ಜಗವೆಲ್ಲಾ ನಿಮ್ಮದೇ
ಕೊಲ್ಲದಿರಿ ಮೆಲ್ಲ ಮೆಲ್ಲನೆ ನಿಮ್ಮ ಮನದೊಳಗಿನೆಲ್ಲ ಕನಸುಗಳನ್ನ
ಬಳಸಿರೆಲ್ಲ ಒಳ್ಳೆಯ ಮೂಲಗಳನ್ನ ಪ್ರಯತ್ನ ಕೈಬಿಡುವ ಮುನ್ನ
ಹುಮ್ಮಸ್ಸಿದ್ದವರು ಹೊರಡುತ್ತಾರೆ ಹಿಡಿಯೆ ಮಳೆಬಿಲ್ಲನ್ನ
ಕೈಚೆಲ್ಲಿ ಕೂರದಿರಿ ಮಾಡದೇ
ಯಾವ ಪ್ರಯತ್ನ
ಏರಿ ಮೇಲೆ ಸಣ್ಣ ಸಣ್ಣ ಮೆಟ್ಟಿಲು ಮೆಟ್ಟುತ್ತ
ಎರೆಹುಳ ಸಿಕ್ಕಿದರೆ ಮುಂದೆ ಸಾಗಿ ಅದರಿಂದ ಮೀನು ಹಿಡಿಯುತ್ತ
ನಮಗಲ್ಲವಿದು ಜಗವು
ಎನ್ನದಿರಿ ವಿಧಿಯ ಹಳಿಯುತ್ತ
ಮನಸು ಮಾಡಿ ಹೊರಟರೆ
ನಿಮ್ಮದೇ ಈ ಜಗವೆಲ್ಲಾ ಖಂಡಿತ
-ನಟೇಶ (ಬಿ ಸಿ ನಾರಾಯಣ ಮೂರ್ತಿ)
ಸ್ಪೂರ್ತಿದಾಯಕ . ಪ್ರಯತ್ನವಿಲ್ಲದೆ ಏನು ಆಗದು ಎಂಬ ಸಂದೇಶವಿರುವ ಪದ್ಯ. ಆಶಾವಾದ ಹೊರಹೊಮ್ಮುವ ನುಡಿಗಳು ಇಷ್ಟವಾಯಿತು.
ಪ್ರಯತ್ನದ ಪ್ರಾಮುಖ್ಯತೆಯನ್ನು ಚಿಕ್ಕದಾದರೂ ಚೊಕ್ಕವಾಗಿ, ಗಟ್ಟಿಯಾಗಿ ಹಿಡಿದಿಟ್ಟಿದ್ದೀರಿ
ವಿಧಿಯನ್ನು ಹಳಿಯದೆ, ಸ್ವಪ್ರಯತ್ನದಿಂದ ಮುಂದುವರಿಯಬೇಕೆಂಬ ಸತ್ವಯುತ ಸಂದೇಶ ಹೊಂದಿರುವ ಚಂದದ ಕವನ.
ತುಂಬಾ ಚೆನ್ನಾಗಿದೆ, ಸ್ಫೂರ್ತಿ ತುಂಬುವ ಸಾಲುಗಳು