ಕಾಯುವ ಕಾಗುಣಿತ..
ಕಣ್ಣಿಗಳಿಗೆ ಗೋಚರಿಸದಂತೆ
ಕಾಣದ ಲೋಕದಲಿ ಕುಳಿತಿರುವೆ
ಕಿವಿಗಳನು ಹಿಂಡುತ ನಮ್ಮನು
ಕೀಲು ಗೊಂಬೆಗಳಂತಾಡಿಸುವೆ.
ಕುಣಿಸುತ ಆಡಿಸುತ್ತ ನಿನ್ನಯ
ಕೂಳಿನಾಳನ್ನಾಗಿಸಿಕೊಂಡಿರುವೆ
ಕೃತಕೃತ್ಯಯ ಜೀವನವ ಹೊಂದಲು
ಕೆಲವು ಬುದ್ಧಿಮಾತನು ಹೇಳಿರುವೆ.
ಕೇಡಕು ಒಳಿತುಗಳಲ್ಲಿ ನಮ್ಮನು
ಕೈಹಿಡಿದು ಸದಾ ನಡೆಸುತ್ತಿರುವೆ
ಕೊನೆಯುಸಿರುವವರೆಗೆ ನಿನ್ನಯ
ಕೋಟಿಬಾರಿ ಸ್ಮರಿಸಿದರೆ ರಕ್ಷಿಸುವೆ.
ಕೌಲಿನ ನಿಯಮದಂತೆ ನಮ್ಮನು
ಕಂದಮ್ಮಗಳಂತೆ ಸಾಕಿ ಸಲಹುವೆ
ಕಃ ನಿನ್ನಿಚ್ಚೆಯಂತೆ ನಮ್ಮ ಆಟವನು
ಮುಗಿಸಿ ನಿನ್ನೆಡೆಗೆ ಕರೆದೊಯ್ಯುವೆ.
-ಶಿವಮೂರ್ತಿ.ಹೆಚ್. ದಾವಣಗೆರೆ.
ಅರ್ಥಪೂರ್ಣ ವಾದ ಕವನ ಅಭಿನಂದನೆಗಳು ಸಾರ್
ಧನ್ಯವಾದಗಳು ಮೇಡಂ
ತುಂಬಾ ಚೆನ್ನಾಗಿದೆ ಸರ್,, ಕಾಗುಣಿತದೊಂದಿಗೆ ಮಾರ್ಮಿಕ ಸಂದೇಶವನ್ನು ಸಾರುವ ಕವನ .ಹೊಸ ತರದ ಆಲೋಚನಾ ಶೈಲಿ ಸೊಗಸಾಗಿದೆ.
Nice
ಕಾಗುಣಿತದೊಡನೆ ವಾಸ್ತವದ ಅನಾವರಣ
ಚಂದದ ಕವನ
ಕಾಗುಣಿತದಲ್ಲಿ ಒಳ್ಳೆಯ ಸಂದೇಶವನ್ನು ಹೊತ್ತು ತಂದ ಕವನ ಬಹಳ ಇಷ್ಟವಾಯ್ತು.
ಕಾಗುಣಿತದಲ್ಲಿ ಕವನ ಸೊಗಸಾಗಿ ಮೂಡಿದೆ. ಅಭಿನಂದನೆಗಳು