ಮುಗಿಯದ ಕಥೆ

Share Button

ಮಜಲುಗಳನ್ನು ದಾಟಿ ಹೋದವರು
ಬರುತ್ತಲೇ ಇದ್ದಾರೆ, ನೋಡಲು;
ಮುಗಿಯಿತೇ? ಎಂದು ‌ನಿಟ್ಟುಸಿರು ಬಿಟ್ಟರೆ
ಮತ್ತಷ್ಟು ಜನರು ಬಂದಿದ್ದರು, ಬೇಡಲು;

ಏನೆಂದು ಹೇಳಲಿ ಈ ಕಥೆಯ
ಹೋದವರೇ ತಿರುಗಿ ತಿರುಗಿ ಬರುತ್ತಾರೆ, ಮಾಡಲು;
ಚಣಕಾಲ ಕೂರುವ ಹಾಗಿಲ್ಲ, ನಿಲ್ಲುವ ಹಾಗಿಲ್ಲ
ತಿರುಗಿದ ಚಕ್ರ ಇನ್ನಷ್ಟು ‌ಜನರನ್ನು‌ ತಂದಿತ್ತು, ಕರೆಯಲು;

ಊಟದ ತಟ್ಟೆಯೂ ತೂತು
ಹಂಚಿ ತಿನ್ನಲೂ ಉಳಿಯುವುದಿಲ್ಲ, ಬದುಕಲು;
ಸಂತೆಯ ರೊಟ್ಟಿಯಂಗಡಿ ಕಾದಿದ್ದರೂ ತಣ್ಣಗೆ
ಬಾಯಿಗಿಡುವಷ್ಟರಲ್ಲಿ ಕರಗಿ ಹೋಗುತ್ತದೆ, ಸಾಯಲು;

ಒಂದು ಹೊಳೆಯ‌ ತೆರೆಯ ನಡುವೆ ಸಾಗೆಂದರೆ
ಕವಿಭಾಷೆ ಬೇಡವಯ್ಯ ಎನುವರು, ಬೈಯಲು;
ಸಾಕಾಗಿ ಹೋಗುತ್ತದೆ, ಜೀವನ ಹಾಗೆ ಜೀವ ಹೀಗೆ
ಏನ ಹೇಳಲಿ ಇವರಿಗೆಂದು ಕೂತರೆ ಸಿಗುವುದು, ಇದ್ದಿಲು;

ಅಬ್ಬಾ! ಒಬ್ಬರನು ಸಾಕಾಯಿತು ಇನ್ನು ಚಿಂತೆಯಿಲ್ಲ
ಎನುವ ಹಾಗೇ ಇಲ್ಲ ನೂರಾರು ಮಂದಿಯಿರುವರು,‌ ಸಾಲು ಸಾಲು;
ಎಲ್ಲರಿಗೂ ಬೇಕು, ಎಲ್ಲರೂ ಬೇಕು ಬಿಸಿ ತುಪ್ಪದ ಹಾಗೆ
ಓಡಿಸಿದರೆ ಬರುತ್ತಾರೆ, ಇಟ್ಟುಕೊಂಡರೆ ಸಿಗಿಯುತ್ತಾರೆ, ಹುಲಿಗಳು;

©ಸ್ಕಂದಮಿತ್ರ

– ಗೌರೀಶ್ ಅಬ್ಳಿಮನೆ

3 Responses

  1. ನಯನ ಬಜಕೂಡ್ಲು says:

    ಗಾಢ ಅರ್ಥ ಹೊಂದಿರುವ ಕವನ

  2. ಶಂಕರಿ ಶರ್ಮ says:

    ಬಹಳ ಆಳವಾದ ಅರ್ಥ ಹೊಂದಿರುವ ಕವನ.. ಯಾರು ಬರುತ್ತಾರೆ??.. ತಿಳಿದುಕೊಳ್ಳಬೇಕಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: