ಭಾವ ಬೇತಾಳ
ಗಡಿಬಿಡಿಯಲ್ಲೂ ಒಡಮೂಡುವುದು
ಭಾವಗಳಡಿಗಡಿಗೇ..
ಪಡಿಯಚ್ಚಿನ ತರ ಮನದ ಬಿಕ್ಕುಗಳು
ರೆಕ್ಕೆ ಪಡೆವ ಘಳಿಗೇ…
ಸಣ್ಣಗೆ ಹರಿಯುವ ಜುಳು ಝರಿಯಂತೆ
ಕವಿತೆಯ ಸಂಚಾರ..
ಕಣ್ಣಿಗೆ ಕಾಣದ ಆತ್ಮದ ಒಳಗೆ ಮಾರ್ದನಿಸುವುದಿಂಚರ..
ಶೀತಲ ಗಾಳಿಗೆ ಥರಗುಡುವಂತೆ
ಮನದೊಳಗಿನ ಮಾತು..
ಬೇತಾಳದ ತರ ಬೆನ್ನನುಬಿಡದೆ
ಕಾಡುವ ಪಿಸುಮಾತು..
ಸೋನೆ ಮಳೆಯಂತೆ ತೊಟ್ಟಿಕ್ಕುವುದು
ಎದೆಯೊಳಗಿನ ಗೀತಾ..
ಬೇನೆಯೊಂದು ಸುಖ ಕೊಡುವ ಪರಿಗೆ
ನನ್ನೊಳಗಿನ ನಾನೇ ಚಕಿತ..
-ವಿದ್ಯಾಶ್ರೀ ಅಡೂರ್
ಕಾಡುವ ಭಾವಗಳು ಅನಾವರಣ ಗೊಂಡ ಪರಿ ಸೊಗಸಾಗಿದೆ.
ಕವನ ಚೆನ್ನಾಗಿದೆ.
ನಮ್ಮೊಳಗಿನ ದನಿ..ಆತ್ಮದ ಮಾತು ಎಂದರೆ ಇದೇ ಏನೋ..
ಭಾವಪೂರ್ಣ ಕವನ ಚೆನ್ನಾಗಿದೆ.
ಲಯಬದ್ಧ ಸುಂದರ ರಚನೆ.
ಸರಳ ಸುಂದರ ಕವನ
ಮನದ ತುಮುಲಗಳ ಸುಂದರ ಅನಾವರಣ