ಸಮರ
ಜೀವನವೊಂದು ಸಮರವೆಂದು ಬಲ್ಲವರು ಹೇಳಿದ್ದಾರೆ
ಹಾಗಲ್ಲವೆಂದು ಹೇಳಲು ನನಗೂ ಯಾವ ಕಾರಣಗಳೂ ಇಲ್ಲ
ಸಮರ ಒಳಗೂ ಹೊರಗೂ ಹಗಲೂ ಇರುಳೂ
ಏನನ್ನು ಪಡೆಯಲು ಏನನ್ನು ಕಳೆಯಲು
ನನಗೂ ಗೊತ್ತಿಲ್ಲ ಯಾರಿಗೂ ಗೊತ್ತಿಲ್ಲ
ಸಮರಾಂಗಣಕೆ ಹೊರಟರು ವೀರಯೋಧರು
ಕೋದಂಡವೇನು ಗದೆಯೇನು ತೋಮರಗಳೇನು
ಈಟಿ ಕಠಾರಿ ಮುಸಲ ಭರ್ಚಿ ಕೊಂತಗಳೇನು
ಇರಿಯಹೊರಟರೆ ಈಟಿ ಇರಿಯುವುದು ಎಂಥವರ!
ತಿವಿಯ ಹೊರಟರೆ ಗದೆಯು ತಿವಿಯುವುದು ಎಂಥವರ!
ಬೀಸಿಎಸೆದರೆ ಬಾಣ ಬಾಧಿಸುವುದು ಎಂತೆಂಥವರ!
ಹಾಗೆಂದು ಇರಿಯದಿದ್ದರೆ ತಿವಿಯದಿದ್ದರೆ ಎಸೆಯದಿದ್ದರೆ ……… ……..
ಅದು ರಣಾಂಗಣವೂ ಅಲ್ಲ.
ಒಳಗಣೊಳಗಣ ಸಮರಕ್ಕೆ ಸಿದ್ಧರು ಯಾರು
ಅವರೆ ಮತ್ತೆ ಸಿದ್ಧರು !
–-ಡಾ.ಮಹೇಶ್ವರಿ. ಯು, ಕಾಸರಗೋಡು
ಚಿಕ್ಕದಾಗಿ ಚೊಕ್ಕ ಅರ್ಥವುಳ್ಳ ಬರಹ. ಅಭಿನಂದನೆಗಳು ಮಹೇಶ್ವರಿಯವರೆ.
ಅರ್ಥಪೂರ್ಣ ಕವನ
ಕವನ ಬಹಳ ಚೆನ್ನಾಗಿದೆ.ಆಲೋಚನೆಗೆ ಪೆಟ್ಟಾಗಿದೆ ಅಭಿನಂದನೆಗಳು ಮೇಡಂ.
ಕೊನೆ ಮೊದಲು ಇಲ್ಲದ ಬದುಕಿನ ಹೋರಾಟದ ಒಳಾರ್ಥ
ತುಂಬಾ ನೈಜವಾಗಿ ಮೂಡಿದೆ.
ಚೆನ್ನಾಗಿದೆ
ಜೀವನ ಸಮರದ ನೈಜ ಚಿತ್ರಣವಿರುವ ಸುಂದರ ಕವನ
ಮನದೊಳಗಿನ, ಬಾಳಿನೊಳಗಿನ ಸಮರ…ಭಾವನಾತ್ಮಕ ಚಿಂತನೆ ಸೊಗಸಾಗಿದೆ.
meaningful ending.
ಎಲ್ಲರಿಗೂ ಧನ್ಯವಾದಗಳು.