ಸ್ವಾತಂತ್ರ್ಯ
ದೇಶಕ್ಕೆ, ದೇಹಕ್ಕೆ ಸಿಕ್ಕಿತೆಂದು ಸ್ವಾತಂತ್ರ್ಯ,
ಅಪಭ್ರಂಶಗೊಳಿಸಿ ಅದ,
ಮಾಡದಿರು ಹೇ ಮನುಜ, ನೀ ಸಮಾಜವ ಅತಂತ್ರ.
ಲಜ್ಜೆಗೆಟ್ಟ ರಾಜಕೀಯ, ಮತಿಗೆಟ್ಟ ಸ್ವೇಚ್ಛಾಚಾರ,
ಸೊಗಡಿಲ್ಲದ ಸಂಬಂಧ, ಲಗಾಮಿಲ್ಲದರಸನಾ,
ಇವುಗಳು ಖಂಡಿತಾ ಕುರುಹುಗಳಲ್ಲ, ನಮ್ಮಸ್ವಾತಂತ್ರ್ಯದ.
ಪಂಚಭೂತಗಳ ಹಾನಿಗೊಳಿಸದೆ,
ಪಂಚೇಂದ್ರಿಯಗಳ ಘಾಸಿಗೊಳಿಸದೆ,
ಜೀವಕುಲಗಳ ಶೋಷಿಸದೆ,
ಸುಸಂಸ್ಕೃತ, ಸೃಜನಶೀಲ, ಸಂಸ್ಕಾರವಂತ,
ಮನಗಳ ಹೊಂದಿ, ಬೇಕೂ – ಬೇಕೂ ಸ್ವಾತಂತ್ರ್ಯ
ಎಂಬ ಹಪಹಪಿಯಿಂದ ಹೊರಬಂದು,
ಮನದಿಚ್ಛೆಯಂತೆ, ಚಿತ್ತದಿಚ್ಛೆಯಂತೆ, ಜೀವಿಸಿದರದೆ,
ಲೋಕ ಸ್ವಾತಂತ್ರ್ಯ, ದೇಶ ಸ್ವಾತಂತ್ರ್ಯ, ವ್ಯಕ್ತಿ ಸ್ವಾತಂತ್ರ್ಯ.
-ಪದ್ಮಾ ಆನಂದ್
Beautiful
Thank you very much.
nice
Thank you
Fine
Thanks a lot
ವಿವಿಧ ಸ್ವಾತಂತ್ರ್ಯಗಳ ಅನುಭೂತಿಯನ್ನು ಹಿಡಿದಿಟ್ಟ ಕವನ ಸೊಗಸಾಗಿದೆ ಮೇಡಂ.