ಬೆಳಕು-ಬಳ್ಳಿ

ಒಲವ ತೇರು

Share Button

 

ಒಲವ ತೇರನು ಏರಿ ಹಾಡುವ
ಚೆಲುವ ಬಾಳಿನ ರಾಗವ
ಅಲರು ಕಂಪಿನ ವನದಿ ಕೇಳುವ
ಉಲಿವ ಕೊಗಿಲೆ ಗಾನವ||

ಮಧುರ ಕಾವ್ಯಕೆ ನವಿಲ ನರ್ತನ
ಮುದವು ಮೊಗೆವ ಸಿಂಚನ
ಹೃದಯ ಬೆಸೆದ ಪ್ರೇಮ ಮಿಲನ
ಪದಪು ಜಿನುಗಿದ ಸೇಚನ||

ಕನಸು ಕಾಣುತ ಬಾಳಪಯಣವ
ಮನವ ಸೇರಿಸಿ ನಡೆಯುವ
ಮುನಿಸು ತೋರದೆ ಗುರಿಯ ಸೇರುವ
ಮನಸು ಬೆಸೆಯುವ ಬಂಧವ||

ಭಾವಯಾನದಿ ತೇಲಿ ಸಾಗುವ
ಜೀವನೌಕೆಯ ನೇರುವ
ನೋವು ನಲಿವಿನ ಪ್ರೇಮಬಂಧವ
ಹೂವಿನಂದದಿ ಬೆಸೆಯುವ||

-ಪದ್ಮಾ ಆಚಾರ್ಯ, ಪುತ್ತೂರು

2 Comments on “ಒಲವ ತೇರು

  1. ಒಲವ ತೇರು, ಸಾಗಿದ ಪರಿ ಸೊಗಸಾಗಿದೆ.

  2. ಭಾವಯಾನದಿ ಜೀವನ ನೌಕೆಯು ತೇಲಿ ಸಾಗುವ ಪರಿ ತುಂಬಾ ಸೊಗಸಾಗಿದೆ. ಚಂದದ ಕವನ..ಅಭಿನಂದನೆಗಳು ಪದ್ಮಾ ಮೇಡಂ.

Leave a Reply to ನಯನ ಬಜಕೂಡ್ಲು Cancel reply

 Click this button or press Ctrl+G to toggle between Kannada and English

Your email address will not be published. Required fields are marked *