ಕುವೆಂಪುರವರ ‘ಮಲೆಗಳಲ್ಲಿ ಮದುಮಗಳು’

Share Button
 

ಕುವೆಂಪುರವರ ಅದ್ಭುತವಾದ ಕಾದಂಬರಿಗಳಲ್ಲಿ ಮಲೆಗಳಲ್ಲಿ ಮದುಮಗಳು, ಕಾದಂಬರಿಯು ,ಅತ್ಯಂತ ಶ್ರೇಷ್ಠವಾದ ಕಾದಂಬರಿಯಾಗಿ ಓದುಗರ ಮನದಲ್ಲಿ ನಿಲ್ಲುತ್ತದೆ. ಕುವೆಂಪುರವರು *ಕುಪ್ಪಳಿ* ಎಂಬ ತಮ್ಮಹುಟ್ಟೂರು ಮಲೆನಾಡಿನಲ್ಲಿ ಇದ್ದುಕೊಂಡು ಮಲೆನಾಡಿನ ವೈಭವವನ್ನು ಓದುಗರ ಕಣ್ಣಿಗೆ ಕಟ್ಟಿಕೊಟ್ಟಿದ್ದಾರೆ. ಅವರ ಕಾದಂಬರಿಗಳೆಲ್ಲವೂ ಮಲೆನಾಡಿಗೆ ಸಂಬಂಧಿಸಿದ್ದೇ ಆಗಿದೆ.

ಮಲೆಗಳಲ್ಲಿ ಮದುಮಗಳು ಕಾದಂಬರಿಯ ಒಂದು ಸಾಮಾಜಿಕ ಚಿತ್ರಣವನ್ನು ಅಂದಿನ ಕಾಲಘಟ್ಟಕ್ಕೆ ನಡೆಯುತ್ತಿದ್ದ ವಿದ್ಯಮಾನಗಳನ್ನು ಪರಿಚಯಿಸುತ್ತಾ ಸಾಗುತ್ತದೆ. ಮಲೆಗಳಲ್ಲಿ ಮದುಮಗಳು ಎಂಬ ಹೆಸರೇ ಒಂದು ಸೋಜಿಗ. ಮಳೆ ಬಂದರೆ  ಬೆಟ್ಟ ಗುಡ್ಡಗಳು ಮದುವಣಗಿತ್ತಿಯಂತೆ ಶೃಂಗಾರಗೊಂಡು ಮನವನ್ನು ಪುಳಕಿತಗೊಳಿಸುತ್ತದೆ. ಇಂತಹ ಒಂದು ಕಾನನದ ನಡುವೆ ಮಲೆನಾಡ ಇಬ್ಬರು ಪ್ರೇಮಿಗಳು ಪ್ರೇಮಿಸಿ ಓಡಿ ಹೋಗಬಯಸುತ್ತಾರೆ. ಹಾಗೆ ಹೋದ ಸಂದರ್ಭದಲ್ಲಿ ಅವರಿಗಾದ ಅನುಭವಗಳು, ಅನುಭವಿಸಿದ ಕಷ್ಟ ಕಾರ್ಪಣ್ಯಗಳು, ಸಮಾಜದ ದೃಷ್ಟಿಯಲ್ಲಿ ಜನರು ಅವರನ್ನು ಕಂಡ ಬಗ್ಗೆ ಇವೆಲ್ಲವುಗಳನ್ನು ಬಹಳ ಮನಮುಟ್ಟುವಂತೆ, ಕುವೆಂಪುರವರು ಕಾದಂಬರಿಯಲ್ಲಿ ಚಿತ್ರಸಿದ್ದಾರೆ.

ಮಲೆನಾಡ ಸೌಂದರ್ಯ ಅಡಗಿರುವುದು “ಧೋ” ಎಂದು ಸುರಿವ ಮಳೆಯಲ್ಲಿ ಆ ಸಮಯದಲ್ಲಿ ತುಂಬಿಹರಿಯುವ ಹಳ್ಳಕೊಳ್ಳಗಳು ಅದನ್ನು ದಾಟಲು ಹೆಣಗಾಡುವ ಜನರು,.ಉಪಯೋಗಿಸುವ ಹರಿಗೋಲು, ಸಣ್ಣ ನಾಯಿಯೂ ಕೂಡ ನದಿಯನ್ನು ದಾಟಲು ಹರಸಾಹಸ ಪಡುವ ಚಿತ್ರಣ ಮನಕಲಕುತ್ತದೆ. ಇದೆಲ್ಲವನ್ನು ಕುವೆಂಪುರವರು ತಮ್ಮ ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ಅನಾವರಣಗೊಳಿಸಿದ್ದಾರೆ.


