ ಸರ್ !! ಸರಳ ಸುಂದರ ಸಕಾರಾತ್ಮಕ ಭಾವನೆಗಳನ್ನು ಹೊರಹೊಮ್ಮಿಸುವ ಕವನ

  7. ತುಂಬಾ ಸುಂದರ ಕವನ. ಇದನ್ನು ವಾಚಿಸಿದ್ದೇನೆ
    ಕವಿಗಳು ಕೇಳಿದರೆ ತುಂಬಾ ಖುಷಿಯಾಗುತ್ತದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *