ಬರೆಯುವ ಹೊತ್ತು
ಸಾಸಿವೆಯ ಚಟಪಟ ಸದ್ದಿಗೆ
ಪಟ್ಟಂತ
ನೆನಪಾಗಿತ್ತೊಂದು ಸಾಲು,
ಗೀಚಿ ಅಲ್ಲಿಂದಲ್ಲೆೇ
ಮತ್ತೆ ಮುಂದುವರೆಯಿತು
ಸಾರಿಗೆ ಒಗ್ಗರಣೆಯ ಕಮಾಲು,
ಕಂದನೊಂದು ಶೃುತಿಹಿಡಿದು
ಅಮ್ಮಾ ಎಂದ ಗಳಿಗೆಯೇ
ಸ್ಪುರಿಸಿತ್ತು ಮುಗ್ಧತೆಯ ಕವಿತೆ!
ಮುಗಿಯದ ಈ ಪಾತ್ರೆ, ಮಗುವ ಆ ಕ್ಲಾಸು
ಈ ಕುಕ್ಕರ್, ಆ ಮಿಕ್ಸರ್ ಎಂಬ
ಬಿಡುಗಡೆಯಿಲ್ಲದ ಕ್ಷಣಗಳ ನಡುವೆಯೂ
ಚಿಮ್ಮುತ್ತಲೇ ಇತ್ತು
ಬರವಣಿಗೆಯ ಒರತೆ!
ಒಣ ಕಸ ಹಸಿಕಸದೊಳಗಣ
ಒಣಗದೇ ಹಸಿಯಾಗಿಯೇ ಇದೆ
ಅವಳ ಕನಸು!
ಜೇಡನ ಬಲೆ,ಅಡುಗೆ ಒಲೆ
ಖಾಲಿಯಾದ ಉಪ್ಪು,
ಬಾಡಿಹೋದ ಸೊಪ್ಪು ಎಂಬ
ನೆಪದಿಂದ ಬಗ್ಗಲಿಲ್ಲ
ಸಾಧನೆಯ ಹಾದಿಯಲ್ಲಿರುವ ಮನಸು!
ಹೊತ್ತುಗೊತ್ತಿಲ್ಲದ
ಹತ್ತು ಹಲವು ಜವಾಬ್ದಾರಿಯಿರುವ
ಆರಾಮಾಗಿ ಕೂರಲಾರದ
ಅವಳಿಗಿದೆಲ್ಲವೂ ಬೆಳೆಯುವ ಹೊತ್ತು!
ಬಳಲಿದ ಕಣ್ಣುಗಳಿಗೆ
ನಿದ್ರಿಸುವ ಇರಾದೆಯಿಲ್ಲ
ಏಕೆಂದರೆ
ಬೆಳಗಿಂದ ಸಂಧ್ಯೆಯವರೆಗೆ
ಕೂಡಿಟ್ಟ ಪದಗಳೆಲ್ಲ ಪ್ರಾಸವಾಗಿ
ಇದೂ ಬರೆಯುವ ಹೊತ್ತು!
-ಆಶಾ ಹೆಗಡೆ,ಬೆಂಗಳೂರು
ಸೊಗಸಾಗಿದೆ ಕವಿತೆ
ಧನ್ಯವಾದಗಳು ಮೇಡಂ
ಸೂಪರ್
ಧನ್ಯವಾದಗಳು..
ಸಂಸಾರದ ನಡುವೆ ಅರಳುವ ಕವಿ ಮನಸ್ಸಿನ ಭಾವಗೀತೆ
ಸೊಗಸಾಗಿದೆ ಅಶಾ
ಧನ್ಯವಾದಗಳು ಮೇಡಂ
ಎಲ್ಲಾ ಬವಣೆಗಳ ನಡುವೆ ನಮ್ಮ ಭಾವನೆಗಳಕಸರತ್ತು..
ಬಿಡದೆ ಬಾಗಿದೆ ಮನಸ್ಸು… ಹಾಗೇ ಕವನದ ಸೊಗಸು..ಆಶಾ.. ಅಭಿನಂದನೆಗಳು.
ತುಂಬಾ ಧನ್ಯವಾದಗಳು ಮೇಡಂ
ಸೊಗಸಾದ ಕವನ
ಧನ್ಯವಾದಗಳು ಮೇಡಂ
ಸೊಗಸಾಗಿದೆ
ಧನ್ಯವಾದಗಳು ಮೇಡಂ
ಬರವಣಿಗೆಯ ಒರತೆ ಸೊಗಸಾಗಿದೆ
ಧನ್ಯವಾದಗಳು ಮೇಡಂ..
ಅಡುಗೆಕೋಣೆಯಲ್ಲಿರುವ ಮಹಿಳೆ ಕವನ ಬರೆಯಬೇಕಾದರೆ ಮಾಡಬೇಕಾದ ಕಸರತ್ತು ಕವನದಲ್ಲಿಬಹಳ ಚೆನ್ನಾಗಿ ಮೂಡಿಬಂದಿದೆ. ಹೌದು… ನಮ್ಮ ಮೊಬೈಲ್ ಕವರಲ್ಲಿ ಎಲ್ಲಾ ಚಟಪಟಗಳ ಪಳೆಯುಳಿಕೆಗಳೂ ಸಿಗಬಹುದು ಅಲ್ವೇ?!
ಧನ್ಯವಾದಗಳು ಮೇಡಂ
ಖಂಡಿತ ಹೌದು ಮೇಡಂ….ಮೊಬೈಲ್ ಕವರ್ ಪದೇ ಪದೇ ಬದಲು ಮಾಡೋ ಪರಿಸ್ಥಿತಿ ಇದೆ..
ಬಿಡುವು ಸಿಗದೆ, ಬವಣೆ ಮುಗಿಯದೆ ಸಾಗುತ್ತಿರುವ
ಈ ಸಂಸಾರ ರಥದಲ್ಲಿ ಭಾವನೆಗಳ ಬಿತ್ತುವ ಕಸರತ್ತು
ಶ್ಲಾಘನೆಗೆ ಅರ್ಹ.
ಧನ್ಯವಾದಗಳು ಮೇಡಂ
ಅಡೆತಡೆಗಳ ಅಡ್ಡಗೋಡೆಯನ್ನು ಸೀಳಿಕೊಂಡು ಹೊರಹೊಮ್ಮಿದ ಕವಿತೆಯ ಸೊಗಸಿಗೆ ಸಾಟಿಯುಂಟೆ? ಚಂದದ ಕವನಕ್ಕಾಗಿ ಅಭಿನಂದನೆಗಳು.
ಧನ್ಯವಾದಗಳು…..
ಸುಂದರ ಕವಿತೆ
ಧನ್ಯವಾದಗಳು
modala baari nodi odide.bahala hidisit.
pl give mobile no of editor
nvr 9845565238
ಧನ್ಯವಾದಗಳು