ಬೆಳಕು-ಬಳ್ಳಿ - ವಿಶೇಷ ದಿನ

ಸರ್.ಎಂ.ವಿ. ಸ್ಮರಣಾರ್ಥ ಹನಿಗವನಗಳು

Share Button

ಬೇಡಿಕೆಯ ಸಾಕಾರ;
..ತಿನ್ನಲು ಕೊಟ್ಟ ಉಂಡೆ ಗಂಟಲಲ್ಲಿ ಸಿಕ್ಕಿಕೊಂಡಾಗ
..ಮುದುಕಿ ನೀಡಿದ ಗುಟುಕು ನೀರು ಉಳಿಸಿತ್ತು ಅವನ ಜೀವ.
..ಅವಳದ್ದೊಂದು ಬೇಡಿಕೆ, ದೊಡ್ಡವನಾಗಿ ನೀಗಿಸೆಂದು
..ನೀರಿನ ಸಮಸ್ಯೆ. ಆಕೆ ಕಂಡಿದ್ದಳೇ ಮುಂದೆ ಅವನೇ ಆಗಿ
..ದೊಡ್ಡ ಇಂಜಿನಿಯರ್ ಜಲಾಶಯವೊಂದನ್ನು ನಿರ್ಮಿಸುವನೆಂದು.

ಬಲಿ;
  ಸಂಸ್ಥಾನ ಕಂಡ ಶ್ರೇಷ್ಠ ನಿರ್ಮಾಣ ರೂವಾರಿ ನೀವು
  ಯಂತ್ರ, ತಂತ್ರ, ಕೈಗಾರಿಕೆ, ಆಡಳಿತ ಎಲ್ಲ
  ರಂಗದಲ್ಲೂ ದಕ್ಷತೆಯ ಮೆರೆದು ಕೊನೆಗೆ
  ದಕ್ಷತೆಯ ಮಾನದಂಡ ಪ್ರತಿಪಾದಿಸಿ ಬಲಿಯಾದಿರಿ.

ಕೀರ್ತಿಶೇಷರು:
  ಗೆರೆ ಮುರಿಯದ ಸೂಟು ಬೂಟು
  ತಲೆಗೆ ಮುಕುಟದಂತೆ ಕಂಬಿಪೇಟ
  ಸಮಯ ಪ್ರಜ್ಞೆಯೇ ಪುರುಷರೂಪಾಗಿದ್ದು
  ಶತಾಯುಷಿಗಳಾಗಿ ಶತಶತಮಾನಗಳವರೆಗೆ
  ಚಿರಸ್ಮರಣೀಯ ಕೀರ್ತಿಶೇಷರಾದಿರಿ.

ಮಾದರಿ:
  ಧರ್ಮ ಅರ್ಥ ಕಾಮಗಳ ಸಮನ್ವಯತೆಯೇ
  ಮೋಕ್ಷಕ್ಕೆ ದಾರಿಯೆಂದು ಹೇಳಿದ್ದಾರೆ ಹಿರಿಯರು
  ಹೆಸರಿನ ಆರಂಭದಲ್ಲೇ ಮೋಕ್ಷ ಬಿರುದನ್ನು
  ಹೊಂದಿರುವ ನೀವು ಆದಿರಿ ಎಲ್ಲರಿಗೆ ಮಾದರಿ.

ನನಸು:
  ನೋಡಲೆರಡು ಕಣ್ಣು ಸಾಲವು ಸೊಬಗಿನ ಬೃಂದಾವನ
  ಅದರ ಹಿಂದಿದೆ ಭವ್ಯವಾದ ಕೃಷ್ಣರಾಜಸಾಗರ
  ಭದ್ರವಾದ ಅಣೆಕಟ್ಟೆ, ಸುಂದರ ತೋಟದ ಕಲ್ಪನೆ
  ಅಪೂರ್ವ,ಸರ್.ಎಂ.ವಿ. ಮತ್ತು ಮಿರ್ಜಾರ ಕನಸು.
  ನನಸಾಗಿ ನೋಡಲು ಬರುತ್ತಿದೆ ಜನಸಾಗರ.

ಅಂದು-ಇಂದು:
  ಅಂದು ಸರ್.ಎಂ.ವಿ.ರವರು ಸೂಕ್ಷ್ಮಗ್ರಹಣ
  ಶಕ್ತಿಯಿಂದ ಉಳಿಸಿದರು ಸಾವಿರಾರು ಜನರ ಬದುಕನ್ನು
  ಇಂದು ವಿಕೃತ ಮನಸ್ಸಿನವರು ತಮ್ಮ ದುಷ್ಟ
  ಶಕ್ತಿಗಳಿಂದ ಕಳೆಯುತ್ತಿದ್ದಾರೆ ಸಾವಿರಾರು ಜನರ ಜೀವಗಳನ್ನು.

ಕಾಯಕ:
  ಬತ್ತಿ ತೈಲದ ಬಂಧ ಕಡಿದುಕೊಳ್ಳುವವರೆಗೂ
  ಹಣತೆ ಉರಿಸಿಕೊಳ್ಳುತ್ತಲೇ ಇರುವಂತೆ
  ಕಾಯಕವೇ ಕ್ಯಲಾಸವೆಂದು ಅರಿತು ನಡೆದರು
  ಜೀವಿತದ ಬಂಧ ಕಡಿದುಕೊಳ್ಳುವವರೆಗೂ
  ಮಹಾನುಭಾವ ಸರ್.ಎಂ.ವಿ ರವರು.

-ಬಿ.ಆರ್.ನಾಗರತ್ನ. ಮೈಸೂರು.

5 Comments on “ಸರ್.ಎಂ.ವಿ. ಸ್ಮರಣಾರ್ಥ ಹನಿಗವನಗಳು

  1. ಸುಂದರವಾಗಿದೆ. ಒಬ್ಬ ಮೇರು ವ್ಯಕ್ತಿತ್ವದ ವ್ಯಕ್ತಿಯ ಬಗೆಗಿನ ಚಿತ್ರಣ ಕವಿತೆಯ ರೂಪದಲ್ಲಿ. ನೈಸ್

  2. ಮೇರು ವ್ಯಕ್ತಿತ್ವದ ಸರ್.ಎಂ..ವಿ, ಅವರ ಅಗಾಧ ಪ್ರತಿಭೆಯ ಸಂಕ್ಷಿಪ್ತ ಚಿತ್ರಣ. ಸೊಗಸಾಗಿದೆ. ಅಭಿನಂದನೆಗಳು.

  3. ನನ್ನ ಬರಹಕ್ಕೆ ತಮ್ಮ ಅಭಿಪ್ರಾಯ ತಿಳಿಸಿ ಪ್ರೋತ್ಸಾಹಿಸಿ ದ ಎಲ್ಲರಿಗೂ ಧನ್ಯವಾದಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *