ಮನದೊಳಗೊಂದು ಮಲ್ಲಯುದ್ಧ
ಮುದವಿಲ್ಲ ಮನಕೆನ್ನ
ಹದವಿಲ್ಲ ನಡೆಯೆನ್ನ
ವದನದಲಿ ಸೂಸುವ
ಹುಸಿಯಾದ ನಗೆಯನ್ನ
ಹೇಗೆ ಬಚ್ಚಿಡಲಿ…
ಎಲ್ಲಿ ಬಿಚ್ಚಿಡಲಿ….
ಜತನದೊಳು ಕಾಯ್ದಂತ
ಕಥನಗಳು ಬಹಳಿಹುದು
ಮಥನಮಾಡಲು ಮನದ
ಮಡಿಕೆಯೊಳು ತೇಲಿ
ಹೇಗೆ ಬಚ್ಚಿಡಲಿ….
ಎಲ್ಲಿ ಬಿಚ್ಚಿಡಲಿ…..
ಮುಸುಕೊಳಗಿನಾ ಗುದ್ದು
ರೇಶಿಮೆಯ ಹೊರಹೊದ್ದು
ಸರಿತಪ್ಪು ಸೀಮೆಗಳು
ಮಸುಕಿನಲಿ ಬಿದ್ದು
ಹೇಗೆ ಬಚ್ಚಿಡಲಿ….
ಎಲ್ಲಿ ಬಿಚ್ಚಿಡಲಿ….
ನಶೆಯೊಂದು ಕಾಡುತಿದೆ
ವಿಷದಂತೆ ಏರುತಿದೆ
ಹಸಿಬಿಸಿಯ ಕನಸುಗಳು
ಖುಷಿಯ ಕೊಲ್ಲುತಿದೆ
ಹೇಗೆ ಬಚ್ಚಿಡಲಿ….
ಎಲ್ಲಿ ಬಿಚ್ಚಿಡಲಿ….
-ವಿದ್ಯಾಶ್ರೀ ಅಡೂರ್, ಮುಂಡಾಜೆ.
Wow very nice
Very nice ವಿದ್ಯಾ
ಅರ್ಥಪೂರ್ಣವಾಗಿದೆ ನಿಮ್ಮ ಕವನ ಮೆಡಂ
ಸುಂದರವಾದ ಕವನ. ಮನದ ಬೇಗುದಿಯನ್ನು ಹೊರಹಾಕಲಾಗದ ಚಡಪಡಿಕೆ.
Nice expressions
ಮನದ ತಳಮಳವನ್ನು ಸಹಜವಾಗಿ ಹಿಡಿದಿಟ್ಟ ಕವನ.