ಚುನಾವಣೆ
ಹಳ್ಳಿ ಹಳ್ಳಿಯಲ್ಲೂ
ದಿನದಿಂದ ದಿನಕ್ಕೆ
ಕಾವೇರುತ್ತಲಿದೆ
ಚುನಾವಣೆ ಕಾವು.
ಹಣ ಹೆಂಡಕ್ಕಾಗಿ
ಮಾರಾಟವಾಗಿದೆ
ಪ್ರಜಾಪ್ರಭುತ್ವದ ಪ್ರಭು
ಮತದಾರನ ಮತವು.
ಹಾದಿಬೀದಿಗಳಲ್ಲೂ
ಉಮೇದುವಾರರು
ಹಿಂಬಾಲಕರಿಂದ
ಪ್ರಚಾರ ಬಲುಜೋರು.
ಜಾತಿವಾರು ಮತಗಳ
ಬೇಟೆಯ ಲೆಕ್ಕಾಚಾರ
ನಾನೆಂದು ನಿಮ್ಮವನೆಂಬ
ನಟನೆಯ ಪ್ರಚಾರ.
ಹಣಹೆಂಡವಿಲ್ಲದ ಚುನಾವಣೆ
ಆಯೋಗದಿಂದ ಘೋಷಣೆ
ಕಾನೂನು ಚಾಪೆಯಡಿಯಲಿ
ಚುನಾವಣೆ ರಂಗೋಲಿಯಡಿಯಲಿ.
ಚುನಾವಣೆಯ ದಿನದಂದು
ಮತಗಟ್ಟೆತನಕ ರಾಜ ಮರ್ಯಾದೆ
ಕೈಬೆರಳಿಗೆ ಮಸಿಬೀಳುವವರೆಗೆ
ಕೈಕಾಲು ಹಿಡಿಯುವರು ನಮಗೆ.
ಸೋತವರದು ಮನೆಯ ಕಡೆಗೆ
ಗೆದ್ದವರದು ಭರ್ಜರಿ ಮೆರವಣಿಗೆ
ಮುಂದಿನ ಚುನಾವಣೆಯ ಬರೋತನಕ
ಮತದಾರರ ಮರೆತೇ ಬಿಡುವ ನಾಯಕ.
-ಶಿವಮೂರ್ತಿ.ಹೆಚ್, ದಾವಣಗೆರೆ.
ವಾಸ್ತವ
ಧನ್ಯವಾದಗಳು ಗುರುಗಳೇ
ವಾಸ್ತವ ಜಗತ್ತಿನ ಒಂದು ರಾಜಕೀಯ ನೋಟವನ್ನು ಈ ಕವನದಲ್ಲಿ ಬಿತ್ತರಿಸಿದ ಬಗೆ ಚೆನ್ನಾಗಿ ಮೂಡಿ ಬಂದಿದೆ.ಅಭಿನಂದನೆಗಳು.
ಧನ್ಯವಾದಗಳು ಮೇಡಂ
ಕೊಳಕು ರಾಜಕೀಯಕ್ಕೆ ಕನ್ನಡಿ ಹಿಡಿದಿರುವ ಸೊಗಸಾದ ಕವನ
ಧನ್ಯವಾದಗಳು ಗುರುಗಳೇ