ಬಾಳ ಪಯಣ

Share Button

ಜೀವನವೊಂದು ಯಾನ
ಸಾಗಿಹುದು ಬದುಕ ಪ್ರಯಾಣ
ಸಾಕಾಗಲಿ ಬೇಕಾಗಲಿ ನಿಲ್ಲದು
ನಿತ್ಯ ನಿರಂತರ ನಡೆವುದು||

ಕಷ್ಟ ಸುಖಗಳ ಜೊತೆಗೆ
ಹೆಗಲೇರಿದ ಹೊಣೆಯು ನಡಿಗೆಗೆ
ಹಳತು ಮರೆತು ಹೊಸತು ಹುಡುಕುತ
ಹೊರಳು ಹಾದಿಯಲಿ ಸಂಚಾರ ಶಾಶ್ವತ||

ನೆನಪ ಬೆಟ್ಟ ಗುಡ್ಡಗಳ ಹಿಂದಿಕ್ಕುತ
ಆಸೆ ಅಂಬರವ ಕಣ್ ತುಂಬುತ
ಆಕಸ್ಮಿಕ ತಿರುವುಗಳ ಎದುರಿಸಿ
ಮುನ್ನುಗ್ಗಿದೆ ಪಯಣ ಗುರಿಯ ಅರಸಿ||

ಒಂಟಿಯಾದರು ಸಾಗಬೇಕಿದೆ
ಎಲ್ಲ ಅಡೆತಡೆಗಳ ದಾಟಿ ಮುಂದೆ
ಕಾಡೊ ಕನಸ ನನಸಾಗಿಸಲು
ಇಂದು ಎಂದೂ ಪ್ರತಿ ಗಳಿಗೆಯಲು||

ಬಾಳ ಪಯಣ ಬದುಕೊವರೆಗೂ
ದಾರಿ ಇರುವುದು ಗುರಿಯವರೆಗೂ
ನಡೆಯುತಿರುವುದು ನಿತ್ಯ ನೂತನ
ಹಲವು ತಿರುವಿನೊಳೊಂದು ಜೀವನ||

– ಪ್ರತಿಭಾ ಪ್ರಶಾಂತ, ಬೆಂಗಳೂರು

3 Responses

  1. ನಯನ ಬಜಕೂಡ್ಲು says:

    ಬ್ಯೂಟಿಫುಲ್. ಬದುಕನ್ನು ಬದುಕಲು ಪ್ರೋತ್ಸಾಹ ತುಂಬುವಂತಹ ಸಾಲುಗಳು.

  2. ಬಿ.ಆರ್.ನಾಗರತ್ನ says:

    ಬದುಕಿನುದ್ದಕ್ಕೂ ನೆಡೆಯುವ ಅನಿವಾರ್ಯತೆಗಳ ವಿದ್ಯಾಮಾನಗಳ ಅನಾವರಣ.ಅಭಿನಂದನೆಗಳು.

  3. ಶಂಕರಿ ಶರ್ಮ, ಪುತ್ತೂರು says:

    ನಿಜ..ಬಾಳಬಂಡಿ ಎಳೆಯಬೇಕಿದೆ, ಗಮ್ಯ ತಲಪುವ ತನಕ. ಸೊಗಸಾದ ಕವನ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: