ಹೆಣ್ಣೆಂದರೆ…
ಅಬ್ಬರದ ಐಸಿರವು ಹೆಣ್ಣಿನ ಜನ್ಮ
ಸದ್ದಿರದೆ ಸಹಿಸುವಳು ಕಷ್ಟಗಳ ಗುಮ್ಮ
ಹೆಣ್ಣನ್ನು ಅರಿಯುವುದು ಬಹು ಕಷ್ಟ ನಮಗೆ
ಅರಿತಷ್ಟು ಒಗಟವಳ ಮುಖದಲಿಹ ನಗೆ
ಮಗಳಾಗಿ ಮನತುಂಬಿ ಸತಿಯಾಗಿ ಮನೆತುಂಬಿ
ಮತಿಯಾಗಿ ಜಗತುಂಬಿ ಗತಿಗಾಗಿ ತೇಯುವಳು
ದುಃಖದಲಿ ನಗುವಾಗಿ ಸುಖದಲ್ಲಿ ನಲಿವಾಗಿ
ನಲಿವಲ್ಲಿ ಗೆಲುವಾಗಿ ಚೆಲುವ ಸೂಸುವಳು
ಹೆಣ್ಣೆಂದರೆ ಭಾವದ ಮುಗಿಲು
ಹೆಣ್ಣೆಂದರೆ ಆಳದ ಕಡಲು
ಅದೇಗೆ ಆಗಿಬಿಟ್ಟಳು ಹೆತ್ತವರ ದಿಗಿಲು
ಪಣತೊಡಬೇಕಿದೆ ನಾವು ಮಾಡನಿದ ಬದಲು
-ವಿದ್ಯಾಶ್ರೀ ಅಡೂರ್ ,ಉಜಿರೆ
Wo…. w . ಸುಂದರವಾಗಿದೆ.
ನಿಜ, ಹೆಣ್ಣು ಸುಲಭವಾಗಿ ಅರ್ಥವಾಗಲಾರಳು ಯಾರಿಗೂ.
ಧನ್ಯವಾದಗಳು ಮೇಡಂ
ಹೌದು..ಸಮಾಜದಲ್ಲಿ ಹೆಣ್ಣಿನ ಸ್ಥಾನ ಬದಲಾಗಬೇಕಾಗಿದೆ..ಸೊಗಸಾದ ಕವನ.
ಅದ್ಬುತವಾದ ಬರಹ…. ಆಳವಾದ ಅರ್ಥ….