ಕೈ ತೊಳೆದು ಬನ್ನಿರೋ

Spread the love
Share Button

 

 

ಶಾಲೆಯಿಂಬ ಬಂದ ಮಗು ಸೀದಾ ಅಡುಗೆಮನೆಗೆ ಹೋಗಿ, ಡಬ್ಬದಿಂದ ಏನಾದಾರೂ ಕುರುಕಲು ತಿಂಡಿ ತೆಗೆದು ತಿನ್ನಲು ಹೊರಟಾಗ ಅಮ್ಮಂದಿರು ‘ಮೊದಲು ಕೈ ತೊಳೆದು ಬಾ’ ಎಂದು ಹೇಳುತ್ತಾರೆ. ಮಣ್ಣಿನಲ್ಲಿ ಆಟವಾಡಿದ ಮೇಲೆ ಹಾಗೂ ಶೌಚದ ನಂತರ ಸೋಪು ನೀರಿನಲ್ಲಿ ಕೈ ತೊಳೆಯಬೇಕು ಎಂಬುದನ್ನು ಚಿಕ್ಕಂದಿನಿಂದಲೇ ಕೇಳಿ ಬೆಳೆದಿರುತ್ತೇವೆ. ಕೈ ತೊಳೆದುಕೊಂಡು ಊಟಕ್ಕೆ ಕೂರಬೇಕು ಎಂಬುದು ಅಲಿಖಿತ ನಿಯಮ.ಕೈತೊಳೆಯಲು ಸಾಧ್ಯವಿದ್ದಲ್ಲಿ ಟಿಶ್ಯೂ ಪೇಪರ್ ನಲ್ಲಿ ಕೈ ಒರೆಸಿ ಅಥವಾ ಚಮಚದಲ್ಲಿ ಉಣ್ಣುವ ಪದ್ಧತಿ ಇಂದಿನ ಕಾಲದ ವ್ಯವಸ್ಥೆ. ಇನ್ನು ಈಗಿನ ಶಾಲಾ ಮಕ್ಕಳ ಬ್ಯಾಗ್ ನಲ್ಲಿ ಪುಟ್ಟ ಸ್ಯಾನಿಟೈಸರ್ ಇರಬೇಕೆಂದು ಕೆಲವು ಶಾಲೆಗಳಲ್ಲಿ ನಿಯಮವನ್ನು ರೂಪಿಸಿದ್ದಾರೆ. ಕೈಗಳನ್ನು ಸ್ವಚ್ಛಗೊಳಿಸುವುದರ ಜೊತೆಗೆ ಸೋಂಕುಕಾರಕ ರೋಗಾಣುಗಳಿಂದ ಮುಕ್ತಗೊಳಿಸುವುದು ಕೈತೊಳೆಯುವುದರ ಮೂಲ ಉದ್ದೇಶ. ವಿವಿಧ ಸುವಾಸನೆಯುಕ್ತ ಮಾರ್ಜಕಗಳಿಂದ ಕೈತೊಳೆದಾಗ ಸಿಗುವ ಆಹ್ಲಾದಕರ ಅನುಭವವೂ ಇನ್ನೊಂದು ಕಾರಣ.

ಮಕ್ಕಳಿಗೆ ಬರುವ ಡಯೋರಿಯಾ ಕಾಯಿಲೆಯನ್ನು ತಡೆಯಲು ಅತ್ಯಂತ ಸರಳ ಮತ್ತು ಮಿತವ್ಯಯಕಾರಿಯಾದ ವಿಧಾನ ಎಂದರೆ ಊಟಕ್ಕೆ ಮೊದಲು , ಸಾಕುಪ್ರಾಣಿಗಳೊಡನೆ ಆಟವಾಡಿದರೆ ಹಾಗೂ ಶೌಚದ ನಂತರ ಕೈಯನ್ನು ಶುಭ್ರವಾಗಿ ಸಾಬೂನು ಹಾಕಿ ತೊಳೆಯುವುದು. ಈ ಬಗ್ಗೆ ಹಲವಾರು ರಾಷ್ಟ್ರಗಳಲ್ಲಿ ಶಾಲಾಮಕ್ಕಳಿಗೆ ಕೈತೊಳೆಯುವ ಬಗ್ಗೆ ಅರಿವು ಮೂಡಿಸಿ, ಅವರು ಅದನ್ನು ಪಾಲಿಸಿದಾಗ ಡಯೋರಿಯಾದಿಂದ ಮರಣ ಹೊಂದುವ ಮಕ್ಕಳ ಸಂಖ್ಯೆಯಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ ಎಂದು ಅಧ್ಯಯನದ ವರದಿ ತಿಳಿಸುತ್ತದೆ.

