ಚುಟುಕುಗಳು
1.ಆಸರೆ
ಆವರಿಸಿರೆ ದು:ಖವು ಸುತ್ತಲು
ಕಾಣುವುದೆಲ್ಲೆಡೆ ಬರೀ ಕತ್ತಲು
ಚಿಂತೆಯು ಮನವ ಮುತ್ತಲು
ಆಸರೆಯು ಬೇಕು ಮೇಲೆತ್ತಲು
2.ತೃಪ್ತಿ
ಬಡತನದಿ ಜೀವನ ಬಾಡಿದೆ
ಶ್ರೀಮಂತರ ಆಶ್ರಯ ಬೇಡಿದೆ
ಸಿಗದಿರಲು ಮನದಲ್ಲೆ ಸಿಡಿದೆ
ಸ್ವಾವಲಂಬನೆ ತೃಪ್ತಿಯ ನೀಡಿದೆ
3.ರಕ್ಷಣೆ
ನಿಸರ್ಗ ಮಾತೆಯ ಪ್ರೀತಿಯ ಪ್ರೋಕ್ಷಣೆ
ಪಡೆದಿಹ ಒಡಲಲಿ ನಡೆದಿದೆ ವೀಕ್ಷಣೆ
ಕ್ರೂರಿಗಳಿಂದ ಆಗುತಿರೆ ಪ್ರಕೃತಿ ಭಕ್ಷಣೆ
ಆಗಬೇಕಿದೆ ಇದರ ಭದ್ರತೆಯ ರಕ್ಷಣೆ
4.ಶ್ರಮ
ಶ್ರಮವಹಿಸಿ ದುಡಿದರೆ ಕೈಕಾಲು ಕೆಸರು
ಆದರೂ ಸಿಗುವುದು ಸುಖವೆಂಬ ಮೊಸರು
ಕಷ್ಟದ ಕತ್ತಲಿನಲಿ ಮೂಡುವುದು ನೇಸರು
ಫಲದ ಸಂಪತ್ತು ತರುವುದು ಭಾರೀ ಹೆಸರು
5.ವರಕವಿ
ಬಡತನ ಬೇಂದ್ರೆಯ ಬದುಕನು ಸುಡಲು
ತುಂಬಿತು ಗೀತೆಯ ಪ್ರೇಮದ ಒಡಲು
ನಾಕುತಂತಿ ಜ್ಞಾನಪೀಠ ಪ್ರಶಸ್ತಿಯ ಕೊಡಲು
ವರಕವಿಯಾದರು ಕಾವ್ಯದ ಕಡಲು
-ಶಂಕರಿ ಶರ್ಮ, ಪುತ್ತೂರು.
ಅಂತ್ಯ ಪ್ರಾಸದ ಚೌಪದಿಗಳು ಚೆನ್ನಿವೆ.
ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು ಮೇಡಂ.
ನಾಲ್ಕು ಸಾಲಿನಲ್ಲಿ ಸತ್ವಪೂರ್ಣವಾದ ಸಂದೇಶ ಸಾರುವ ನಿಟ್ಟಿನಲ್ಲಿ ಮೂಡಿ ಬಂದಿರುವ ಚುಟುಕುಗಳು ಚೆನ್ನಾಗಿವೆ ಅಭಿನಂದನೆಗಳು ಮೇಡಂ.
ಮೆಚ್ಚುಗೆಯ ಪ್ರತಿಕ್ರಿಯೆಗೆ ಹೃತ್ಪೂರ್ವಕ ನಮನಗಳು ಮೇಡಂ.
ಸೊಗಸಾದ, ಅರ್ಥಗರ್ಭಿತವಾದ, ಮನಮುಟ್ಟುವ ಚುಟುಕಗಳು.
ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು ಮೇಡಂ.
ಬದುಕಿನ ಮೌಲ್ಯಗಳ ಚಂದದ ಪ್ರಸ್ತುತಿ
ಸುಂದರವಾದ ಚುಟುಕುಗಳು