‘ಬಹು ಕೆಡುಕೆನಿಸುತ್ತಿದೆ’
‘
ಕಾದ ಬಂಡೆಯ ಮೇಲೆ
ಭೋರ್ಗರೆದು ವಿಫಲವಾದ
ಮಳೆ ಹನಿಗಳ ನೆನೆದು
ವೃಥಾ ಕಳೆದ ಗಡಿಯಾರದ
ಮುಳ್ಳುಗಳ ಚಲನೆಯ
ಪ್ರತಿ ಕ್ಷಣಗಳ ನೆನೆದು
ಸೊಗಸು ನೋಟ ಕಾಣದ
ಇಂಪು ದನಿಯ ಕೇಳದ
ಇಂದ್ರಿಯಗಳ ನೆನೆದು
ಒಂದು ಹಿತವನು ಆಡದಿದ್ದ
ನಾಲಗೆಯ ಬೀಸು
ನುಡಿಗಳ ನೆನೆದು
ಸರಿ ದಾರಿಯಲಿ ನಡೆಯದೇ
ತಪ್ಪು ಹೆಜ್ಜೆ ಹಾಕಿದ
ಕಾಲುಗಳ ನೆನೆದು
ಮನ ಸಂತೈಸಿಕೋ ಎಂಬ
ಹಿತವಚನ ಮರೆತು
ದುಮ್ಮಾನಗೊಂಡ ಎದೆ ನೆನೆದು
ಸೂರ್ಯ ರಶ್ಮಿಗೂ ಚಂದಿರನ
ತಂಪಿಗೂ ಅರಳಿ
ನಲಿಯದ ಹೂಗಳ ನೆನೆದು
ಮತ್ತೇಕೆ ಈ ಜೀವ ಎಂಬ ನಿರ್ಜೀವ
ಭಾವದಲಿ ವ್ಯರ್ಥ ಮಾಡಿಕೊಂಡ
ಬದುಕುಗಳ ನೆನೆ ನೆನೆದು..
– ವಸುಂಧರಾ ಕದಲೂರು
ಅರ್ಥಪೂರ್ಣ ಕವನ
Beautiful. ಬದುಕು ದೊರೆತಿದೆ ಎಂದಾದ ಮೇಲೆ ಅದನ್ನು ಸಾರ್ಥಕ ಪಡಿಸಿಕೊಳ್ಳಬೇಕು ಅನ್ನುವ ಸಂದೇಶವಿದೆ ಕೊನೆಯಲ್ಲಿ
‘ಇರುವುದೆಲ್ಲವ ಬಿಟ್ಟು ಇರದಿರುವುದರ ಕಡೆಗೆ ತುಡಿವ ಮನ’..ನೆನಪಾಯಿತು. ಚೆಂದದ ಕವನ.
SUPER
ಜೀವನ ವನ್ನು ಬದುಕುವುದೇ ಬೇರೆ,ಅನುಭವಿಸುವುದೇ ಬೇರೆ. ಕೆಲವರಿಗೆ ಮನಸ್ಥಿತಿಯ ಅಭಾವ ವಾದರೆ ಇನ್ನೂ ಕೆಲವರಿಗೆ ಪರಿಸ್ಥಿತಿ ಯ ಅಭಾವ. ಚೆನ್ನಾಗಿ ಬರೆದಿದ್ದೀರಿ ಮೇಡಂ.
ಚಂದದ ಕವನ. ಇರುವುದರ ಬಗ್ಗೆ ಗಮನವೀಯದೆ, ಇಲ್ಲದುದರ ಬಗ್ಗೆ ತುಡಿಯುವ ಮನವೇ ದುಃಖಕ್ಕೆ ಮೂಲ..