ಪ್ರೀತಿ
ಪ್ರೀತಿಯ ನೆನಪೆಂದರೆ
ವೈಶಾಖದ ಮೊದಲ ಮಳೆಯ ಮಣ್ಣಿನ ಘಮಲು
ಪ್ರೀತಿಯ ಆನಂದವೆಂದರೆ
ಮಳೆಯಿಂದ ಹಸಿರುಟ್ಟು ನಗುವ ಇಳೆ
ಪ್ರೀತಿಯ ಹಿತವೆಂದರೆ
ಕೊರೆವ ಮಾಗಿಕಾಲದ ಎಳೆ ಬಿಸಿಲು.
ಪ್ರೀತಿಸುವ ಸುಖವೆಂದರೆ
ಭುವಿಗೆ ಚೆಲ್ಲಿದ ಪಾರಿಜಾತದ ಸೊಗಸು
ಪ್ರೀತಿಯ ಚೆಂದವೆಂದರೆ
ಬಾಗಿದ ಹೊಂಬಣ್ಣದ ಬತ್ತದ ತೆನೆ
ಪ್ರೀತಿಯ ಪರಿಮಳವೆಂದರೆ
ಗಾಳಿಯಲಿ ಬೆರೆತ ಮಲ್ಲಿಗೆಯ ಘಮ.
ಪ್ರೀತಿಯ ಸ್ಪರ್ಶವೆಂದರೆ
ಬಿರು ಬಿಸಿಲಲಿ ಬೀಸಿದ ತಂಗಾಳಿ
ಪ್ರೀತಿಯ ಧ್ಯಾನವೆಂದರೆ
ಹೂ ಕಾಯಿ ಹಣ್ಣಾಗಿ ಮಾಗುವ ಕ್ರಿಯೆ
ಪ್ರೀತಿಯ ರೂಪವೆಂದರೆ
ಕಾರಣಗಳಿಲ್ಲದ ಹೆತ್ತವ್ವನ ಮಮಕಾರ.
ಪ್ರೀತಿಯ ಅಂತ್ಯವೆಂದರೆ
ಚಿಗುರಿಗೆಡೆ ಮಾಡಿ ಕಳಚಿದ ಹಣ್ಣೆಲೆ.
-ಎಂ. ಆರ್. ಅನಸೂಯ
ನಿಮ್ಮ ಪ್ರಿತಿಯ ಕವನ ಚೆನ್ನಾಗಿದೆ. ಧನ್ಯವಾದಗಳು
ಧನ್ಯವಾದಗಳು
ಧನ್ಯವಾದಗಳು
ಪ್ರೀತಿಯು ಹಲವು ಮಗ್ಗಲುಗಳನ್ನು ಕವನದಲ್ಲಿ ಕಟ್ಟಿಕೊಟ್ಟಿರುವ ರೀತಿ ಮುಂದೆ ತಂದಿತು.ಅಭಿನಂದನೆಗಳು ಮೇಡಂ.
ಧನ್ಯವಾದಗಳು
ಪ್ರೀತಿಯ ವಿವಿಧ ಆಯಾಮಗಳ ವಿಶ್ಲೇಷಣೆ ಸೊಗಸಾಗಿದೆ.
ಧನ್ಯವಾದಗಳು
ಪ್ರೀತಿಗೂ ಪ್ರಕೃತಿಗೂ ಅವಿನಾಭಾವ ನಂಟು. ಪ್ರಕೃತಿಯ ಒಡನಾಟದಲ್ಲೇ ಹುಟ್ಟುವುದು ಪ್ರೀತಿ. ತುಂಬಾ ಸುಂದರವಾದ ಕವನ.
ಧನ್ಯವಾದಗಳು
ಧನ್ಯವಾದಗಳು
ಧನ್ಯವಾದಗಳು
ಪ್ರೀತಿಯ ನವಿರಾದ ಭಾವಗಳನ್ನು ಪ್ರಕೃತಿಯ ಸುಂದರತೆಯೊಂದಿಗೆ ಮೇಳೈಸಿ ಕಟ್ಟಿರುವ ಪ್ರೀತಿಯ ಕವಿತೆ ಪ್ರೀತಿಪಾತ್ರವಾಗುತ್ತದೆ. ಅಭಿನಂದನೆಗಳು
ಧನ್ಯವಾದಗಳು
ಚಂದದ ಕವಿತೆ
ಧನ್ಯವಾದಗಳು
Super gurugale
ಕವನ ತುಂಬಾ ಚೆನ್ನಾಗಿದೆ ಮೇಡಂ
ಪ್ರೀತಿಯ ಪ್ರತಿ ಮಜಲುಗಳನ್ನು ತೆರೆದಿಟ್ಟ ಸುಂದರ ಕವನ.
ಪ್ರೀತಿಯ ಪ್ರತಿ ಮಜಲುಗಳನ್ನೂ ತೆರೆದಿಟ್ಟ ಸೊಗಸಾದ ಕವನ.
ಕವನದ ಮುಕ್ತಾಯ ಅರ್ಥಪೂರ್ಣವಾಗಿದೆ.
ಧನ್ಯವಾದಗಳು