ರಾಧಾಕೃಷ್ಣ
ವಿರಹದಲಿ ನೀ ಬೆಂದು
ಬಳಲಿದರೆ ಸಖಿ
ನನ್ನ ಆತ್ಮ ದುಃಖಿಸದೆ
ಇರಲಾರದೇ ಸಖಿ
ಧರ್ಮಕ್ಕಾಗಿ ಪ್ರೀತಿಯ
ತ್ಯಾಗ ನಿನ್ನದು ಸಖಿ
ಸಖಿಯ ಇಚ್ಚೆಯೇ
ನನಗೆ ಧರ್ಮವಲ್ಲವೇ ಸಖಿ
ಕರೆದರೂ ಬರಲಾರದ
ವಿಧಿ ನನ್ನದಾಗಿರಲು
ಬಂದ ಮುರಳಿಯ ಒಮ್ಮೆ
ನೋಡದಾದೆಯಾ ಸಖಿ
ಕೊರಗದಿರು ನೋಯದಿರು
ವಿರಹದಲಿ ಬೇಯದಿರು
ವ್ಯರ್ಥವಾಗದ ಬಲಿದಾನ
ಅನಂತ ಪ್ರೇಮವದು ನಮ್ಮದು
-ಉಮೇಶ ಮುಂಡಳ್ಳಿ ಭಟ್ಕಳ
ರಾಧಾಕೃಷ್ಣರ ಪ್ರೇಮದಲ್ಲಿ ವಿರಹ ನಿರಂತರ.
ಹೌದಲ್ವಾ ಮೇಡಂ
ಚಂದದ ಕವನ
ವಿರಹದಲ್ಲೂ ಪ್ರೇಮ ಶಾಶ್ವತ