“ಭಾವ ಸಂಬಂಧ” ಪ್ರಕಟಿಸಿದ್ದಕ್ಕಾಗಿ ಕೃತಜ್ಞತೆಗಳು….

Share Button

ಗೆ,
ಸಂಪಾದಕರು
ಸುರಹೊನ್ನೆ.ಕಾಮ್

ಮಾನ್ಯರೆ,

ನನ್ನ ಮೊದಲ ಕಾದಂಬರಿ, “ಭಾವ ಸಂಬಂಧ” ವನ್ನು ಪ್ರೀತಿಯಿಂದ ಹತ್ತು ಕಂತುಗಳಲ್ಲಿ ಧಾರಾವಾಹಿಯಾಗಿ ಪ್ರಕಟಿಸಿದ ಸುರಹೊನ್ನೆ.ಕಾಮ್ ನ ಸಂಪಾದಕಿ, ಆತ್ಮೀಯರಾದ ಶ್ರೀಮತಿ. ಹೇಮಮಾಲಾ ಅವರಿಗೆ ಮೊದಲಿಗೆ ಹೃದಯಾಂತರಾಳದಿಂದ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಈ ಮೂಲಕ ಜಾಲತಾಣದ ಓದುಗರು ನನ್ನ ಕಾದಂಬರಿಯನ್ನು ಓದುವಂತಾದುದು ನನಗೆ ಅತ್ಯಂತ ಸಂತೋಷವನ್ನುಂಟು ಮಾಡಿದೆ.

ಸಂಪಾದಕಿ ಶ್ರೀಮತಿ. ಹೇಮಮಾಲಾ ಅವರು ಸುರಹೊನ್ನೆ.ಕಾಮ್ ಮೂಲಕ ಹಲವಾರು ಬರಹಗಾರರಿಗೆ ತಮ್ಮ ಬರಹಗಳನ್ನು ಪ್ರಕಟಿಸಲು ವೇದಿಕೆಯನ್ನು ಒದಗಿಸಿ ಕೊಟ್ಟಿರುವುದು ಅತ್ಯಂತ ಶಾಘ್ಲನೀಯ ಕಾರ್ಯವಾಗಿದೆ.  ಪ್ರತೀ ಗುರುವಾರ ಪ್ರಕಟವಾಗುವ “ಸುರಹೊನ್ನೆ” ಯಲ್ಲಿ ವೈವಿಧ್ಯಮಯ ಲೇಖನಗಳು ಓದಲು ಸಿಗುವುದು ಮನಸ್ಸಿಗೆ ಮುದ ನೀಡಿ  ಜ್ಞಾನಾರ್ಜನೆಗೂ ಸಹಕಾರಿಯಾಗಿದೆ. ಅಂಬೆಗಾಲಿಡುತ್ತಿರುವ ಲೇಖಕರನ್ನು ಪ್ರೋತ್ಸಾಹಿಸುತ್ತಲೂ, ಪ್ರೌಢ ಲೇಖಕರ ಲೇಖನಗಳನ್ನೂ ಪ್ರಕಟಿಸುತ್ತಾ, ಒಂದು ಪರಿಪೂರ್ಣ ಜಾಲತಾಣ ಪತ್ರಿಕೆಯಾಗಿ ಓದುಗರ ಕುತೂಹಲವನ್ನು ತಣಿಸುತ್ತಾ, ಆಸಕ್ತಿಯನ್ನು ಹೆಚ್ಚಿಸುತ್ತಾ ಮುನ್ನಡೆಯುತ್ತಿರುವ ಜನಪ್ರಿಯ “ಸುರಹೊನ್ನೆ” ಗೆ ನಾನು ಅಭಾರಿಯಾಗಿದ್ದೇನೆ.  ನನ್ನ ಕಾದಂಬರಿಯನ್ನು ಪ್ರಕಟಿಸುವಾಗ ಸೂಕ್ತವೆನಿಸುವ ಸಾಂದರ್ಭಿಕ ಚಿತ್ರಗಳನ್ನೂ ಪ್ರಕಟಿಸಿರುವುದು ಕಾದಂಬರಿಯನ್ನು ಹೆಚ್ಚು ಅಕರ್ಷಣೀಯವಾಗಿಸಿದೆ.

ಇಲ್ಲಿ ಇನ್ನೊಂದು ವಿಷಯವನ್ನು ನಾನು ಪ್ರಸ್ತಾಪಿಸಲು ಇಚ್ಚಿಸುತ್ತೇನೆ.  ಅದು “ಸುರಹೊನ್ನೆ” ಯ ಓದುಗರ ಕುರಿತಾದುದು.  ಈ ಜಾಲತಾಣ ಪತ್ರಿಕೆಯ ಪ್ರೌಢ ಓದುಗರು ನನ್ನ ಕಾದಂಬರಿಯನ್ನು ಓದುವುದಷ್ಟೇ ಅಲ್ಲದೆ ಪ್ರತೀವಾರವೂ ಹಲವಾರು ರೀತಿಯ ಉತ್ತಮ ಪ್ರತಿಕ್ರಿಯೆಗಳನ್ನು ನೀಡಿ ಬೆನ್ನು ತಟ್ಟಿದ್ದಾರೆ.  ಓದುಗರ ಈ ಸದಭಿರುಚಿಗಾಗಿ ಅವರುಗಳಿಗೂ ಸಹ ನನ್ನ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ. ಯಾವುದೇ ಲೇಖಕರು ತಮ್ಮ ಆತ್ಮತೃಪ್ತಿಗಾಗಿ ಬರೆಯುತ್ತಾರಾದರೂ ಓದುಗರ ಪ್ರತಿಕ್ರಿಯೆಗಳು ಖಂಡಿತಾ ಅವರಿಗೆ ಪ್ರೋತ್ಸಾಹವನ್ನೂ, ತಮ್ಮನ್ನು ತಾವು ತಿದ್ದಿ ತೀಡಿಕೊಳ್ಳಲು ಅವಕಾಶಗಳನ್ನು ಮಾಡಿ ಕೊಡುತ್ತವೆ. ಹಾಗಾಗಿ “ಸುರಹೊನ್ನೆ” ಯ ಓದುಗರ ಬದ್ಧತೆ ನನಗೆ ಮೆಚ್ಚುಗೆಯಾಗಿದೆ.

ನನ್ನ ಮತ್ತು “ಸುರಹೊನ್ನೆ” ಬಳಗದೊಂದಿಗಿನ ಭಾವ ಸಂಬಂಧ ಹೀಗೆಯೇ ಮುಂದುವರೆಯಲಿ  ( ಏಕೆಂದರೆ, blood is thicker than water ಎಂಬ ಮಾತನ್ನು ಮುಂದುವರೆಸಿ, emotions are stronger then blood ,ಎಂದು ಹೇಳಲು ಬರೆದ ಕಾದಂಬರಿ ಇದು) ಎಂಬ ಇಚ್ಚೆಯನ್ನು ವ್ಯಕ್ತಪಡಿಸುತ್ತಾ ಮತ್ಯೊಮ್ಮೆ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ.

ವಂದನೆಗಳು

ತಮ್ಮ ವಿಶ್ವಾಸಿ,
ಸಹಿ/-
-ಪದ್ಮ ಆನಂದ್

6 Responses

  1. Hema says:

    ನಿಮ್ಮ ಬರವಣಿಗೆ ನಿರಂತರವಾಗಿ ಮೂಡಿ ಬರಲಿ ಎಂಬ ಹಾರೈಕೆ. ಧನ್ಯವಾದಗಳು

    • Padma Anand says:

      ಮೆಚ್ಚಿ, ಪ್ರಕಟಿಸಿ ಸವಿನುಡಿಗಳಿಂದ ಪ್ರೋತ್ಸಾಹಿಸಿದ ನಿಮಗೆ ವಂದನೆಗಳು.

  2. ನಯನ ಬಜಕೂಡ್ಲು says:

    “ಭಾವ ಸಂಬಂಧ ” ತುಂಬಾ ಸೊಗಸಾಗಿತ್ತು. ಮುಂದೆಯೂ ನಿಮ್ಮ ಕಾದಂಬರಿ /ಕತೆಗಳು ಬರಬಹುದೆಂಬ ನಿರೀಕ್ಷೆ ಇದೆ.

    • Padma Anand says:

      ನಿಮ್ಮ ನಿರೀಕ್ಷೆಯನ್ನು ಹುಸಿಗೊಳಿಸದಿರುವ ಶಕ್ತಿ ನನ್ನ ಲೇಖನಿಗೆ ಬರಲಿ. ನಿಮ್ಮ ನಿರಂತರ ಪ್ರೋತ್ಸಾಹಕ್ಕೆ ಮತ್ತೊಮ್ಮೆ ಧನ್ಯವಾದಗಳು

  3. ಶಂಕರಿ ಶರ್ಮ says:

    ನಾವೆಲ್ಲರೂ ಓದಿ ಆನಂದಿಸಿದ ಕಿರು ಕಾದಂಬರಿ..”ಭಾವ ಸಂಬಂಧ”. ಪ್ರತಿಹಂತದಲ್ಲೂ ಕುತೂಹಲವನ್ನು ಉಳಿಸಿ, ಸಾಗಿ, ಬೆಳೆದ ಕಥಾಹಂದರ ಬಹಳ ಇಷ್ವವಾಯ್ತು ಮೇಡಂ. ಇನ್ನೂ ಹಲವಾರು ಬರಹಗಳು ತಮ್ಮ ಲೇಖನಿಯಿಂದ ಮೂಡಿಬರಲಿ ಎಂದು ಹೃತ್ಪೂರ್ವಕ ಹಾರೈಕೆಗಳು.

    • Padma Anand says:

      ತಮ್ಮ ಶುಭಹಾರೈಕೆಗಳಿಗಾಗಿ ತುಂಬು ಮನದ ಧನ್ಯವಾದಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: