ನನ್ನ ಕಾಡಿದ ಸಾಂಗತ್ಯ
ಸಾಂಗತ್ಯ ಇದು ಕನ್ನಡ ಸಾಹಿತ್ಯ ಛಂದೋಪ್ರಕಾರಗಳಲ್ಲಿ ಒಂದು.ಇದು ನಾಲ್ಕು ಸಾಲಿನ ಪದ್ಯವಾಗಿರುತ್ತದೆ. ಸಾಂಗತ್ಯ ಎಂ.ಎ ತರಗತಿಯ ಪಠ್ಯವಾಗಿ ನಮಗೆ ಬಂದಿದೆ. ಈ ಸಾಂಗತ್ಯ ನನ್ನನ್ನು ಹೇಗೆ ಕಾಡಿತು ಅಂದರೆ? ಸೋಮವಾರ ಸರ್ ಕ್ಲಾಸ್ ತೆಗೆದುಕೊಂಡಿದ್ದರು .ಅವತ್ತಿನ ಕ್ಲಾಸ್ ಸಾಂಗತ್ಯದ್ದು.ಮೊದಲೇ ಹೇಳಿದ ಹಾಗೆ ನಾಲ್ಕು ಸಾಲಿನ ಪದ್ಯಕ್ಕೆ ಪ್ರಸ್ತಾರ ಹಾಕಬೇಕು. {ಗುರುಲಘು} ನೆನಪಿನಲ್ಲಿಟ್ಟುಕೊಂಡು ಪರೀಕ್ಷೆ ಬರೆಯಬೇಕು . ಸರ್ ಕ್ಲಾಸ್ಸಿನಲ್ಲಿ. ಒಂದು ಪದ್ಯಕ್ಕೆ ಪ್ರಸ್ತಾರ ಹಾಕಿ ತೋರಿಸಿದರು. ಮತ್ತೊಂದು ಪದ್ಯಕ್ಕೆ ಪ್ರಸ್ತಾರ ಹಾಕಿ ಎಂದರು .ನಾವು ಎಲ್ಲರೂ ಪ್ರಸ್ತಾರ ಹಾಕಿದೆವು .ಎಲ್ಲರೂ ಸರಿ ಬಂತು ಅಂದರು ನಾನು ಹಾಗೆ ಹೇಳಿದೆ .ನಾವು ಎಲ್ಲರೂ ಎರಡು ಸಾಲಿಗೆ ಮಾತ್ರ ಪ್ರಸ್ತಾರ ಹಾಕಿದ್ದೆವು .ಮುಂದಿನ ಎರಡು ಸಾಲು ಅದೇ ತರ ಅಂತ ಹೇಳಿ ಸರ್ ಮುಂದಿನ ಪಾಠಕ್ಕೆ ಹೋದರು .ಅಲ್ಲಿಗೆ ಸಾಂಗತ್ಯದ ಕ್ಲಾಸ್ ಮುಗಿದಿತ್ತು . ಗುರುವಾರ ನೋಟ್ಸ್ ಮಾಡಲು ಕುಳಿತು ಕೊಂಡೆ.
ಸಾಂಗತ್ಯದ ಪದ್ಯ ಬರೆದು ಪ್ರಸ್ತಾರ ಹಾಕಬೇಕಲ್ಲ .ಏನೋ ಗೊಂದಲ ಶುರುವಾಯಿತು .ಎಷ್ಟು ಸಲ ಪ್ರಸ್ತಾರ ಹಾಕಿದರೂ ಸರಿ ಬರುತ್ತಿಲ್ಲ. {ಇದು ನನ್ನ ಅನಿಸಿಕೆ ಯಾಗಿತ್ತು.} ಆಗ ನನಗೆ ನೆನಪಾದವರೂ ನನ್ನ ಉಳಿದ ಸಹಪಾಠಿಗಳು. ಅವರಿಗೆ ಫೋನ್ ಮಾಡಿದೆ ಮಾತುಕತೆ ಮುಗಿದ ಮೇಲೆ ಅವರು ವಾಟ್ಸ್ ಪ ಮೂಲಕ ಕಳುಹಿಸಿದರು .ಆದರೆ ಅವರು ಪ್ರಸ್ತಾರವೇ ಹಾಕಿರಲಿಲ್ಲ’ ಮತ್ತೊಬ್ಬಳ್ಳನ್ನು ಕೇಳೋಣವೆಂದರೆ ಅವಳ ಮನೆಯಲ್ಲಿ ಕಾರ್ಯಕ್ರಮವಿತ್ತು . ನನ್ನನ್ನು ಎಷ್ಟು ಕಾಡುತ್ತಿತ್ತು ಅಂದರೆ ಕುಳಿತರೆ, ನಿಂತರೆ , ಮಲಗಿದರೂ ಸಾಂಗತ್ಯವೇ ಕಣ್ಣಮುಂದೆ ಬಂದು ನಿಲ್ಲುತ್ತಿತ್ತು ಆ ದಿನ ಹೇಗೋ ಕಳೆದೆ . ಮರುದಿನ ಮತ್ತೊಂದು ಗೆಳತಿಗೆ ಕೇಳಿದೆ . ನನಗೆ ಉತ್ತರ ಬೇಕೇಬೇಕಾಗಿತ್ತು ಅವಳು ಆಗಲೇ ಸರ್ ಗೆ ಬರೆದು ತೋರಿಸಿದ್ದಳು. ಅದು ನನಗೆ ಗೊತ್ತಿತ್ತು . ಅವಳನ್ನುಕೇಳಿದಾಗ ಹೌದು ಸರ್ ಗೆ ತೋರಿಸಿದ್ದೇನೆ ಅವರು ನೋಡಿ ಸರಿ ಇದೆ ಎಂದು ಹೇಳಿದ್ದಾರೆ .ಆದರೂ ನಾನು ಒಂದು ಸಲ ನಿನಗೆ ನೋಡಿ ಕಳುಹಿಸುತ್ತೇನೆ ಎಂದಳು ನಾನು ಸರಿ ಎಂದೆ. ಯಾಕೆ ಎಲ್ಲರ ಹತ್ತಿರ ಕೇಳುತ್ತಿದ್ದೇನೆ? ಅನಿಸಿತು.
ಹಾಗೆಯೇ ಮೆಸೇಜಿನ ಮೂಲಕ ಕಳಿಸುವದು ಬೇಡ ಗೊತ್ತಾಯಿತು ಅಂತ ಸುಳ್ಳು ಹೇಳಿದೆ .ಆದರೆ ತಲೆಯಲ್ಲಿ ಹುಳ ಬಿಟ್ಟ ಹಾಗೆ ಕೊರೆಯುತ್ತಿತ್ತು . ನೋಡೋಣ ಏನಾದರು ತಪ್ಪು ಇದ್ದರೂ ಸರ್ ಹೇಳುತ್ತಾರಲ್ಲ ಅಂತ ಗಟ್ಟಿಮನಸ್ಸು ಮಾಡಿ ನೋಟ್ಸ್ ಬರೆದು ಮುಗಿಸಿದೆ. ಮತ್ತೆ ಏನೋ ಅಳುಕು ತಪ್ಪಿದ್ದರೆ ?ಸೋಮವಾರ ಸರ್ ಗೆ ಕೊಟ್ಟೆ .ಅವರು ಎರಡು ದಿನದಲ್ಲಿ ಕೊಟ್ಟರು .ಏನು ಹೇಳಲಿಲ್ಲ ನನಗೆ ಆಶ್ಚರ್ಯ, ಕುತೂಹಲ ಎರಡು ಉಂಟಾಗಿ ಪೇಪರ್ ತೆಗೆದು ನೋಡಿದೆ .ನನ್ನ ಇಷ್ಟು ಕಾಡಿದ ಸಾಂಗತ್ಯ ಪ್ರಸ್ತಾರದಲ್ಲಿ ಆರಾಮಾಗಿ ಕುಳಿತ್ತಿತ್ತು .ನನ್ನ ಇಷ್ಟು ಕಾಡಿದೆ ಅಲ್ವಾ ನಿನ್ನನ್ನು ಮಾಡುತ್ತೇನೆ. ಎಂದು ಬೈದೆ . ಹಾಗೆಯೇ ಸ್ವಲ್ಪ ದಿನಕ್ಕೆ ಪರೀಕ್ಷೆ ಬಂತು. ಸಾಂಗತ್ಯದ ಪ್ರಶ್ನೆಯೂ ಬಂದಿತು. ಎಷ್ಟು ಚೆಂದ ಬರದೇ ಅಂದರೆ ಹದಿನೈದಕ್ಕೆ ಹದಿನಾಲ್ಕು ಮಾರ್ಕ್ಸ್ ಬಂತು. ನನ್ನ ಮಾರ್ಕ್ಸ್ ಅನ್ನೂ ಹೆಚ್ಚಿಗೆ ಮಾಡಿತ್ತು ಕಾಡಿದಕ್ಕೋ ಏನೋ ಸಾಂಗತ್ಯದ ಪದ್ಯ ಈಗಲೂ ನನ್ನ ಬಾಯಲ್ಲಿ ನಲಿದಾಡುತ್ತಿದೆ .
-ಡಾ.ಶಾಂತಲಾ, ಮುಂಬೈ
ಚೆನ್ನಾಗಿದೆ.
SUPER ಬರಹ
ಸಾಂಗತ್ಯದ ಸಂಗತಿ ನಿಮ್ಮನ್ನು ಕಾಡಿದಂತೆ, ಓದಿದ ಮೇಲೆ ನನ್ನನ್ನೂ ಕಾಡಿತು. ಬರಹದೊಂದಿಗೆ ನಿಮ್ಮ ಒಂದು ಸಾಂಗತ್ಯವನ್ನೂ ಸೇರಿಸಿದ್ದರೆ ಇನ್ನೂ ಚೆನ್ನಾಗಿತ್ತು. ಚಂದದ ಬರಹ.