ಅಷ್ಟೇ ಅಲ್ಲ ಮಲೆನಾಡ ಪರಿಸರ,  ಆಚಾರ-ವಿಚಾರ ಸಂಪ್ರದಾಯಗಳು ಕಟ್ಟುಪಾಡುಗಳು ತಮ್ಮದೇ ಆದ  ರೀತಿ-ರಿವಾಜುಗಳನ್ನು ಒಳಪಡಿಸಿಕೊಂಡು ಜೀವನ ನಡೆಸುವ ಅವರ ಶೈಲಿ ಭಾಷಾ ಶೈಲಿ ಎಲ್ಲವನ್ನೂ ಕುವೆಂಪುರವರು ಬಹಳ ಸುಂದರವಾಗಿ ಬರೆದಿದ್ದಾರೆ.  ಮಲೆನಾಡಿನಲ್ಲಿ ಪ್ರತಿಯೊಬ್ಬ ಮನೆ ಒಡತಿಗೂ ಕೂಡ ತುಂಬಾ ಗೌರವವನ್ನು ಕೊಡುವುದನ್ನು ಕಾಣುತ್ತೇವೆ.ಅದನ್ನ ಕುವೆಂಪುರವರು ಕಾದಂಬರಿಗಳಲ್ಲಿ ವರ್ಣಿಸಿದ್ದಾರೆ. ಮಲೆಗಳಲ್ಲಿ ಮದುಮಗಳು ಓದುಗರನ್ನು ತುಂಬಾ ಚೆನ್ನಾಗಿ ಆಕರ್ಷಿಸುತ್ತದೆ ಕಾರಣ ಸಂಪೂರ್ಣವಾಗಿ ಮಲೆನಾಡಿನ ದೃಶ್ಯ ವೈಭವವನ್ನು ರೋಚಕವಾಗಿ ಬರೆದಿದ್ದಾರೆ.

ಕುವೆಂಪುರವರು ಕನ್ನಡದ ಧೀಮಂತ ಕವಿ ಎಂಬುದು ಕಾದಂಬರಿ ಓದುಗರಿಗೆ ಪ್ರತಿಬಾರಿ ಓದುವಾಗಿನ ಅನುಭವದ ಮಾತು. ಅವರು ಬರೆದ ಕಾದಂಬರಿಗಳು ಬೆರಳೆಣಿಕೆಯಷ್ಟು. ಆದರೆ ಅದರ ಬರವಣಿಗೆಯ ಶೈಲಿ ಭಾಷಾ ಪ್ರಭುಧ್ದತೆ ದೇಶಕಾಲ ಮೀರಿದ್ದು. ಆ ಮಹಾನುಭಾವರ ಪುಸ್ತಕವನ್ನು ಕನ್ನಡಿಗರು ಓದಲೇಬೇಕು. ಅವರನ್ನು ಅರಿಯಬೇಕಾದರೆ ಅವರ “ಆತ್ಮಕತೆ”  “ನೆನಪಿನದೋಣಿ” ಯನ್ನು ಕೂಡಾ ಓದಬೇಕು. ಈಗ ನಾನು ಇತ್ತೀಚಿಗೆ ಓದಿದ ಪುಸ್ತಕ ಅವರ ‘ಮಲೆಗಳಲ್ಲಿ ಮದುಮಗಳು’.

ಮಲೆಗಳಲ್ಲಿ ಮದುಮಗಳು ಓದುತ್ತಾ ಓದುತ್ತಾ ಇಡೀ ಮಲೆನಾಡನ್ನು ಸುತ್ತಿದ ಅನುಭವ ವಾಯ್ತು. ಕಾದಂಬರಿಯಲ್ಲಿ ಓದುಗ ತನ್ಮಯನಾಗುವಂತಹಾ ಭಾಷಾಶೈಲಿ. ಅಲ್ಲದೆ ಒಂದು ಕ್ರಿಯಾಶೀಲತೆಗೆ ಒಳಪಟ್ಟದ್ದು ಈ ಮಲೆಗಳಲ್ಲಿ ಮದುಮಗಳು.. ಇಡೀ ಕಾದಂಬರಿಯನ್ನು “ರಂಗಭೂಮಿ”ಗೆ ನಾಟಕ ರೂಪದಲ್ಲಿ ಅಳವಡಿಸಿ ಪ್ರಯೋಗ ಮಾಡಿದ್ದು ಮೈಸೂರಿನ ಕಲಾಮಂದಿರದಲ್ಲಿ. ಅದೂ ಇಡೀ ರಾತ್ರಿಯಲ್ಲಾ  ನಾಟಕ ನೋಡುವ ಭಾಗ್ಯ. ಉತ್ತಮವೆನಿಸುವಂತಹಾ ವಸ್ತ್ರ ವಿನ್ಯಾಸವನ್ನು ಹೊಂದಿರುವ ಹಾಗೂ ಮಲೆನಾಡ ಮಡಿಲಲ್ಲಿ ನಾವಿದ್ದೇವೇನೋ ಎಂಬಂತಹಾ ಸುಂದರ ವೇದಿಕೆಯ ಅದ್ಭತ ದೃಶ್ಯ ನಿರ್ಮಾಣ.. ಅಬ್ಬಾ ! ಎನಿಸುವಂತಹಾ ಅನುಭವ..ಇದೆಲ್ಲವೂ ಸಾದ್ಯವಾದದ್ದು ರಾಷ್ಟಕವಿ ಕುವೆಂಪುರವರ ಅದ್ಬುತ ಕಾದಂಬರಿ ಮಲೆಗಳಲ್ಲಿ ಮದುಮಗಳುವಿನಿಂದ.

ಇಂತಹಾ ಮಹಾನ್ ಮೇರು ವ್ಯಕ್ತಿತ್ವದ ಕುವೆಂಪುರವರ ಕೃತಿಗಳನ್ನು ಓದುವುದೇ ಸುಂದರ ಅನುಭೂತಿಯನ್ನು ಕೊಡುತ್ತದೆ. ರಾಷ್ಟಕವಿ ಕುವೆಂಪುರವರಿಗೆ ಈ ಮೂಲಕ ಅಕ್ಷರ ನಮನಗಳು.

– ಕಲಾಪ್ರಸಾದ್, ಮೈಸೂರು

7 Responses

  1. dharmanna says:

    ಮಲೆನಾಡಿನ ಸಿರಿಯನ್ನು ಕಾದಂಬರಿಯಲ್ಲಿ ಹೆಗೆ ವ್ಯಕ್ತವಾಗಿದೆ. ಪ್ರಕೃತಿ ಸೊಬಗನ್ನು ಮದುಮಗಳು ಎಂಬುದು ತಿಳಿಸಿ ಕೊಟ್ಟ ಬರಹಗಾರರ್ತಿ ಅವರಿಗೆ ಧನ್ಯವಾದಗಳು

  2. Dharmanna dhanni says:

    ಮಲೆನಾಡಿನ ಮದು ಮಗಳು ಕುರಿತು ಬರಹಗಾರರು ಉತ್ತಮ ವಿಮಶೆ್ ಮಾಡಿದ್ದಾರೆ. ಪ್ರಕೃತಿ ಸೊಬಗನ್ನು ಮದು ಮಗಳಂತೆ ಹೆಗೆ ಕಟ್ಟಿ ಕೊಟ್ಟಿದ್ದಾರೆ.ಎಂಬುದು ತಿಳಿಯಿತು.

  3. ಶಶಿಕಲಾ.ಕೆ.ಎಸ್. says:

    ನನ್ನ ಮೊದಲ ಬರಹವನ್ನು ಸುರಹೊನ್ನೆಯಲ್ಲಿ ಪ್ರಕಟಿಸಿದ್ದಕ್ಕಾಗಿ.ದನ್ಯವಾದಗಳು.
    ನನಗೆ ಪ್ರೋತ್ಸಾಹ ನೀಡಿದ ನಿಮಗೂ ಸುರಹೊನ್ನೆಯ ಎಲ್ಲ ಬರಹಗಾರರಿಗೂ ಹಾಗೂ ನನ್ನನ್ನು ಪರಿಚಯಿಸಿದ ಸಾಹಿತ್ಯಾಸಕ್ತ ರಿಗೂ ದನ್ಯವಾದಗಳು.

  4. ನಯನ ಬಜಕೂಡ್ಲು says:

    ಸೊಗಸಾದ ಕೃತಿ ಪರಿಚಯ. ಓದಿನೆಡೆಗೆ ಸೆಳೆವ ಒಂದು ಸೆಳೆತ ಇದೆ ಬರಹದಲ್ಲಿ.

  5. ಶಂಕರಿ ಶರ್ಮ, ಪುತ್ತೂರು says:

    ಕು.ವೆಂ ಪು ಅವರ ಅತ್ಯಂತ ಪ್ರಸಿದ್ಧ ಕೃತಿಗಳಲ್ಲೊಂದಾದ ‘ಮಲೆಗಳಲ್ಲಿ ಮದುಮಗಳು’ ಪುಸ್ತಕದ ಸೂಕ್ಷ್ಮ ವಿವರಣಾತ್ಮಕ ಪರಿಚಯ ಚೆನ್ನಾಗಿ ಮೂಡಿ ಬಂದಿದೆ.

  6. ನಂದಕಿಶೋರ್ says:

    ಮನ ಮುಟ್ಟು ವಂತೆ ಬರೆದಿರುವ ಕಲಾ ಪ್ರಸಾದರಿಗೆ ನಮಸ್ಕಾರಗಳು. ಅತ್ಯುತ್ತಮ ಭಾಷಾ ಪ್ರಯೋಗ ಸರಿಯಾದ ವಿಮರ್ಶೆಗಾಗಿ ಮತ್ತೊಮ್ಮೆ ನನ್ನ ನಮನಗಳು.

    ನಂದ ಕಿಶೋರ್
    ಬೆಂಗಳೂರು

  7. ಪಲ್ಲವಿ ಪ್ರಸಾದ್ says:

    ಸಂಕ್ಷಿಪ್ತವಾದ ಅರ್ಥ ಗರ್ಭಿತವಾದ ವರ್ಣನೆಗೆ ನಮನ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: