ಆಶಯ
ದೀಪ ಹಚ್ಚಿರೆಲ್ಲ
ಸಿಡಿವ ಮದ್ದನಲ್ಲ
ಬೆಳಕ ಹರಡಿರಲ್ಲ
ಹೊಗೆಯ ವಿಷವನಲ್ಲ
ಸತ್ತ ನರಕನಿಗೆ
ಮರುಹುಟ್ಟು ಕೊಡದಿರಿ!
ಬಲಿಯು ಬರುವಾಗ
ಇರಲಿ ಶುದ್ಧ ಗಾಳಿ
ಕಿವಿಗಡಚಿಕ್ಕುವ
ಶಬ್ಧವದೇತಕೆ
ದನಕರು ಪ್ರಾಣಿಯ
ಪ್ರಾಣ ಹಿಂಡಬೇಕೆ?
ಗಂಧ ಬೀಸುವೆಡೆ
ಗಂಧಕವೇತಕೆ
ಹಕ್ಕಿಪಿಕ್ಕಿ ಹಾರಿ
ಹಾಹಾಕರಿಸಬೇಕೆ?
ದೀಪಾವಳಿಯಲಿ
ಜಗಮಗಿಸಲಿ ಜಗ
ನಿಲ್ಲಲಿ ಜೀವಿಯ
ಸಂಕಟ ಬೇಗೆ
ಹಬ್ಬ ಬರುವುದೇ
ಹರ್ಷ ಹರಡಲಿಕ್ಕೆ
ಬೆಳಕಲಿ ಮೀಯುತ
ಪ್ರೀತಿ ಹಂಚಲಿಕ್ಕೆ
– ಅನಂತ ರಮೇಶ್
ಉತ್ತಮ ಸಂದೇಶ ನೀಡುವ ಕವನಪಾಲಿಸುವ ಮನಸ್ಸು ಬರಲಿ. ಅಭಿನಂದನೆಗಳು ಸಾರ್.
ಧನ್ಯವಾದಗಳು.
ಒಳ್ಳೆಯ ಆಶಯ
ಆಶಯ ಎಲ್ಲರ ಮನ ಮುಟ್ಟಲಿ.
ಬಹಳ ಉತ್ತಮ ಆಶಯ ಹೊತ್ತ ಸೊಗಸಾದ ಕವನ.
ಧನ್ಯವಾದಗಳು.