ಹಸಿರೆಲೆಯೇ ಬದುಕು
ದಿನದ ಮಾರಾಟ ಸರಕು
ಹೊಟ್ಟೆಗೆ ಹಿಟ್ಟಿಗೆ ಎಲ್ಲದಕು
ವೀಳ್ಯದೆಲೆ ನಿತ್ಯ ಬೇಕು
ಎಲೆಗಳ ರಾಶಿ ತಲೆಯಲಿ
ನಡಿಗೆ ಸಾಗಿದೆ ದಾರಿಯಲಿ
ದುಡಿವ ನಾರಿಯರ ಕರದಲಿ
ಸಾಲಾಗಿ ನಿಂತಿದೆ ಸಂತೆಯಲಿ
ಬಾಯಿಗೆ ಕೆಂಪನು ನೀಡಿರುವೆ
ದೇಹಕೆ ಆರೋಗ್ಯವ ಕೊಟ್ಟಿರುವೆ
ಮಾರಾಟಗಾರರಿಗೆ ಹಣವನು ತಂದಿರುವೆ
ಕೆಲವರಿಗೆ ಚಟವಾಗಿ ಕಾಡಿರುವೆ
ಪೂಜೆಗೂ ಸಲ್ಲುವೆ ನೀ
ದೃಷ್ಟಿಯ ನಿವಾಳಿಸಲು ನೀ
ಅಡಿಕೆ ಸುಣ್ಣಕೆ ಸಂಗಾತಿ ನೀ
ಬಾಳ ಹಸನಾಗಿಸುವ ಹಸಿರು ನೀ
ಬುಟ್ಟಿಯೊಳಗೆ ನಗುತಿರುವೆಯಲ್ಲ
ಹೊತ್ತಿರುವವರ ಹಾದಿ ಸಲೀಸಲ್ಲ
ಹಸಿರೆ ಉಸಿರು ಈ ಹೆಂಗಳೆಯರಿಗೆಲ್ಲ
ಬಾಡದಿರಲಿ ಆ ಜೀವಗಳು ನಿನ್ನಂತೆಲ್ಲ.
-ಪ್ರತಿಭಾ ಪ್ರಶಾಂತ.
ವಿಳೇದೆಲೆ ಮೂಲಕ ಬದುಕಿನ ಅದೂ ಹೆಣ್ಣಿನ ಬದುಕಿನ ಸೂಕ್ಷ್ಮಗಳನ್ನು ಬಿಚ್ಚಿಡುವ ಪ್ರಯತ್ನ ಸುಂದರ ವಾಗಿ ಮೂಡಿ ಬಂದಿದೆ ಈ ಕವಿ ತೆರೆಯಲ್ಲಿ.ಅಭಿನಂದನೆಗಳು.ಮೇಡಂ.
ವೀಳ್ಯದೆಲೆಯ ಮಹತ್ವ ಹಾಗೂ ಅದು ಬದುಕಿಗೆ ಆಧಾರ ವಾಗುವ ಪರಿಯನ್ನು ವಿವರಿಸುವ ಕವನ
ಚಂದದ ಕವನ
ಚೆಂದದ ಕವನ
ಚಂದದ ಹಸಿರು ವೀಳ್ಯದೆಲೆಯ ಉಪಯೋಗದೊಂದಿಗೆ ಅದನ್ನು ಹೊತ್ತ ಮಹಿಳೆಯ ಬಾಳನ್ನು ಹೋಲಿಸಿರುವ ಸರಳ ಸುಂದರ ಕವನ.