ಕೈಯಲ್ಲಿ ಇರಬಹುದಾದ ರೋಗಾಣುಗಳಿಂದಾಗಿ ಮತ್ತು ಸ್ವಚ್ಛತೆಯ ಕೊರತೆಯಿಂದಾಗಿ ಮಕ್ಕಳಲ್ಲಿ ಉಂಟಾಗುವ ಸಾಂಕ್ರಾಮಿಕ ರೋಗಗಳ ಬಗ್ಗೆ ಅರಿವು ಮೂಡಿಸಲು 15 ಒಕ್ಟೋಬರ್ 2008 ರಲ್ಲಿ UN General Assembly ಆರಂಭಿಸಿದ ಅಭಿಯಾನ ‘ವಿಶ್ವ ಕೈ ತೊಳೆಯುವ ದಿನ’.  ಸಂಸ್ಥೆಯ ಸದಸ್ಯ ರಾಷ್ಟ್ರಗಳಲ್ಲಿ 70 ಕ್ಕೂ ಹೆಚ್ಚು ದೇಶಗಳು ಈ ಅಭಿಯಾನದಲ್ಲಿ ಪಾಲ್ಗೊಂಡವು. ಭಾರತವೂ ಅದರಲ್ಲಿ ಒಂದು.

2020 ರಲ್ಲಿ ಜಗತ್ತನ್ನೇ ಕಾಡುತ್ತಿರುವ ಕೋವಿಡ್ 19  ವೈರಸ್ ಸೋಂಕಿನಿಂದಾಗಿ ಕೈತೊಳೆಯುವಿಕೆಗೆ ಅತಿ ಪ್ರಾಮುಖ್ಯತೆ ಲಭಿಸಿದೆ.

– ಹೇಮಮಾಲಾ.ಬಿ

9 Responses

 1. Uday Kumar says:

  Suchitvave aarogya-bhaagya.

 2. Gp Mahesh says:

  yes right thing

 3. ಇ ಲೈಕ್ ಇಟ್

  I LIKED IT

 4. Savithri bhat says:

  ಸಕಾಲಿಕ ಬರಹ .ಚೆನ್ನಾಗಿದೆ

 5. ನಯನ ಬಜಕೂಡ್ಲು says:

  ಸಕಾಲಿಕ. ನನಗನ್ನಿಸುವ ಮಟ್ಟಿಗೆ ಪೇಟೆಗಳಲ್ಲಿ ಕೈ ತೊಳೆಯುವ ವಿಚಾರವಾಗಿ ಅರಿವು ಬಹಳಷ್ಟೇ ಇದೆ. ಹಳ್ಳಿಗಳಲ್ಲಿ ಈ ಕುರಿತಾಗಿ ಇನ್ನೂ ಹೆಚ್ಚಿನ ಗಮನ, ಅರಿವು ಮೂಡಬೇಕಾಗಿದೆ, ಯಾಕೆಂದರೆ ಮೊದಲಿನಂತೆ ಎಲ್ಲಿಯೂ ವಾತಾವರಣ ಪರಿಶುದ್ಧವಾಗಿಲ್ಲ, ಕಲುಷಿತ ಗೊಂಡಿದೆ, ಹಾಗಾಗಿ ಹೆಚ್ಚಿನ ಎಚ್ಚರ ಅಗತ್ಯ. ಚಂದದ ಲೇಖನ.

 6. Asha nooji says:

  Soooper

 7. ಬಿ.ಆರ್.ನಾಗರತ್ನ says:

  ಸಕಾಲಿಕ ಬರಹ ಅಭಿನಂದನೆಗಳು ಮೇಡಂ.

 8. ಶಂಕರಿ ಶರ್ಮ, ಪುತ್ತೂರು says:

  ಕೈ ತೊಳೆದೂ ತೊಳೆದೂ ಸಾಕಾಗಿ ಹೋಗಿದೆ ಎನ್ನಬಹುದೇನೋ.
  ಈಗಿನ ಮಹಾಮಾರಿಯಿಂದಾಗಿ! ಸಕಾಲಿಕ ಬರಹ ತುಂಬಾ ಚೆನ್ನಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: